ರಾಜ್ಯ

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಸಂಭ್ರಮ: ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಮರಿಂದ ರಾಮನಾಮ ಜಪತಪ!

Shilpa D

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಿಮಿತ್ತ ಹುಬ್ಬಳ್ಳಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ವಿಶಿಷ್ಠವಾಗಿ  ರಾಮೋತ್ಸವ ಆಚರಿಸಲಾಗಿದ್ದು, ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಂದೆಡೆ ಸೇರಿ ಶ್ರೀರಾಮನನ್ನು ಪೂಜಿಸಿ, ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಹನುಮಾನ್ ಮಂದಿರ ಮಾತ್ರವಲ್ಲದೆ ನೂರಾನಿ ಮಸೀದಿಯ ಒಳಗೆ ಹಾಗೂ ಗ್ರಾಮದ ಜುಮ್ಮಾ ಮಸೀದಿ ಎದುರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೋಮು ಸೌಹಾರ್ದತೆ  ಮರೆಯಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ಸಿಹಿ ಹಂಚಿ ಸಂಭ್ರಮ ಹಂಚಿಕೊಂಡರು.

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಎರಡೂ ಸಮುದಾಯದ ಜನರು ಪಾಲ್ಗೊಂಡಿದ್ದರು. ಉಭಯ ಸಮುದಾಯದ ಜನರು ನೀಡಿದ ಕೊಡುಗೆಯಿಂದ ಅಡುಗೆ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಧರ್ಮದ ನೆಲೆಯಲ್ಲಿ ಒಡಕು ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರು ಅನುಸರಿಸುತ್ತಿರುವ ಆಚರಣೆ ಅನುಕರಣೆ ಯೋಗ್ಯವಾಗಿದೆ.

ಮುಸ್ಲಿಂ ಸಮುದಾಯದ ಮುಖಂಡ ಬಾಬಾಜಾನ್ ಜಮಾಲಸಾಬನವರ್ ಮಾತನಾಡಿ, ‘ಹಿಂದೂ ಅಥವಾ ಮುಸ್ಲಿಂ ಸಮುದಾಯದವರಾಗಿರಲಿ, ಪ್ರತಿಯೊಂದು ಹಬ್ಬವನ್ನು ಒಟ್ಟಾಗಿ ಆಚರಿಸುತ್ತೇವೆ, ಅದೇ ರೀತಿ ರಾಮೋತ್ಸವವನ್ನೂ ಆಚರಿಸುತ್ತೇವೆ.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಗ್ರಾಮಸ್ಥರಿಂದ ಶ್ರೀರಾಮ ಪಟ್ಟಾಭಿಷೇಕ ನಾಟಕವೂ ನಡೆಯಿತು. ಸಂಜೆ ಹನುಮಾನ್ ದೇವಸ್ಥಾನದಿಂದ ಬೃಹತ್ ರಾಮನ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

SCROLL FOR NEXT