ರಾಜ್ಯ

ಗದಗ: ರಾಮನಾಮ ಜಪದ ವೇಳೆ ಲಕ್ಷ್ಮೇಶ್ವರ ದೇವಾಲಯಕ್ಕೆ 'ಹನುಮಂತ' ಭೇಟಿ- ವಿಡಿಯೋ

Nagaraja AB

ಗದಗ: ಅಯೋಧ್ಯೆಯಲ್ಲಿ 500 ವರ್ಷಗಳ ನಂತರ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ನಾಮ ಜಪ ಮೊಳಗುತ್ತಿದೆ. ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಹೂವುಗಳಿಂದ ಅಲಂಕರಿಸಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. 

ಈ ಮಧ್ಯೆ ಗದಗದ ಲಕ್ಷ್ಮಿಶ್ವೇರ ದೇವಾಲಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ರಾಮ ನಾಮ ಜಪದ ವೇಳೆ ಶ್ರೀರಾಮನ ಪರಮ ಭಕ್ತ ಹನುಮಂತ ಪೂಜಾ ಸ್ಥಳಕ್ಕೆ ಭೇಟಿ ನೀಡಿದ್ದು, ಭಕ್ತರು ಮೂಕವಿಸ್ಮಿತರಾಗಿದ್ದಾರೆ.

ವಾಲ್ಮೀಕಿ ರಾಮಾಯಣದಲ್ಲಿ ರಾಮ ಮತ್ತು ರಾವಣನ ನಡುವಿನ ಯುದ್ಧದಲ್ಲಿ ವಾನರ ಸೈನ್ಯವು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾಗಿ ಬರೆದಿದ್ದಾರೆ. 

SCROLL FOR NEXT