ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ!

ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆಯೊಬ್ಬರ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿರುವ ಘಟನೆಯೊಂದು ಬೆಳ್ಳಂದೂರಿನಲ್ಲಿ ಶನಿವಾರ ನಡೆದಿದೆ.

ಬೆಂಗಳೂರು: ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆಯೊಬ್ಬರ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿರುವ ಘಟನೆಯೊಂದು ಬೆಳ್ಳಂದೂರಿನಲ್ಲಿ ಶನಿವಾರ ನಡೆದಿದೆ.

ಆ್ಯಪ್ ಮೂಲಕ ವೈಟ್‌ಫೀಲ್ಡ್‌ಗೆ ಆಟೋವನ್ನು ಬುಕ್ ಮಾಡಿದ್ದ ಮಹಿಳೆ, ಆಟೋ ಹತ್ತಿರ ಬರುತ್ತಿದ್ದಂತೆಯೇ ರದ್ದುಪಡಿಸಿದ್ದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪದಲ್ಲಿದ್ದ ಚಾಲಕ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ.

ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು, ಮಹಿಳೆ ಸ್ನೇಹಿತರೊಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ನಂತರ ಮಹಿಳೆ ದೂರು ಆಧರಿಸಿ, ಎಫ್ಐಆರ್ ದಾಖಲಿಸಿದ್ದಾರೆ. ಆಟೋ ಚಾಲಕನನ್ನು ಪೊಲೀಸರು ಇನ್ನೂ ಬಂಧನಕ್ಕೊಳಪಡಿಸಿಲ್ಲ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರ್ವೋಚ್ಚ ನಾಯಕನ ಆಯ್ಕೆಗಾಗಿ 88 ಸದಸ್ಯರು ಸೇರಿದ್ದ ಕಟ್ಟಡ ಧ್ವಂಸಗೈದ ಇಸ್ರೇಲ್; 9 ಸಾವಿರ ಕೋಟಿಯ ಅಮೆರಿಕದ ರೇಡಾರ್ ಧ್ವಂಸ!

ಕೊಲ್ಲಿ ದೇಶಗಳಿಂದ ಇಂಧನ ಪೂರೈಕೆ ಬಿಕ್ಕಟ್ಟು: ಭಾರತದ ಕೈಹಿಡಿಯಲು ಮುಂದಾದ ರಷ್ಯಾ!

ಚಿಕ್ಕಬಳ್ಳಾಪುರ: 70 ಸಾವಿರ ಲಂಚ ಪಡೆಯುತ್ತಿದ್ದಾಗ PSI, ASI ಲೋಕಾಯುಕ್ತ ಬಲೆಗೆ

'ತುಂಬಾ ಲೇಟ್ ಆಯಿತು': ಇರಾನ್​ ಮಾತುಕತೆ ಪ್ರಸ್ತಾಪಕ್ಕೆ ಟ್ರಂಪ್ ತಿರುಗೇಟು

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT