ಕರ್ನಾಟಕ ಹಕ್ಕಿಹಬ್ಬ 
ರಾಜ್ಯ

ಬಾಗಲಕೋಟೆ: ಚಿಕ್ಕಸಂಗಮ ಪಕ್ಷಿಧಾಮ ಬಳಿಯ ಆಲಮಟ್ಟಿ ಹಿನ್ನೀರಿನಲ್ಲಿ 'ಕರ್ನಾಟಕ ಹಕ್ಕಿ ಹಬ್ಬ'

ಜನವರಿ 26-28ರವರೆಗೆ ನಡೆಯಲಿರುವ ಈ ಬಾರಿಯ ಹಕ್ಕಿ ಹಬ್ಬ ವಿಭಿನ್ನವಾಗಿರಲಿದೆ. ಈ ಸ್ಥಳ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ.

ಬೆಂಗಳೂರು: ಜನವರಿ 26-28ರವರೆಗೆ ನಡೆಯಲಿರುವ ಈ ಬಾರಿಯ ಹಕ್ಕಿ ಹಬ್ಬ ವಿಭಿನ್ನವಾಗಿರಲಿದೆ. ಈ ಸ್ಥಳ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ. ಇಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಗ್ರೇಟರ್ ಫ್ಲೆಮಿಂಗೊಗಳು ಹಿಂಡು ಹಿಂಡು ಆಗಮಿಸುತ್ತವೆ. ಹಕ್ಕಿ ಹಬ್ಬಕ್ಕೆ ಆಗಮಿಸುವ ಪಕ್ಷಿ ಪ್ರಿಯರು ಬಾಗಲಕೋಟೆಯ ಆಲಮಟ್ಟಿ ಹಿನ್ನೀರಿನಲ್ಲಿ ನೆನೆಯುವ ಗುಲಾಬಿ ವಲಸೆ ಸುಂದರಿಯರನ್ನು ವೀಕ್ಷಿಸಬಹುದು.

ಈ ಬಾರಿ  ಹಕ್ಕಿ ಉತ್ಸವದ 10ನೇ ಆವೃತ್ತಿ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ. ಇಲ್ಲಿ ಗ್ರೇಟರ್ ಫ್ಲೆಮಿಂಗೊಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆದ್ದರಿಂದ ಈ ಬಾರಿ ಉತ್ಸವದ ಲಾಂಛನವಾಗಿ ಗ್ರೇಟರ್ ಫ್ಲೆಮಿಂಗೊವನ್ನು ಆಯ್ಕೆ ಮಾಡಲಾಗಿದೆ ಎಂದು  ಅರಣ್ಯ, ವನ್ಯಜೀವಿಗಳ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ (ಕೆಇಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಪುಷ್ಕರ್ ಟಿಎನ್‌ಐಇಗೆ ತಿಳಿಸಿದರು.

ಚಿಕ್ಕಸಂಗಮ ಪಕ್ಷಿ ಸಂರಕ್ಷಿತ ತಾಣ, ಹೆರಕಲ್‌, ಬೀರಕಬ್ಬಿ ಸೇರಿದಂತೆ 8 ಪ್ರಮುಖ ಸ್ಥಳಗಳಲ್ಲಿಪಕ್ಷಿ ವೀಕ್ಷಣೆಗೆ ಅವಕಾಶವಿದೆ. ಕೊಕ್ಕೆರೆಬೆಳ್ಳೂರು ಅಥವಾ ರಂಗನತಿಟ್ಟು ಅಥವಾ ಇತರ ಸ್ಥಳಗಳಂತೆಯೇ ಇದು ವಲಸೆ ಹಕ್ಕಿಗಳ ಒಂದು ತಾಣವಾಗಿದೆ.ಈ ಬಾರಿ ಇಲ್ಲಿ ಉತ್ಸವ ನಡೆಯದ ಕಾರಣ ಬಾಗಲಕೋಟೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕೆಇಡಿಬಿಯ ಮತ್ತೊಬ್ಬ ಅಧಿಕಾರಿ ತಿಳಿಸಿದರು.

ರಾಜ್ಯದಲ್ಲಿ 2013 ರಿಂದ ಹಕ್ಕಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿ ಸಂರಕ್ಷಣೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ವಿಶಿಷ್ಟವಾದ ಹಕ್ಕಿ ಮತ್ತು ಜೀವವೈವಿಧ್ಯವನ್ನು ಆಯ್ಕೆ ಮಾಡಲಾಗುತ್ತದೆ. ಇದು ಯುವ ವನ್ಯಜೀವಿ ಉತ್ಸಾಹಿಗಳಲ್ಲಿ ಹಕ್ಕಿಗಳು ಮತ್ತು ಅವುಗಳ ಆವಾಸ ಸ್ಥಾನವನ್ನು ಕಲಿಯಲು ಮತ್ತು ಪ್ರೀತಿಸಲು ಆಸಕ್ತಿಯನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT