ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ ಅಮೆರಿಕ ಮಿಷನ್‍ ಬೆಂಬಲ

ಭಾರತದಲ್ಲಿನ ಅಮೆರಿಕ ಮಿಷನ್ ಮತ್ತು ಅದರ ಅನುಷ್ಠಾನ ಪಾಲುದಾರರಾದ ಮೈಸೂರು ವಿಶ್ವವಿದ್ಯಾಲಯವು, ಮೈಸೂರಿನಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತು ಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ ಗುರುವಾರ...

US ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಹಾಡ್ಜಸ್, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. N.K. ಲೋಕನಾಥ್ ಮತ್ತು ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ ಇಂಡಿಯಾದ ಅಧ್ಯಕ್ಷೆ ರಾಯಭಾರಿಯಾದ ಲತಾ ರೆಡ್ಡಿ
Lingaraj Badiger
Updated On : 5 Jan 2024, 4:05 pm

ಮೈಸೂರು: ಭಾರತದಲ್ಲಿನ ಅಮೆರಿಕ ಮಿಷನ್ ಮತ್ತು ಅದರ ಅನುಷ್ಠಾನ ಪಾಲುದಾರರಾದ ಮೈಸೂರು ವಿಶ್ವವಿದ್ಯಾಲಯವು, ಮೈಸೂರಿನಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತು ಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ ಗುರುವಾರ ಅಧಿಕೃತವಾಗಿ ಬೆಂಬಲ ಘೋಷಿಸಿದೆ.

ಈ ಯೋಜನೆಯು, ಅಮೆರಿಕ ಸರ್ಕಾರದ ಅಂಬಾಸಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಶನ್‌(AFCP) ಮೂಲಕ ಧನಸಹಾಯ ಪಡೆದಿದ್ದು, ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ವಿಭಾಗ ಮತ್ತು ಕರ್ನಾಟಕ ರಾಜ್ಯದಾದ್ಯಂತ ಸಂಗ್ರಹಿಸಲಾಗಿರುವ 6,500 ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಈ ಅನುದಾನವನ್ನು ಬಳಸಲಾಗುತ್ತಿದೆ.

ಮೈಸೂರು ವಿಶ್ವವಿದ್ಯಾಲಯವು ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ ಸಹಭಾಗಿತ್ವದಲ್ಲಿ ಪುನರುತ್ಥಾನ ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

Advertisement

Advertisement

ಇದನ್ನೂ ಓದಿ: ಮತ್ತೊಂದು ಹಡಗು ಅಪಹರಣಕ್ಕೆ ಯತ್ನಿಸಿದ ಹೌತಿ ಉಗ್ರರ ಬೋಟ್ ಸ್ಫೋಟಿಸಿದ ಅಮೆರಿಕ ಸೇನೆ​

ಮೈಸೂರು ವಿಶ್ವವಿದ್ಯಾಲಯಕ್ಕೆ AFCP ಅನುದಾನವನ್ನು ಘೋಷಿಸಿದ ಚೆನ್ನೈನಲ್ಲಿರುವ ಅಮೆರಿಕ ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್, “ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣಾ ಯೋಜನೆಗೆ ನೀಡಿರುವ ಬೆಂಬಲವು ಭಾರತೀಯರು ಮತ್ತು ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತಂತೆ ಅಮೆರಿಕ ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಮತ್ತೊಂದು ಪುರಾವೆಯಾಗಿದೆ ಎಂದರು.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾದ ಅಧ್ಯಕ್ಷೆ ರಾಯಭಾರಿ ಲತಾ ರೆಡ್ಡಿ ಮಾತನಾಡಿ, ಸಾಂಸ್ಕೃತಿಕ ಪರಂಪರೆಯ ತಾಣಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದರು. “ಜಯಲಕ್ಷ್ಮಿ ವಿಲಾಸ ಭವನದಲ್ಲಿ, DHF ತನ್ನ ಕಾರ್ಯಾಚರಣೆಯಲ್ಲಿ ಸಮರ್ಥನೀಯವಾದ ಅಂತರ್ಗತ ಪಾಲಿಸೆಮಿಕ್ ಮ್ಯೂಸಿಯಂ ಅನ್ನು ರಚಿಸಲು ವಾಸ್ತುಶಿಲ್ಪದ ಪುನರ್ರಚನೆ ಮತ್ತು ವಸ್ತು ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ಹುಟ್ಟುಹಾಕಲು ಯೋಜಿಸಿದೆ,” ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement