ರಾಜ್ಯ

100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಒದಗಿಸಿ: ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಮನವಿ!

Manjula VN

ಬೆಂಗಳೂರು: ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಮನವಿ ಮಾಡಿಕೊಂಡಿದ್ದಾರೆ.

ಬಜೆಟ್ ಪೂರ್ವ ಸಭೆಯಲ್ಲಿ ಸಚಿವರೂ ಆಗಿರುವ ಸಿದ್ದರಾಮಯ್ಯ ಅವರೊಂದಿಗಿನ ಮುಜರಾಯಿ ಇಲಾಖೆಯ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿಯವರು 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಒದಗಿಸುವಂತೆ ಮನವಿ ಸಲ್ಲಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿಯವರು, ಬಜೆಟ್‌ನಲ್ಲಿ ಎಷ್ಟು ಪ್ರಮಾಣದ ಹಂಚಿಕೆಯಾಗಿದ್ದರೂ, ನಾವು ಇಲಾಖೆಯಲ್ಲಿ ನಮ್ಮದೇ ಆದ ಹಣವನ್ನು ಹೊಂದಿರುವುದರಿಂದ ಆ ಹಣವನ್ನು ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು.

ರಾಮ ಹುಟ್ಟಿ 7500 ಸಾವಿರ ವರ್ಷ ಆಯಿತು ರಾಮ ಮಂದಿರ ಎಷ್ಟು ಕಟ್ಟಿದ್ದಾರೆ. ಬಿಜೆಪಿಯವರು ಈಗ ರಾಮ ರಾಮ ಎಂದು ಓಡಾಡುತಿದ್ದಾರೆ. ಅಯೋಧ್ಯೆ ರಾಮ ಮಂದಿರ ಬಾಗಿಲು ತೆಗೆದು ಪೂಜೆಗೆ ಅವಕಾಶ ನೀಡಿದ್ದು ನಮ್ಮ ರಾಜೀವ್ ಗಾಂಧಿ. ನಮ್ಮ ಅಧಿಕಾರಾವಧಿಯಲ್ಲಿ ಎಷ್ಟು ದೇವಸ್ಥಾನಗಳಿಗೆ ಅನುಧಾನ ಕೊಟ್ಟಿದ್ದೇವೆ ಎಂಬುದರ ಬಗ್ಗೆ ಪಟ್ಟಿ ಬಿಡುಗಡೆಗೊಳಿಸುತ್ತೇನೆ ಎಂದು ತಿಳಿಸಿದರು.

SCROLL FOR NEXT