ಮನಮೋಹನ್ ಸಿಂಗ್ 
ರಾಜ್ಯ

ನಾವು ನಮ್ಮ ಕಿರಿಯರನ್ನು ಸ್ವಾಗತಿಸಲು ಮೇಲೇಳುವುದಿಲ್ಲ; ಮನಮೋಹನ್ ಸಿಂಗ್ ಎದ್ದು ನಿಂತು ನನ್ನನ್ನು ಸ್ವಾಗತಿಸಿದ್ದರು: IAS ಅಧಿಕಾರಿ L K ಅತೀಕ್

ಅವರು ತಮ್ಮ ಬರವಣಿಗೆಯ ಮೇಜಿನ ಬಳಿ ಕುಳಿತಿದ್ದರು, ನಾನು ಹೋದ ಕೂಡಲೇ ಅವರು ಎದ್ದು ನನ್ನನ್ನು ಸ್ವಾಗತಿಸಿದರು ಮತ್ತು ನನ್ನ ಹಿನ್ನೆಲೆಯ ಬಗ್ಗೆ ಕೇಳಿದರು ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿದರು.

ಬೆಂಗಳೂರು: ಮಹಾನ್ ಆರ್ಥಿಕ ತಜ್ಞ, ಭಾರತದ ಉದಾರೀಕರಣದ ಪಿತಾಮಹ ಮಾಜಿ ಪಿಎಂ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಅವರ ಜೊತೆ ಕೆಲಸ ಮಾಡಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ ಅತೀಕ್ ಅವರೊಂದಿಗಿನ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

1991 ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ಕೇಡರ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್)ಯಾಗಿರುವ ಎಲ್‌ಕೆ ಅತೀಕ್ ಅವರು 2007 ರಲ್ಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ನಿರ್ದೇಶಕರಾಗಿ ಸೇರಿದ್ದರು.

ಪ್ರೋಟೋಕಾಲ್‌ನ ಭಾಗವಾಗಿ, ಡಾ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ನನ್ನನ್ನು ಅಂದಿನ ಪ್ರಧಾನಿಯವರ ಅಧಿಕೃತ ನಿವಾಸ 7, ರೇಸ್ ಕೋರ್ಸ್ ರಸ್ತೆಗೆ ಕರೆದೊಯ್ಯಲಾಯಿತು. ಅವರು ತಮ್ಮ ಬರವಣಿಗೆಯ ಮೇಜಿನ ಬಳಿ ಕುಳಿತಿದ್ದರು, ನಾನು ಹೋದ ಕೂಡಲೇ ಅವರು ಎದ್ದು ನನ್ನನ್ನು ಸ್ವಾಗತಿಸಿದರು ಮತ್ತು ನನ್ನ ಹಿನ್ನೆಲೆಯ ಬಗ್ಗೆ ಕೇಳಿದರು ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿದರು. ಅವರ ಅಸಾಧಾರಣ ಸರಳ ನಡವಳಿಕೆಯ ಸಂಸ್ಕೃತಿಯಿಂದ ನಾನು ಅಶ್ಚರ್ಯಚಕಿತನಾದೆ.

ಏಕೆಂದರೆ ಅಧಿಕಾರಶಾಹಿಗಳಾದ ನಾವು ನಮ್ಮ ಕಿರಿಯರನ್ನು ಸ್ವಾಗತಿಸಲು ಎದ್ದೇಳುವುದಿಲ್ಲ, ಆದರೆ ನಾನು ದೇಶದ ಪ್ರಧಾನಿಯ ಮುಂದೆ ಇದ್ದೆ ಹಾಗೂ ಅವರು ನನ್ನನ್ನು ಸ್ವಾಗತಿಸಲು ಎದ್ದು ನಿಂತಿದ್ದರು. ಅಷ್ಟೇ ಅಲ್ಲ, ಅವರು ನನ್ನ ಕುಟುಂಬದ ಬಗ್ಗೆ ನನ್ನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು, ಐದು ವರ್ಷಗಳ ಕಾಲ PMO ನಲ್ಲಿ (2007-2012) ಕಳೆದಿದ್ದ ಅತೀಕ್, ಕೃಷಿ, ಶಿಕ್ಷಣ, ಪೋಷಣೆ, ಕೌಶಲ್ಯ ತರಬೇತಿ ಇತ್ಯಾದಿಗಳ ಕುರಿತು ಡಾ ಸಿಂಗ್ ಅವರ ಭಾಷಣಗಳನ್ನು ರಚಿಸಿದ್ದಾರೆ.

ಅವರ ಹೆಚ್ಚಿನ ಭಾಷಣಗಳನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಅವರು ಪ್ರವೀಣರು, ವಿದ್ವಾಂಸರು ಮತ್ತು ಉತ್ತಮ ಸಂಭಾವಿತ ವ್ಯಕ್ತಿಯಾಗಿದ್ದರು, ಅವರೊಬ್ಬ ಒಬ್ಬ ದಾರ್ಶನಿಕ, ಬುದ್ಧಿಜೀವಿ, ಅವರು ಚೆನ್ನಾಗಿ ಓದುತ್ತಿದ್ದರು, ನಂತರ ನೀತಿ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ಸಿದ್ಧಪಡಿಸಲು ಸಲಹೆ ನೀಡುತ್ತಿದ್ದರು. ನಮ್ಮ ಅಭಿಪ್ರಾಯಗಳ ಮೇಲೆ ಅವರು ಎಂದು ಅವಲಂಬಿತರಾಗಿರಲಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT