ರಾಜ್ಯ

ಹಾಕಿ ಆಟಗಾರನ ವಿರುದ್ಧ ಪೋಕ್ಸೋ ಪ್ರಕರಣ: ತನಿಖೆಗೆ ಸಹಕರಿಸುವಂತೆ ವರುಣ್ ಕುಮಾರ್ ಗೆ ಮನವಿ, ಪೊಲೀಸರಿಂದ ಸಾಕ್ಷಿ ಸಂಗ್ರಹ

Srinivasamurthy VN

ಬೆಂಗಳೂರು: ಅಪ್ರಾಪ್ತೆಯ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸಾಕ್ಷಿ ಸಂಗ್ರಹದಲ್ಲಿ ತೊಡಗಿದ್ದಾರೆ.

ಭಾರತ ರಾಷ್ಟ್ರೀಯ ತಂಡದ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧದ ಅತ್ಯಾಚಾರ ಆರೋಪದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು, ನಡೆಯುತ್ತಿರುವ ತನಿಖೆಯ ಭಾಗವಾಗಿ ವರುಣ್ ಕುಮಾರ್ ಮತ್ತು ಸಂತ್ರಸ್ತೆಯ ನಡುವೆ ವಿನಿಮಯವಾಗಿರುವ ಕರೆ ವಿವರಗಳು, ಸಂದೇಶಗಳು ಮತ್ತು ಧ್ವನಿ ಟಿಪ್ಪಣಿಗಳ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂತೆಯೇ ತನಿಖೆಗೆ ಸಹಕರಿಸುವಂತೆ ಪೊಲೀಸರು ವರುಣ್ ಕುಮಾರ್ ಅವರ ಸಂಪರ್ಕಕ್ಕೆ ಯತ್ನಿಸುತ್ತಿದ್ದು, ಸಂತ್ರಸ್ಥ ಯುವತಿಯನ್ನೂ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, 'ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ನಾವು ಇನ್ನೂ ಕುಮಾರ್ ಅವರನ್ನು ಸಂಪರ್ಕಿಸಿಲ್ಲ. ಅವರು ಕರ್ನಾಟಕದಿಂದ ಹೊರಗಿದ್ದಾರೆ, ಆದ್ದರಿಂದ ನಾವು ತನಿಖೆಗೆ ಸೇರಲು ಶೀಘ್ರದಲ್ಲೇ ಅವರನ್ನು ಸಂಪರ್ಕಿಸುತ್ತೇವೆ. ಪ್ರಸ್ತುತ ತರಬೇತಿ ಪಡೆಯುತ್ತಿರುವ ಅವರ ಸ್ಥಳಕ್ಕೆ ನಾವು ಯಾವುದೇ ತಂಡಗಳನ್ನು ಕಳುಹಿಸಿಲ್ಲ. ಅವರು ಬಂದರೆ, ಸರಿ, ಅಥವಾ ನಾವು ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸಬೇಕಾಗುತ್ತದೆ ಎಂದರು.

ಅಂತೆಯೇ ನಾವು ಈಗಾಗಲೇ ಪುರಾವೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದೇವೆ. ಸಂತ್ರಸ್ತೆ ಮತ್ತು ವರುಣ್ ಕುಮಾರ್ ನಡುವೆ ವಿನಿಮಯವಾಗಿರುವ ಸಂದೇಶಗಳು, ಧ್ವನಿ ಟಿಪ್ಪಣಿಗಳು, ಕರೆ ವಿವರಗಳ ದಾಖಲೆಗಳ ಮೂಲಕ ನಾವು ಸ್ಕ್ಯಾನ್ ಮಾಡುತ್ತಿದ್ದೇವೆ. ಹೇಳಿಕೆಗಳನ್ನು ದಾಖಲಿಸಲು ನಾವು ಅವರ ಪರಸ್ಪರ ಸ್ನೇಹಿತರನ್ನು ಸಂಪರ್ಕಿಸುತ್ತೇವೆ ಎಂದು ಅವರು ಹೇಳಿದರು.

ಪಲಾಯನ ಆರೋಪ ತಳ್ಳಿ ಹಾಕಿದ ಹಾಕಿ ಇಂಡಿಯಾ ಸಂಸ್ಥೆ
ಇನ್ನು ಈ ಪ್ರಕರಣದ ಆರೋಪಿಯಾಗಿರುವ ರಾಷ್ಟ್ರೀಯ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ಪಲಾಯನಗೈದಿದ್ದಾರೆ ಎಂಬ ಆರೋಪವನ್ನು ಹಾಕಿ ಇಂಡಿಯಾ ಸಂಸ್ಥೆ ತಳ್ಳಿಹಾಕಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಹಾಕಿ ಇಂಡಿಯಾ ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ವರುಣ್ ಕುಮಾರ್, ಪ್ರಸ್ತುತ ಮುಂಬರುವ ಎಫ್‌ಐಎಚ್ ಪ್ರೊ ಲೀಗ್‌ಗಾಗಿ ಭುವನೇಶ್ವರದಲ್ಲಿ ರಾಷ್ಟ್ರೀಯ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಭಾರತ ತಂಡ ತನ್ನ ಆರಂಭಿಕ ಮುಖಾಮುಖಿಯಲ್ಲಿ ಫೆಬ್ರವರಿ 10 ರಂದು ಸ್ಪೇನ್ ಅನ್ನು ಎದುರಿಸಲಿದೆ ಎಂದು ಹೇಳಿದೆ.
 

SCROLL FOR NEXT