ರಾಜ್ಯ

ಬೆಂಗಳೂರು: ಬಿಲ್ಡರ್ ನಿಂದ ಅಧಿಕ ಶುಲ್ಕ; ಅಪಾರ್ಟ್‌ಮೆಂಟ್ ಮಾಲೀಕರ ಪ್ರತಿಭಟನೆ

Srinivasamurthy VN

ಬೆಂಗಳೂರು: ಅಧಿಕ ಶುಲ್ಕ ವಿಧಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಿಲ್ಡರ್ ವಿರುದ್ಧ ಅಪಾರ್ಟ್‌ಮೆಂಟ್ ಮಾಲೀಕರು ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.

ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಮಹೇಂದ್ರ ಅರ್ನಾ ಅಪಾರ್ಟ್‌ಮೆಂಟ್‌ನ ಸುಮಾರು 200 ನಿವಾಸಿಗಳು ತಮ್ಮ ಬಿಲ್ಡರ್ ಮಹೇಂದ್ರ ಹೋಮ್ಸ್ ಪ್ರೈವೇಟ್ ಲಿಮಿಟೆಡ್ 2024 ರ ಜನವರಿಯಿಂದ ತಿಂಗಳಿಗೆ 8 ಲಕ್ಷ ರೂಪಾಯಿಗಳಿಗೂ ಅಧಿಕ ನಿರ್ವಹಣಾ ಶುಲ್ಕವನ್ನು ವಿಧಿಸಿರುವುದನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಅವರು, ಯಾವುದೇ ಸೂಚನೆ ನೀಡದೆ ಪ್ರವರ್ತಕರು ಏಕಾಏಕಿ ಶುಲ್ಕ ವಿಧಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ನ್ಯಾಯ ಕೋರಿ ಕೆ-ರೇರಾವನ್ನು ಸಂಪರ್ಕಿಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಬಿಲ್ಡರ್ ಸಂಪೂರ್ಣ ಯೋಜನೆಯನ್ನು ತಮ್ಮ ಸಂಘಕ್ಕೆ ಹಸ್ತಾಂತರಿಸಬೇಕು ಮತ್ತು ಅಲ್ಲದೆ ಯೋಜನೆಯಿಂದ ತಕ್ಷಣವೇ ನಿರ್ಗಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಅನಂತನಗರದಲ್ಲಿರುವ ಅಪಾರ್ಟ್‌ಮೆಂಟ್ 752 ಫ್ಲ್ಯಾಟ್‌ಗಳನ್ನು ಹೊಂದಿದ್ದು, ನಾಲ್ಕು ವರ್ಷಗಳ ಹಿಂದೆ ಮಾಲೀಕರಿಗೆ ಫ್ಲಾಟ್ ಗಳನ್ನು ಹಸ್ತಾಂತರಿಸಲಾಗಿತ್ತು.

ನಿವಾಸಿಗಳ ಪರವಾಗಿ ಮಾತನಾಡಿದ ಅರ್ನಾ ಅಪಾರ್ಟ್ ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ನಾಯರ್, ಕಳೆದ ನಾಲ್ಕು ವರ್ಷಗಳಿಂದ ಮೂಲ ಸೌಕರ್ಯಕ್ಕಾಗಿ ಪರದಾಡುತ್ತಿದ್ದೇವೆ. ಚುನಾಯಿತ ಸಂಘಕ್ಕೆ ಅಪಾರ್ಟ್ಮೆಂಟ್ ಅನ್ನು ಹಸ್ತಾಂತರಿಸಲು ಬಿಲ್ಡರ್ ಸಿದ್ಧರಿಲ್ಲ ಮತ್ತು ಅದನ್ನು ದಯನೀಯ ಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ವಿಧಿಸುವ 26 ಲಕ್ಷ ರೂ.ಗಳ ನಿರ್ವಹಣಾ ಶುಲ್ಕವು ಈಗಾಗಲೇ ಅಸಮಂಜಸವಾಗಿದೆ ಮತ್ತು ಆದ್ದರಿಂದ ನಾವು K-RERA ಗೆ ದೂರು ಸಲ್ಲಿಸಿದ್ದೇವೆ ಎಂದು ಹೇಳಿದರು.

SCROLL FOR NEXT