ರಾಜ್ಯ

ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ಮೊದಲ ಚಾಲಕರಹಿತ ಮೆಟ್ರೋ ರೈಲು!

Nagaraja AB

ಬೆಂಗಳೂರು: ಚೀನಾದಿಂದ ಆರು ಬೋಗಿಗಳನ್ನು ಒಳಗೊಂಡ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬುಧವಾರ ಬೆಂಗಳೂರಿಗೆ ಆಗಮಿಸಿದೆ. ಈ ರೈಲು ದಕ್ಷಿಣ ಬೆಂಗಳೂರಿನ ಐಟಿ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿ ಡಿಪೋಗೆ ಬುಧವಾರ ಮುಂಜಾನೆ ಆಗಮಿಸಿತು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.

ಈ ರೈಲು ಬಿಎಂಆರ್‌ಸಿಎಲ್‌ನ ಹಳದಿ ಮಾರ್ಗದಲ್ಲಿ ಆರ್‌ವಿ ರಸ್ತೆಯಿಂದ ಸಿಲ್ಕ್ ಬೋರ್ಡ್ ಮೂಲಕ ಎಲೆಕ್ಟ್ರಾನಿಕ್ ಸಿಟಿವರೆಗೆ ಕಾರ್ಯನಿರ್ವಹಿಸಲಿದೆ. ಈ ರೈಲು ಮತ್ತು ಬೋಗಿಗಳನ್ನು ಚೀನಾದ ಸಂಸ್ಥೆಯೊಂದು ನಿರ್ಮಿಸಿದ್ದು, ಬಿಎಂಆರ್‌ಸಿಎಲ್‌ಗೆ 216 ಬೋಗಿಗಳನ್ನು ನಿರ್ಮಿಸುವ ಗುತ್ತಿಗೆ ಪಡೆದಿದೆ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಾವು 216 ಬೋಗಿಗಳಿಗೆ ಆರ್ಡರ್ ಮಾಡಿದ್ದೇವೆ. ಇದರಲ್ಲಿ 90 ಬೋಗಿಗಳು ಹಳದಿ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿವೆ. ಬಂದಿರುವುದು ಮೂಲ ಮಾದರಿಯಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ತಿಳಿಸಿದ್ದಾರೆ.

 ಜನವರಿ 24 ರಂದು ಚೀನಾದಿಂದ ಹೊರಟ ರೈಲು ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿತು. ನಂತರ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬಂದಿತು.

SCROLL FOR NEXT