ಹೆಚ್ ಡಿ ರೇವಣ್ಣ-ಹರ್ದಿಪ್ ಸಿಂಗ್ ಪುರಿ 
ರಾಜ್ಯ

ರಸ್ತೆ ಮಧ್ಯೆ ರೇವಣ್ಣರಿಂದ ಸನ್ಮಾನ: ಬೆಂಗಾವಲು ವಾಹನದ ಪೊಲೀಸರ ವಿರುದ್ಧ ಕೇಂದ್ರ ಸಚಿವ ಹರ್ದೀಪ್ ಗರಂ!

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹುಟ್ಟೂರು ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ದೇವೇಗೌಡರ ನೂತನ ನಿವಾಸದೆದರು ನಿಂತಿದ್ದ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದ್ದಕ್ಕೆ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಗರಂ ಆಗಿದ್ದಾರೆ.

ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹುಟ್ಟೂರು ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ದೇವೇಗೌಡರ ನೂತನ ನಿವಾಸದೆದರು ನಿಂತಿದ್ದ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದ್ದಕ್ಕೆ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಗರಂ ಆಗಿದ್ದಾರೆ.

ಹಳೇಕೋಟೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ತೆರಳುತ್ತಿದ್ದರು. ಈ ವೇಳೆ ಹರದನಹಳ್ಳಿಯಲ್ಲಿ ಕಾದು ಕುಳಿತ್ತಿದ್ದ ಹೆಚ್ ಡಿ ರೇವಣ್ಣರನ್ನು ನೋಡಿದ ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದರು. ಆಗ ರೇವಣ್ಣ ಅವರು ಕೇಂದ್ರ ಸಚಿವರ ಬಳಿ ಬಂದು ಹೂಗುಚ್ಚ ನೀಡಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ನಂತರ ಹರದನಹಳ್ಳಿಯಿಂದ ಹಳೇಕೋಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹರ್ದಿಪ್ ಸಿಂಗ್ ಪುರಿ ಬೆಂಗಾವಲು ವಾಹನದ ಪೊಲೀಸರ ಮೇಲೆ ಗರಂ ಆದರು. ಮಾರ್ಗಮಧ್ಯೆ ಏಕೆ ವಾಹನ ನಿಲ್ಲಿಸಿದಿರಿ? ಯಾರು ನಿಮಗೆ ವಾಹನ ನಿಲ್ಲಿಸಲು ಹೇಳಿದ್ದು? ನನ್ನ ಸಮಯ ವ್ಯರ್ಥ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರ ಹೆಸರು ಬರೆದುಕೊಳ್ಳುವಂತೆ ಆಪ್ತಸಹಾಯಕನಿಗೆ ಸೂಚಿಸಿದರು.

ಇನ್ನು ಕಾರ್ಯಕ್ರಮದ ವೇಳೆ ಸಚಿವರ ಪಕ್ಕದಲ್ಲಿಯೇ ಕುಳಿತಿದ್ದ ಹೊಳೆನರಸೀಪುರ ಶಾಸಕರೂ ಆಗಿರುವ ಎಚ್‌ಡಿ ರೇವಣ್ಣ ಅವರು ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಹರ್ದಿಪ್ ಸಿಂಗ್ ಪುರಿ ತರಾಟೆಗೆ ತೆಗೆದುಕೊಂಡಿದ್ದನ್ನು ಮೌನವಾಗಿ ನೋಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾಯಕತ್ವ ಗೊಂದಲ 'ಮಾಧ್ಯಮಗಳ ಸೃಷ್ಟಿ': ಡಿಕೆಶಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು; BMC ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿಗೆ ಶಿವಸೇನೆ(ಯುಬಿಟಿ) ಯತ್ನ!

ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ! ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು

Mark: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? ಸುದೀಪ್ ಬೆನ್ನಿಗೆ ನಿಂತ ಚಕ್ರವರ್ತಿ ಚಂದ್ರಚೂಡ್

Hate Speech Bill: ದ್ವೇಷ ಭಾಷಣ ವಿಧೇಯಕ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಯತ್ನಾಳ ಪತ್ರ!

SCROLL FOR NEXT