ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ತಾಯಿ ಕೊಲೆ ಕೇಸ್‍ಗೆ ಟ್ವಿಸ್ಟ್: ಹತ್ಯೆ ಮಾಡಿದ್ದು ಮಗನಲ್ಲ; ಫಿಂಗರ್ ಪ್ರಿಂಟ್ ಬಿಚ್ಚಿಟ್ಟ ರಹಸ್ಯವೇನು?

ಫೆಬ್ರವರಿ 2 ರಂದು ಜಸ್ಟಿಸ್ ಭೀಮಯ್ಯ ಲೇಔಟ್ ನಿವಾಸಿ ನೇತ್ರಾ (40) ಕೊಲೆಯಾಗಿತ್ತು. ಕೊಲೆಯ ನಂತರ ನೇತ್ರಾಳ 17 ವರ್ಷದ ಮಗ ಬೆಳಗಿನ ಉಪಹಾರ ತಯಾರಿಸದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಕೆಆರ್ ಪುರಂ ಪೊಲೀಸರ ಮುಂದೆ ಶರಣಾಗಿದ್ದ.

ಬೆಂಗಳೂರು: ತಿಂಡಿ ಮಾಡದ್ದಕ್ಕೆ ಮಗನೇ ತಾಯಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಹಸ್ಯ ಭೇದಿಸಿದ್ದಾರೆ. ಮಹಿಳೆಯನ್ನು ಆಕೆಯ ಪತಿ ಹತ್ಯೆಗೈದಿದ್ದು, ತಂದೆಯನ್ನು ಪೊಲೀಸರಿಂದ ರಕ್ಷಿಸಲು ಅಪ್ರಾಪ್ತ ಮಗ ತಾಯಿಯನ್ನು ಕೊಲೆಗೈದ ನಾಟಕವಾಡಿರುವುದು ಬೆಳಕಿಗೆ ಬಂದಿದೆ.

ಫೆಬ್ರವರಿ 2 ರಂದು ಜಸ್ಟಿಸ್ ಭೀಮಯ್ಯ ಲೇಔಟ್ ನಿವಾಸಿ ನೇತ್ರಾ (40) ಕೊಲೆಯಾಗಿತ್ತು. ಕೊಲೆಯ ನಂತರ ನೇತ್ರಾಳ 17 ವರ್ಷದ ಮಗ ಬೆಳಗಿನ ಉಪಹಾರ ತಯಾರಿಸದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಕೆಆರ್ ಪುರಂ ಪೊಲೀಸರ ಮುಂದೆ ಶರಣಾಗಿದ್ದ.

ಬಾಲಾಪರಾಧಿಗಳಿಗೆ ಕನಿಷ್ಠ ಶಿಕ್ಷೆಯ ಬಗ್ಗೆ ಅರಿವಿದ್ದ ಅಪ್ರಾಪ್ತ ಮಗ, ತನ್ನ ತಂದೆ ಮಾಡಿದ್ದ ಕೊಲೆಯನ್ನು ಮುಚ್ಚಿಟ್ಟು ತಾನೇ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಶಿಕ್ಷೆ ಅನುಭವಿಸುವವರೆಗೆ ಅವನ ಶಿಕ್ಷಣವನ್ನು ಸರ್ಕಾರ ನೋಡಿಕೊಳ್ಳುತ್ತದೆ ಮತ್ತು ಬಾಲಾಪರಾಧಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಇರುತ್ತದೆ ಎಂದು ಹೇಳಿ ತಂದೆಯ ಮನವೊಲಿಸಿದ್ದ.

ನೇತ್ರಾಳ ಸಹೋದರ ಅಶ್ವಥ ನಾರಾಯಣ, ಕೊಲೆ ಪ್ರಕರಣದಲ್ಲಿ ನೇತ್ರಾ ಪತಿ ಚಂದ್ರಪ್ಪನ ಕೈವಾಡವಿದೆ ಎಂದು ಶಂಕಿಸಿದ್ದರು. ನೇತ್ರಾಳ ಶೀಲದ ಬಗ್ಗೆ ಅನುಮಾನಗೊಂಡಿದ್ದ ಚಂದ್ರಪ್ಪ ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ, ಅಂತಹ ಪ್ರಕರಣಗಳಲ್ಲಿ ಬಾಲಾಪರಾಧಿಗಳಿಗೆ ಶಿಕ್ಷೆ ಕಡಿಮೆ ಎಂದು ತಿಳಿದ ಅವರ ಮಗ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದ.

ಆದರೆ ಕಬ್ಬಿಣದ ರಾಡ್‌ನಲ್ಲಿ ಇಬ್ಬರ ಬೆರಳಚ್ಚು ಪತ್ತೆಯಾದ ಪರಿಣಾಮ ಚಂದ್ರಪ್ಪನ ಬಂಧನವಾಗಿದೆ. ಸಂತ್ರಸ್ತೆಯ ಸಾವಿನ ನಂತರ, ಆಕೆಯ ಮಗ ಕೂಡ ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಆಕೆಯ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ.

ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ತನ್ನ ವರದಿಯಲ್ಲಿ ಆಯುಧದ ಮೇಲೆ ಇಬ್ಬರ ಫಿಂಗರ್‌ಪ್ರಿಂಟ್‌ಗಳಿವೆ ಎಂದು ಹೇಳಿದೆ. ಇದರ ಆಧಾರದ ಮೇಲೆ ಪೊಲೀಸರು ಚಂದ್ರಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

ಮದ್ಯವ್ಯಸನಿಯಾಗಿದ್ದ ಚಂದ್ರಪ್ಪ, ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾನೆ. ಆಕೆ ಮನೆಯಿಂದ ದೂರವಿದ್ದು, ಮಕ್ಕಳು ಆಹಾರವಿಲ್ಲದೆ ಬಳಲುತ್ತಿದ್ದರು ಎಂದು ಪೊಲೀಸರ ಬಳಿ ಆತ ಹೇಳಿಕೊಂಡಿದ್ದಾನೆ. ಚಂದ್ರಪ್ಪ ಮತ್ತು ಅವರ ಪುತ್ರನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪರ್ ಆಗಿದ್ದರು ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT