ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ online desk
ರಾಜ್ಯ

ಮಂಗಳೂರು: 20 ಲಕ್ಷ ರೂ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕ; ಹುಡುಕಿಕೊಟ್ಟ CISF ಸಿಬ್ಬಂದಿ ಕೆಲಸಕ್ಕೆ ಭಾರಿ ಮೆಚ್ಚುಗೆ

ಬ್ಯಾಗ್ ನಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮತ್ತು 1 ಲಕ್ಷ ರೂಪಾಯಿ ನಗದು ಇತ್ತು ಎಂದು ತಿಳಿದುಬಂದಿದೆ.

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಮರಳಿ ಪಡೆದಿದ್ದಾರೆ.

ಬ್ಯಾಗ್ ನಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮತ್ತು 1 ಲಕ್ಷ ರೂಪಾಯಿ ನಗದು ಇತ್ತು ಎಂದು ತಿಳಿದುಬಂದಿದೆ.

ಆಗಮನ ಪ್ರದೇಶದ ನೆಲಮಹಡಿಯಲ್ಲಿರುವ ಆಹಾರ ಮತ್ತು ಪಾನೀಯ ಮಳಿಗೆಯಲ್ಲಿ ಅಜಾಗರೂಕತೆಯಿಂದ ಬಿಟ್ಟು ಹೋಗಿದ್ದ ಬ್ಯಾಗ್ ನ್ನು ಕಂಡ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ತ್ವರಿತವಾಗಿ ಅದನ್ನು ತೆಗೆದಿರಿಸಿದ್ದರು.

ಗಮನಿಸದ ಬ್ಯಾಗ್ ನ್ನು ಪತ್ತೆಹಚ್ಚಿದ ನಂತರ, ತಂಡ ಮುಂದಿನ ಕ್ರಮಕ್ಕಾಗಿ ಟರ್ಮಿನಲ್ ವ್ಯವಸ್ಥಾಪಕರ ಕಚೇರಿಗೆ ಅದನ್ನು ವರ್ಗಾವಣೆ ಮಾಡಿತ್ತು. ಇದಷ್ಟೇ ಅಲ್ಲದೇ ತಂಡ ಅದರ ಮಾಲೀಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಬ್ಯಾಗ್‌ನೊಳಗೆ ಕಂಡುಬಂದ ಮೊಬೈಲ್ ಫೋನ್‌ನಲ್ಲಿ ಕರೆಗಾಗಿ ಕಾಯುತ್ತಿತ್ತು. ಒಮ್ಮೆ ಬ್ಯಾಗ್ ನ ಮಾಲಿಕ ಸಂಪರ್ಕಿಸಿದಾಗ, ಈಗಾಗಲೇ ಉಡುಪಿಗೆ ಸುಮಾರು 50 ಕಿಲೋಮೀಟರ್ ಪ್ರಯಾಣಿಸಿದ ಪ್ರಯಾಣಿಕನಿಗೆ ಆತನ ವಸ್ತುಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಲಾಯಿತು.

ಪ್ರಯಾಣಿಕರು ತಕ್ಷಣವೇ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದರು ಮತ್ತು ಎಲ್ಲಾ ವಸ್ತುಗಳು ಹಾಗೇ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. ಈ ಘಟನೆಯಿಂದ CISF ಮತ್ತು ವಿಮಾನ ನಿಲ್ದಾಣದ ಟರ್ಮಿನಲ್ ತಂಡದ ಸಹಯೋಗದ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

SCROLL FOR NEXT