ಸಾಂದರ್ಭಿಕ ಚಿತ್ರ  
ರಾಜ್ಯ

ಶೇ.70ರಷ್ಟು ರಸ್ತೆ ಅಪಘಾತಗಳು ರಾತ್ರಿ ವೇಳೆ ಸಂಭವಿಸುತ್ತವೆ: ಬೆಂಗಳೂರು ಡಿಸಿಪಿ ಶಿವಪ್ರಕಾಶ್ ದೇವರಾಜು

ಈ ವರ್ಷ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದಿವೆ, ಇಲ್ಲಿ 224 ಅಪಘಾತಗಳು ದಾಖಲಾಗಿವೆ.

ಬೆಂಗಳೂರು: ಐಟಿ ಸಿಟಿ ಬೆಂಗಳುೂರು ನಗರದಲ್ಲಿ ನವೆಂಬರ್ ತಿಂಗಳವರೆಗೆ ಪ್ರತಿದಿನವೆಂಬಂತೆ ಸರಾಸರಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ. ಈ ಅಪಘಾತಗಳಲ್ಲಿ ಸುಮಾರು ಶೇಕಡಾ 70ರಷ್ಟು ಅಪಘಾತಗಳು ರಾತ್ರಿ ಹೊತ್ತಿನಲ್ಲಿ ಸಂಭವಿಸಿದೆ, ಅತಿಯಾದ ವೇಗ, ರಸ್ತೆ ಸ್ಪಷ್ಟವಾಗಿ ಗೋಚರವಾಗದಿರುವುದು, ಚಾಲನಾ ಕೌಶಲ್ಯದ ಕೊರತೆ ಮತ್ತು ಅಸಮರ್ಪಕ ಮೂಲಸೌಕರ್ಯ ಅಪಘಾತ ಹೆಚ್ಚುತ್ತಿರುವುದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

ನವೆಂಬರ್ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ, 780 ಮಾರಣಾಂತಿಕ ಅಪಘಾತಗಳು ವರದಿಯಾಗಿದ್ದು, 802 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, 3,571 ಮಾರಣಾಂತಿಕವಲ್ಲದ ಅಪಘಾತಗಳಲ್ಲಿ 3,685 ಜನರು ಗಾಯಗೊಂಡಿದ್ದಾರೆ. 2023 ರಲ್ಲಿ, 882 ಮಾರಣಾಂತಿಕ ಅಪಘಾತಗಳು ಮತ್ತು 4,092 ಮಾರಣಾಂತಿಕವಲ್ಲದ ಅಪಘಾತಗಳು ವರದಿಯಾಗಿವೆ.

ಈ ವರ್ಷ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದಿವೆ, ಇಲ್ಲಿ 224 ಅಪಘಾತಗಳು ದಾಖಲಾಗಿವೆ. ಇದರ ಪರಿಣಾಮವಾಗಿ 53 ಸಾವುಗಳು ಮತ್ತು 230 ಗಾಯಗಳು ಸಂಭವಿಸಿವೆ. ಇದಾದ ನಂತರ ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು 222 ಪ್ರಕರಣಗಳು ವರದಿಯಾಗಿವೆ.

ಉಪ ಪೊಲೀಸ್ ಆಯುಕ್ತ (ಸಂಚಾರ-ದಕ್ಷಿಣ ವಿಭಾಗ) ಶಿವಪ್ರಕಾಶ ದೇವರಾಜು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿ, ನಗರದಲ್ಲಿ ರಾತ್ರಿ ವೇಳೆ ಅಪಘಾತಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಶೇಕಡಾ 75 ರಿಂದ 80 ರಷ್ಟು ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳು ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಸಂಭವಿಸುತ್ತವೆ.

ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ರಾತ್ರಿಯಲ್ಲಿ ಕಳಪೆ ಗೋಚರತೆ ಮತ್ತು ಅತಿವೇಗವು ಪಾದಚಾರಿಗಳು ಮತ್ತು ಇತರ ಅಡೆತಡೆಗಳನ್ನು ಗುರುತಿಸಲು ಪ್ರಯಾಣಿಕರಿಗೆ ಕಷ್ಟಕರವಾಗಿಸುತ್ತದೆ, ಇದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳು ಸ್ವಯಂಕೃತ ತಪ್ಪಿನಿಂದಾಗಿರುತ್ತವೆ. ಆಗಾಗ್ಗೆ ಮಿತಿಮೀರಿದ ವೇಗ ಮತ್ತು ಮದ್ಯದ ಅಮಲಿನಲ್ಲಿ ಚಾಲನೆ ಮಾಡುವುದರಿಂದಾಗುತ್ತವೆ.

ಐಐಎಸ್ಸಿಯ ಮೊಬಿಲಿಟಿ ತಜ್ಞ ಪ್ರೊ.ಆಶಿಶ್ ವರ್ಮಾ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆಗೆ ಮಾತನಾಡಿ, ನಗರದಲ್ಲಿ ರಾತ್ರಿಯ ಅಪಘಾತಗಳು ಕಳಪೆ ಮೂಲಸೌಕರ್ಯ ಮತ್ತು ಸಿಗ್ನಲ್ ಜಂಪಿಂಗ್ ಮತ್ತು ರಾಶ್ ಡ್ರೈವಿಂಗ್‌ನಂತಹ ಅಪಾಯಕಾರಿ ಡ್ರೈವಿಂಗ್ ನಡವಳಿಕೆಗಳಿಂದ ಹೆಚ್ಚುತ್ತಿವೆ. "ಉತ್ತಮ ರಸ್ತೆ ವಿನ್ಯಾಸ, ಸಂಚಾರ ನಿಯಮಗಳ ಕಟ್ಟುನಿಟ್ಟಾದ ಜಾರಿ ಮತ್ತು ಈ ಬೆಳೆಯುತ್ತಿರುವ ಸಮಸ್ಯೆಯನ್ನು ಎದುರಿಸಲು ಕೇಂದ್ರೀಕೃತ ಜಾಗೃತಿ ಕಾರ್ಯಕ್ರಮಗಳ ತಕ್ಷಣದ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT