ರಾಜ್ಯ

ಮತ್ತೆ ಕಾಡಾನೆ ಸೆರೆ ಹಿಡಿಯಲು 'ಆಪರೇಷನ್ ಜಂಬೋ' ಆರಂಭಿಸಿದ ಅರಣ್ಯ ಇಲಾಖೆ

Lingaraj Badiger

ಬೆಂಗಳೂರು: ಕಳೆದ ತಿಂಗಳು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಆನೆ ಅರ್ಜುನ ಆನೆಯೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದ ನಂತರ ಸ್ಥಗಿತಗೊಂಡಿದ್ದ 'ಆಪರೇಷನ್ ಜಂಬೋ ಗುರುವಾರ ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

50ಕ್ಕೂ ಹೆಚ್ಚು ಕಾಡಾನೆಗಳು ಮಲೆನಾಡು ಪ್ರದೇಶಕ್ಕೆ ನುಗ್ಗಿ ಅನಾಹುತ ಸೃಷ್ಟಿಸಿರುವ ಹಿನ್ನೆಲೆಯಲ್ಲಿ  ಹಾಸನ ಜಿಲ್ಲೆಯ ಬೇಲೂರು ತಾಲೂಕು ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದರಲ್ಲಿ ಎಂಟು ಆನೆಗಳು ಭಾಗವಹಿಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದೇವೆ. ನಮ್ಮ ಎಂಟು ಉತ್ತಮ ಆನೆಗಳು ಈ ಬಾರಿ ಕಾರ್ಯಾಚರಣೆಯ ಭಾಗವಾಗಿವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50ಕ್ಕೂ ಹೆಚ್ಚು ಕಾಡಾನೆಗಳು ಬಂದಿರುವ ಬೇಲೂರು ತಾಲೂಕಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಎರಡು ತಿಂಗಳ ಹಿಂದೆ ತಾಲ್ಲೂಕು ವ್ಯಾಪ್ತಿಗೆ ಬಂದ ಈ ಕಾಡಾನೆಗಳನ್ನು ಆನೆಗಳ ಆವಾಸಸ್ಥಾನಕ್ಕೆ ಓಡಿಸಬೇಕಿದೆ ಎಂದಿದ್ದಾರೆ.

ಈ ಬಾರಿ ಎಂಟು ಆನೆಗಳ ಮೂಲಕ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅಭಿಮನ್ಯು ಆನೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ. ಆನೆಗಳು ಈಗಾಗಲೇ ಬೇಲೂರು ತಾಲೂಕಿನ ಬಿಕ್ಕೋಡು ಆನೆ ಶಿಬಿರವನ್ನು ತಲುಪಿವೆ ಎಂದು ಅವರು ಹೇಳಿದ್ದಾರೆ.

SCROLL FOR NEXT