ಅಪಘಾತಕ್ಕೀಡಾದ ಕಾರು  
ರಾಜ್ಯ

ಮಳವಳ್ಳಿಯಲ್ಲಿ ಭೀಕರ ಅಪಘಾತ: ಮೂವರು ವಿದ್ಯಾರ್ಥಿಗಳು ಸಾವು, ಓರ್ವನಿಗೆ ಗಾಯ

ವಿದ್ಯಾರ್ಥಿಗಳು ಬೆಂಗಳೂರಿನಿಂದ ಮೈಸೂರು ಜಿಲ್ಲೆಯ ತಲಕಾಡು ಪ್ರವಾಸಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಎಸ್​ಆರ್​ಟಿಸಿ ಬಸ್​ ಓವರ್​​​ಟೇಕ್ ಮಾಡಿ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ: ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಭೀಕರ ಅಪಘಾತ ಸಂಭವಿಸಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನ ಪ್ರಣವ್, ಆಕಾಶ್, ಆದರ್ಶ ಮೃತ ದುರ್ದೈವಿಗಳು. ಮತ್ತೊರ್ವ ವಿದ್ಯಾರ್ಥಿ ಪೃಥ್ವಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳು ಬೆಂಗಳೂರಿನಿಂದ ಮೈಸೂರು ಜಿಲ್ಲೆಯ ತಲಕಾಡು ಪ್ರವಾಸಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಎಸ್​ಆರ್​ಟಿಸಿ ಬಸ್​ ಓವರ್​​​ಟೇಕ್ ಮಾಡಿ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವನಿಗೆ ಗಾಯವಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ: ಹಾರ್ದಿಕ್ ಪಾಂಡ್ಯಗೆ ಮಹಿಕಾ ಕೊಟ್ಟ 'ಸ್ಪೆಷಲ್ ಗಿಫ್ಟ್' ಏನು ಗೊತ್ತಾ? Video

ವಿಜಯ್ ಗೆ ಜನರಿಗೆ ಸಹಾಯ ಮಾಡುವ ಉದ್ದೇಶ ಇಲ್ಲ: ಸಿಂಪಲ್ ಆಗಿ ಸಿಎಂ ಆಗುವ ಬಯಕೆ- ಡಿಎಂಕೆ ತಿರುಗೇಟು

5,000 ಕೊಟ್ಟರೂ ತಗೋಳಿ, ಆದರೆ ಅವರಿಗೆ ಶಿಳ್ಳೆ ಹೊಡೆದು ಹೇಳಿ': DMK ವಿರುದ್ಧ TVK ಮುಖ್ಯಸ್ಥ ವಿಜಯ್ ವಾಗ್ದಾಳಿ

SCROLL FOR NEXT