ಬೆಂಗಳೂರು: ಕರ್ತವ್ಯ ಲೋಪ ಆರೋಪದಡಿ ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಆರು ಮಂದಿ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಿ ಬಿಬಿಎಂಪಿ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಆದೇಶ ಹೊರಡಿಸಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಸಂಬಂಧಿತ ಲೋಪಗಳ ಹಿನ್ನೆಲೆಯಲ್ಲಿ ಜಂಟಿ ಆಯುಕ್ತ ಅಜಿತ್ ಅವರಿಗೆ ಕಾರಣ ಕೇಳಿ ನೋಟಿಸ್ ಹಾಗೂ ಕಂದಾಯ ಉಪಆಯುಕ್ತ ಡಿಕೆ ಬಾಬು ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.
ಜ.30 ರಂದು ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆತಿಗೆ ಸಂಗ್ರಹ, ತೆರಿಗೆ ಬಾಕಿ, ಟಾಪ್ 50 ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿಗಳನ್ನು ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕದ ಪ್ರಕರಣಗಳು ಪರಿಶೀಲನೆ ವೇಳೆ ಕಂಡು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಜಂಟಿ ಆಯುಕ್ತರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಹಾಗೂ ಡಿಸಿ ಡಿಕೆ ಬಾಬು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ.
“ಡಿಸಿ ಡಿಕೆ ಬಾಬು ಕಳೆದ ಎರಡು ತಿಂಗಳಲ್ಲಿ ಟಾಪ್-50 ಗೃಹೇತರ ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ಸೀಲ್ ಮಾಡಿಲ್ಲ. ಅದೇ ರೀತಿ ಟಾಪ್ -50 ವಸತಿ ಕಟ್ಟಡಗಳಲ್ಲಿ ಒಂದು ಆಸ್ತಿಯನ್ನು ಅಟ್ಯಾಚ್ ಮೆಂಟ್ ಮಾಡಿಲ್ಲ. ಈ ಕುರಿತಂತೆ ಡಿಕೆ ಬಾಬು ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಿದೆ” ಎಂದು ವರಿಸಿದ್ದಾರೆ.