ರಾಜ್ಯ

ಮಡಿಕೇರಿ: ನದಿಗಳನ್ನು ಕಲುಷಿತಗೊಳಿಸದಂತೆ 8ನೇ ತರಗತಿ ಬಾಲಕಿಯ ಅಭಿಯಾನಕ್ಕೆ ಭರಪೂರ ಮೆಚ್ಚುಗೆ!

Shilpa D

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಕೊಡಗರಹಳ್ಳಿಯ ಸರ್ಕಾರಿ ಶಾಲೆಯ ಎಂಟನೇ ತರಗತಿಯ ಬಾಲಕಿಯೊಬ್ಬಳ ಪ್ರಾಮಾಣಿಕ ಪ್ರಯತ್ನ ಸ್ಥಳೀಯ ನದಿ ಉಳಿಸಿಕೊಳ್ಳಲು ನೆರವಾಗಿದೆ.

ಈಕೆಯ ಸೈನ್ಸ್ ಪ್ರಾಜೆಕ್ಚ್ ಕಾರ್ಯ ಇದೀಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರ ಗೌರವಕ್ಕೆ ಪಾತ್ರವಾಗಿದ್ದು, ನದಿ ಬಳಿ ತ್ಯಾಜ್ಯ ಸುರಿಯುವುದನ್ನು ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಆದೇಶಿಸಿದ್ದಾರೆ.

ಸುಂಟಿಕೊಪ್ಪ ನಿವಾಸಿಗಳಾದ ಶಿಜು ಮತ್ತು ಸಂಧ್ಯಾ ದಂಪತಿಯ ಪುತ್ರಿ ಶ್ರೀಶಾ ಎ.ಎಸ್. ಕೊಡಗರಹಳ್ಳಿ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಅವರು 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಾಲೆಯನ್ನು ಪ್ರತಿನಿಧಿಸಲು ನಾಮನಿರ್ದೇಶನಗೊಂಡರು, ಅಲ್ಲಿ ಕಲುಷಿತಗೊಳ್ಳುತ್ತಿರುವ ನದಿ ದಡಗಳು ಎಂಬ ಬಗ್ಗೆ  ತಮ್ಮ ಪ್ರೆಸೆಂಟೇಷನ್ ನೀಡಿ 'ಯುವ ವಿಜ್ಞಾನಿ' ಎಂಬ ಮನ್ನಣೆ ಪಡೆದರು.

ಬಹುಪಾಲು ಸೈನ್ಸ್ ಪ್ರಾಜೆಕ್ಟ್ ಗಳು ಇಂಟರ್ ನೆಟ್ ಬಳಸಿಕೊಂಡು ಮಾಡಲಾಗುತ್ತದೆ, ಆದರೆ ಶ್ರೀಶ ಒಂದು ಹೆಜ್ಜೆ ಮುಂದೆ ಹೋಗಿ ವಾಸ್ತವ ಪ್ರಪಂಚದ ಯೋಜನೆ ಮಾಡಿದ್ದಾರೆ. ಪ್ರಾಜೆಕ್ಟ್ ಗೆ ತನ್ನ ತಂದೆಯ ಸಹಾಯ ಪಡೆದಳು. ತನ್ನ ಪ್ರಾಜೆಕ್ಟ್‌ಗೆ ಮೆಟಿರೀಯಲ್ ಸಂಗ್ರಹಿಸಲು ತನ್ನ  ಮನೆಯ ಸಮೀಪವಿರುವ ಹೊಳೆಗೆ ಭೇಟಿ ನೀಡಿದಳು. ಹರದೂರು ನದಿ ಸಮೀಕ್ಷೆ ನಡೆಸಿ, ಅದರ ಪ್ರಾಮುಖ್ಯತೆಯ ಕುರಿತು ವಿವರಗಳನ್ನು ಸಂಗ್ರಹಿಸಿದ್ದಾಳೆ. ಅವರು ಸ್ಥಳೀಯ ನಿವಾಸಿಗಳಿಂದ ಅಗತ್ಯ ಮಾಹಿತಿ ಪಡೆದಳು, ಈ ನದಿಯು ಯುಗ ಯುಗಗಳಿಂದಲೂ ಈ ಪ್ರದೇಶದ ಜೀವನಾಡಿಯಾಗಿದೆ.

ಆದಾಗ್ಯೂ, ಸಮೀಕ್ಷೆಯು ಆಕೆಗೆ ನದಿಯ ದುಃಖದ ಸ್ಥಿತಿಯ ಬಗ್ಗೆ ಪರಿಚಯಿಸಿತು, ಅಲ್ಲಿ ಅವಳು ತನ್ನ ನದಿ ದಂಡೆಗಳ ಮೇಲೆ ಎಸೆಯಲ್ಪಟ್ಟ ಪ್ಲಾಸ್ಟಿಕ್ ಮತ್ತು ಇತರ ಕಸ ಕಂಡಿತು. ಸ್ಥಳಕ್ಕೆ ಭೇಟಿ ನೀಡಿದ ಕೆಲವು ಸ್ಥಳೀಯರು ಮತ್ತು ಪ್ರವಾಸಿಗರ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಿಂದ ಹೊಳೆ ಕಲುಷಿತವಾಗುತ್ತಿದೆ.

ಶ್ರೀಶ ಅವರು ಹೊಳೆಯ ದಯನೀಯ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಸ್ಥಳೀಯ ಪಂಚಾಯಿತಿಗೆ ವರದಿ ಸಲ್ಲಿಸಿದರು. ಆಕೆಯ ಪ್ರಯತ್ನಗಳು ಎಸ್ಪಿ ಕೆ ರಾಮರಾಜನ್ ಅವರ ಮನವೊಲಿಸಿದ್ದು, ಕಸ ಹಾಕುವುದನ್ನು ತಡೆಯಲು  ನದಿ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ.

ಇದಲ್ಲದೆ, ನದಿ ದಡಗಳಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸಲು ಸಿಸಿಟಿವಿಗಳನ್ನು ಅಳವಡಿಸಲು ಜಿಲ್ಲಾಡಳಿತವು ಸ್ಥಳೀಯ ಸಂಸ್ಥೆಗೆ ಆದೇಶಿಸಿದೆ. ಹೊಳೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಿವಾಸಿಗಳು ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಹ ತನ್ನ ಸಹಪಾಠಿಗಳ ಸಹಾಯದಿಂದ, ಶ್ರೀಶ ಜಾಗೃತಿ ಅಭಿಯಾನ ನಡೆಸಿದರು.

SCROLL FOR NEXT