ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 40 ಪುಟಗಳ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ! ದಾಂಪತ್ಯ ಕಲಹದ ಶಂಕೆ

ಅತುಲ್ ಸಂಗಾತಿ ದಾಖಲಿಸುವ ಸುಳ್ಳು ಕೇಸ್ ಗಳ ಸಂತ್ರಸ್ತರಿಗೆ ನೆರವಾಗುವ 'ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್' ಎಂಬ ಎನ್ ಜಿಒ ವೊಂದರ ಸದಸ್ಯನಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಎರಡು ದಿನಗಳ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು, ಸಾಯುವ ಮೊದಲು ತಾನು ಏನೆಲ್ಲಾ ಮಾಡಬೇಕೆಂದು ಮೂರು ಶೀರ್ಷಿಕೆಗಳಲ್ಲಿ ಬರೆದಿಟ್ಟಿದ್ದಾರೆ.

ಬೆಂಗಳೂರು: ಸುಮಾರು 40 ಪುಟಗಳ ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಜುನಾಥ ಲೇಔಟ್ ನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೃತನನ್ನು ಉತ್ತರ ಪ್ರದೇಶ ನಿವಾಸಿ ಅತುಲ್ ಸುಭಾಷ್ ಎಂದು ಗುರುತಿಸಲಾಗಿದೆ. ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ವಾಸಿಸುತ್ತಿದ್ದ ಸುಭಾಷ್ ವಿರುದ್ಧ ಆತನ ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ದಾಖಲಿಸಿದ್ದರು. ಇದರಿಂದ ಮನನೊಂದು ಆತ ಸಾವನ್ನಪ್ಪಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅತುಲ್ ಸಂಗಾತಿ ದಾಖಲಿಸುವ ಸುಳ್ಳು ಕೇಸ್ ಗಳ ಸಂತ್ರಸ್ತರಿಗೆ ನೆರವಾಗುವ 'ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್' ಎಂಬ ಎನ್ ಜಿಒ ವೊಂದರ ಸದಸ್ಯನಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಎರಡು ದಿನಗಳ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು, ಸಾಯುವ ಮುನ್ನಾ ತಾನು ಏನೆಲ್ಲಾ ಮಾಡಬೇಕೆಂದು ಮೂರು ಶೀರ್ಷಿಕೆಗಳಲ್ಲಿ ಬರೆದಿಟ್ಟಿದ್ದಾರೆ.

ಸಾಯುವ ಮುನ್ನಾ ಹೇಗೆ ಏನು ಮಾಡಬೇಕು ಎಂಬ ಮೊದಲ ಶೀರ್ಷಿಕೆಯಲ್ಲಿ ಸ್ನಾನ ಮಾಡಿ, ಬಾಗಿಲು ತೆಗೆದು, ಗೇಟ್ ಲಾಕ್ ಮಾಡಬೇಕು. 100 ಬಾರಿ ಶಿವನ ನಾಮ ಸ್ಮರಣೆ ಮಾಡಬೇಕು. ಕಾರು ಮತ್ತು ಬೈಕ್ ನ ಕೀಗಳನ್ನು ಫ್ರೀಡ್ಜ್ ಮೇಲೆ ಇಡಬೇಕು. ಟೇಬಲ್ ಮೇಲೆ ಸೂಸೈಡ್ ನೋಟ್ ಇಡಬೇಕು. ಅದನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್, ಆಫೀಸ್ ಮತ್ತು ಕುಟುಂಬಕ್ಕೆ ಕಳುಹಿಸಬೇಕು ಎಂದು ಬರೆದಿದ್ದಾರೆ.

2ನೇ ಹೆಡ್ಡಿಂಗ್ ನಲ್ಲಿ "ಸಾಯುವ ಒಂದು ದಿನ ಮುಂಚಿತವಾಗಿ ಏನು ಮಾಡಬೇಕು ಎಂಬುದನ್ನು ಬರೆದಿಟ್ಟಿದ್ದಾರೆ. ಅದರಲ್ಲಿ ಎಲ್ಲಾ ಹಣಕಾಸಿನ ವಿಷಯಗಳನ್ನು ಬಗೆಹರಿಸಿಕೊಳ್ಳಬೇಕು. ಎಲ್ಲಾ ಸಂವಹನ ಮತ್ತು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಬೇಕು, ಕಾನೂನು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು, ಅಗತ್ಯ ದಾಖಲೆ ಪ್ಯಾಕಿಂಗ್ ಮಾಡಿಕೊಂಡು ಅಂತಿಮ ದಿನಕ್ಕೆ ಸಜ್ಜಾಗಬೇಕು ಎಂದು ಬರೆದಿದ್ದಾರೆ.

ಅಂತಿಮ ದಿನ" ಎಂಬ ಮೂರನೇ ಶೀರ್ಷಿಕೆಯಲ್ಲಿ, ವೀಡಿಯೊ ನೋಟ್ ಅಪ್ ಲೋಡ್ ಮಾಡಬೇಕು. ಮೊಬೈಲ್ ಫೋನ್‌ಗಳಿಂದ ಪಿಂಗರ್ ಫ್ರೀಂಟ್ಸ್ ಮತ್ತು ಮುಖ ಗುರುತಿಸುವಿಕೆಯ ಡೇಟಾವನ್ನು ಅಳಿಸಬೇಕು. ಲ್ಯಾಪ್‌ಟಾಪ್, ಚಾರ್ಜರ್ ಮತ್ತು ಐಡಿಯನ್ನು ಕಚೇರಿಗೆ ಹಿಂತಿರುಗಿಸುವುದು ಮತ್ತು 'ಡೆತ್ ನೋಟ್'ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ನೇಣು ಹಾಕಿಕೊಳ್ಳುವ ಮುನ್ನಾ ಎಲ್ಲಾ ಪಾವತಿಗಳನ್ನು ಪೂರ್ಣಗೊಳಿಸೇಕು ಎಂದು ಅವರು ಬರೆದಿದ್ದಾರೆ. ಅತುಲ್ "ನ್ಯಾಯ ಬಾಕಿ" ಎಂಬ ಬೋರ್ಡನ್ನು ನೇತು ಹಾಕಿದ್ದರು ಎಂದು ಪೊಲೀಸ್ ವರದಿಗಳು ಹೇಳಿವೆ.

ಭಾನುವಾರ ತಡರಾತ್ರಿ ಅವರು ಕೆಲಸ ಮಾಡುತ್ತಿದ್ದ "ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್" ಎಂಬ ಎನ್‌ಜಿಒದ ವಾಟ್ಸಾಪ್ ಗುಂಪಿನೊಂದಿಗೆ ಸೂಸೈಡ್ ನೋಟ್ ಹಂಚಿಕೊಂಡಿದ್ದು, ಸಾಧ್ಯವಾದರೆ ತಮ್ಮ ಕುಟುಂಬವನ್ನು ಬೆಂಬಲಿಸುವಂತೆ ಸದಸ್ಯರನ್ನು ವಿನಂತಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Russia-Ukraine War: ರಷ್ಯಾ ದಾಳಿಯಿಂದ ಶಿಶು ಸೇರಿದಂತೆ ನಾಲ್ವರು ಸಾವು,18 ಮಂದಿಗೆ ಗಾಯ, ಪ್ರತೀಕಾರವಾಗಿ ಉಕ್ರೇನ್ ಮಾಡಿದ್ದೇನು?

ಹೋಗಿ ಮೋದಿ, ಶಾ ಹತ್ತಿರ ಕೇಳು: ಕಷ್ಟ ಹೇಳಲು ಬಂದಿದ್ದ ಯುವ ರೈತನ ವಿರುದ್ಧ ಖರ್ಗೆ ಆಕ್ರೋಶ!

ಹೆಸರಘಟ್ಟದಲ್ಲಿ ಕ್ವಾಂಟಮ್-ಸಿಟಿ ನಿರ್ಮಾಣಕ್ಕೆ 6.17 ಎಕರೆ ಭೂಮಿ ಮಂಜೂರು: ಸಚಿವ ಎನ್ಎಸ್ ಬೋಸರಾಜು

ನಡು ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹುಚ್ಚಾಟ: ಯುವಕನಿಗೆ ಸಿಕ್ತು 'Police Special Treatment' , Video

'ಮತಗಳ್ಳತನ' ವಿಷಯದಲ್ಲಿ ಚುನಾವಣಾ ಆಯೋಗ ನಿರ್ಣಾಯಕ ಮಾಹಿತಿಯನ್ನು ಮರೆಮಾಚಿದೆ: ಮಲ್ಲಿಕಾರ್ಜುನ ಖರ್ಗೆ

SCROLL FOR NEXT