ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು
ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು 
ರಾಜ್ಯ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 11 ಕೋಟಿ ರೂ. ನಷ್ಟ; ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು

Ramyashree GN

ಬೆಂಗಳೂರು: ನಿಗಮಕ್ಕೆ 11 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟು ಮಾಡಿದ ಆರೋಪದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮುಖ್ಯ ಲೆಕ್ಕಾಧಿಕಾರಿ ಮತ್ತು ಹಣಕಾಸು ಸಲಹೆಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಎಂಟಿಸಿ ಭದ್ರತೆ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ಸಿಕೆ ನೀಡಿದ ದೂರಿನ ಆಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಹಣಕಾಸು ಸಲಹೆಗಾರ ಅಬ್ದುಲ್ ಖುದ್ದೂಸ್ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

ಎಫ್ಐಆರ್ ಪ್ರಕಾರ, ಬಿಎಂಟಿಸಿಯ ವಾಣಿಜ್ಯ ವಿಭಾಗವು ತನ್ನ ವಾಣಿಜ್ಯ ಅಂಗಡಿಗಳು/ಸಂಸ್ಥೆಗಳಿಂದ ಪ್ರತಿ ತಿಂಗಳು GST ಮತ್ತು ಪರವಾನಗಿ ಶುಲ್ಕವನ್ನು ಸಂಗ್ರಹಿಸಲು ಇನ್‌ವಾಯ್ಸ್ ನೀಡುವ ಅಗತ್ಯವಿದೆ. ಆದರೆ, ಮಾರ್ಚ್ 2021 ಮತ್ತು ಡಿಸೆಂಬರ್ 2022ರ ನಡುವೆ, ವಾಣಿಜ್ಯ ವಿಭಾಗದಿಂದ ಲೆಕ್ಕ ವಿಭಾಗಕ್ಕೆ ಶುಲ್ಕ ಮತ್ತು ಸಂಬಂಧಿತ ಜಿಎಸ್‌ಟಿಯನ್ನು ಪಾವತಿಸದಂತೆ ಪರವಾನಗಿದಾರರಿಗೆ 456 ಕ್ರೆಡಿಟ್ ನೋಟ್‌ಗಳನ್ನು ನೀಡಲಾಗಿದೆ. ಈ ಪೈಕಿ 52 ಕ್ರೆಡಿಟ್ ನೋಟುಗಳನ್ನು ಅನುಮೋದನೆಯಿಲ್ಲದೆ ನೀಡಲಾಗಿದೆ ಮತ್ತು ಅಕೌಂಟ್ಸ್‌ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಫ್ಐಆರ್ ಹೇಳಿದೆ.

ಅಕೌಂಟ್ಸ್ ವಿಭಾಗವು ಕ್ರೆಡಿಟ್ ನೋಟ್‌ಗಳನ್ನು ಪರಿಶೀಲಿಸದೆ ವಿನಾಯಿತಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಬಿಎಂಟಿಸಿ ಬೊಕ್ಕಸಕ್ಕೆ 11.81 ಕೋಟಿ ರೂ. ಆದಾಯ ನಷ್ಟವಾಗಿದೆ. ವಾಣಿಜ್ಯ ಮತ್ತು ಲೆಕ್ಕ ವಿಭಾಗದ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಷ್ಟ ಉಂಟು ಮಾಡಿದ್ದಾರೆ ಎಂದು ಎಫ್ಐಆರ್‌ನಲ್ಲಿ ದೂರಲಾಗಿದೆ.

ಬಂಧನಕ್ಕೆ ಒಳಗಾಗಿರುವ ಬಿಎಂಟಿಸಿಯ ಆಗಿನ ಅಕೌಂಟ್ಸ್ ಅಧಿಕಾರಿ ಮತ್ತು ಈಗ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಲಕ್ಷ್ಮಿ ಸೋಮಯ್ಯ ಹಿರೇಮಠ ಅವರು ನಿರೀಕ್ಷಣಾ ಜಾಮೀನಿಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಅರ್ಜಿದಾರರ ವಿರುದ್ಧ ಪ್ರಾಥಮಿಕ ಪ್ರಕರಣವಿದೆ. ಯಾವುದೇ ಕಚೇರಿ ಆದೇಶವಿಲ್ಲದೆ, ಅರ್ಜಿದಾರರು ಕ್ರೆಡಿಟ್ ನೋಟ್ ಅನ್ನು ಸಿದ್ಧಪಡಿಸಿದ್ದಾರೆ ಮತ್ತು ಬೊಕ್ಕಸಕ್ಕೆ ಆಗಿರುವ ನಷ್ಟಕ್ಕೆ ಅವರು ಕೂಡ ಜವಾಬ್ದಾರಿಯಾಗಿದ್ದಾರೆ ಎಂದು ವಾದಿಸಿದರು.

ಎಲ್‌ವಿ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು, ಷರತ್ತುಗಳೊಂದಿಗೆ ವಿಜಯಲಕ್ಷ್ಮಿ ಹಿರೇಮಠ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಂಗೀಕರಿಸಿದರು.

SCROLL FOR NEXT