ರಾಜ್ಯ

ಹೊಸವರ್ಷದ ಸದ್ಭಾವನಾ ಔತಣಕೂಟ: ರಾಜ್ಯಪಾಲರೊಂದಿಗೆ ಡಿಕೆಶಿ ಭಾಗಿ!

Nagaraja AB

ಬೆಂಗಳೂರು: ಸಂಸದರಾದ ಲೆಹರ್ ಸಿಂಗ್ ಸಿರೋಯಾ ನೇತೃತ್ವದಲ್ಲಿ ದೂರಸಂಪರ್ಕ ಮತ್ತು ಐಟಿ ಸಂಸದೀಯ ಸಮಿತಿಗೆ ಆಯೋಜಿಸಲಾಗಿದ್ದ ಹೊಸ ವರ್ಷದ ಸದ್ಭಾವನಾ ಔತಣಕೂಟದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು "ವಸುಧೈವ ಕುಟುಂಬಕಂ" ಅಂದರೆ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ತತ್ವದೊಂದಿಗೆ ವಿಶ್ವದಲ್ಲಿ ಏಕತೆಯ ಸಾರ್ವತ್ರಿಕ ಭಾವನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಇಂದು ವಿಶ್ವದ ಅನೇಕ ದೇಶಗಳು ವಿಶ್ವ ಶಾಂತಿ ಮತ್ತು ಮಾನವ ಕಲ್ಯಾಣಕ್ಕಾಗಿ ಭಾರತವನ್ನು ಬೆಂಬಲಿಸುತ್ತಿವೆ ಎಂದರು.

ನಮ್ಮ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಂದಿನ ಔತಣಕೂಟ ಕಾರ್ಯಕ್ರಮವು ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಇಂತಹ ಕಾರ್ಯಕ್ರಮಗಳು ಪರಸ್ಪರ ಸೌಹಾರ್ದತೆಯ ಸಂದೇಶವನ್ನು ನೀಡುತ್ತವೆ. ಸಮನ್ವಯತೆ, ಸಾಮಾಜಿಕ ಸಮಾನತೆ, ಏಕತೆಯ ಸಂದೇಶವನ್ನು ಸಾರೋಣ ಎಂದು ಕರೆ ನೀಡಿದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಜಾಧವ ಪ್ರತಾಪರಾವ್ ಗಣಪತರಾವ್, ಬಸಬರಾಜ್ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಸಂಸದ ಶತ್ರುಘ್ನ ಪ್ರಸಾದ್ ಸಿನ್ಹಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

SCROLL FOR NEXT