ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ 
ರಾಜ್ಯ

ರಾಹುಲ್ ಗಾಂಧಿ ಮನವಿ ಮೇರೆಗೆ ಕೇರಳ ಸಂತ್ರಸ್ತನ ಕುಟುಂಬಕ್ಕೆ ಪರಿಹಾರ: ಈಶ್ವರ್ ಖಂಡ್ರೆ

Shilpa D

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದು ಕರ್ನಾಟಕ ಸರ್ಕಾರ ಪರಿಹಾರ ನೀಡಿದೆ. ಆನೆ ಕರ್ನಾಟಕದ್ದು ಎಂಬ ಕಾರಣಕ್ಕೆ ನಮ್ಮ ತೆರಿಗೆ ಹಣವನ್ನು ರಾಹುಲ್ ಗಾಂಧಿ ಕ್ಷೇತ್ರದ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ. ಬಿಜೆಪಿ ನಾನಾ ರೀತಿಯಲ್ಲಿ ಕಾಂಗ್ರೆಸ್​ನನ್ನು ಪ್ರಶ್ನಿಸಿದೆ.

ವಯನಾಡಿನ ಮೃತ ಅಜೀಶ್ ಅವರ ಕುಟುಂಬಕ್ಕೆ 15 ಲಕ್ಷ ರೂಪಾಯಿ ನೀಡಲು ಒಪ್ಪಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.

ವಯನಾಡು ಸಂಸದ ರಾಹುಲ್ ಗಾಂಧಿಯವರ ಮನವಿಯ ಮೇರೆಗೆ ಮತ್ತು ಮಾನವೀಯ ನೆಲೆಯಲ್ಲಿ ಇದನ್ನು ಮಾಡಲಾಗಿದೆ ಎಂದು ಖಂಡ್ರೆ ಹೇಳಿದರು. ಪರಿಹಾರ ಹಣ ಇನ್ನೂ ಪಾವತಿಯಾಗಿಲ್ಲ, ಶೀಘ್ರವೇ ನೀಡಲಾಗುವುದು ಎಂದರು.

ಜನರಲ್ಲಿ ಪೂರ್ವಾಗ್ರಹ ಮತ್ತು ಅಮಾನವೀಯತೆ ಏಕೆ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಅಫ್ಘಾನಿಸ್ತಾನಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿದಾಗ ಅದನ್ನು ಏಕೆ ಪ್ರಶ್ನಿಸಲಿಲ್ಲ.

ಭಾರತದಲ್ಲಿ ಬಡತನವಿಲ್ಲವೇ? ಅತ್ತಿಬೆಲೆಯಲ್ಲಿ ಪಟಾಕಿ ಸಿಡಿತ ಘಟನೆ ನಡೆದಾಗ, ತಮಿಳುನಾಡು ಪರಿಹಾರ ಘೋಷಿಸಿದಾಗ ಯಾರೂ ಏಕೆ ಪ್ರಶ್ನಿಸಲಿಲ್ಲ.

ಒರಿಸ್ಸಾದಲ್ಲಿ ರೈಲು ಅಪಘಾತವಾದಾಗ ಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನು ಘೋಷಿಸಿದರು, ಯಾರೂ ಅದನ್ನು ಏಕೆ ಪ್ರಶ್ನಿಸಲಿಲ್ಲ? ಎಂದು ಖಂಡ್ರೆ ಕಿಡಿ ಕಾರಿದ್ದಾರೆ.

SCROLL FOR NEXT