ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ದೃಶ್ಯ. 
ರಾಜ್ಯ

100 ದಿನದ ಗಡುವು ಅಂತ್ಯ: ಸಮಸ್ಯೆಗಳಿಗೆ ಸಿಗದ ಪರಿಹಾರ; ಡಿಕೆಶಿಗೆ ಪತ್ರ ಬರೆದು ಒಆರ್‌ಆರ್‌ಸಿಎ ಬೇಸರ!

ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ನೀಡಲಾಗಿದ್ದ 100 ದಿನಗಳ ಗಡುವು ಪೂರ್ಣಗೊಂಡಿದ್ದರೂ, ಸಮಸ್ಯೆಗೆ ಯಾವುದೇ ಪರಿಹಾರ ನೀಡಲಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಈ ಮೂಲಕ ಬೇಸರವನ್ನು ವ್ಯಕ್ತಪಡಿಸಿದೆ.

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ನೀಡಲಾಗಿದ್ದ 100 ದಿನಗಳ ಗಡುವು ಪೂರ್ಣಗೊಂಡಿದ್ದರೂ, ಸಮಸ್ಯೆಗೆ ಯಾವುದೇ ಪರಿಹಾರ ನೀಡಲಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಈ ಮೂಲಕ ಬೇಸರವನ್ನು ವ್ಯಕ್ತಪಡಿಸಿದೆ.

17 ಕಿಮೀ ಉದ್ದದ ಔಟರ್ ರಿಂಗ್ ರೋಡ್ ರಸ್ತೆಯಲ್ಲಿ 500 ಕಂಪನಿಗಳಿದ್ದು 10 ಲಕ್ಷ ಜನ ನೆಲೆಸಿದ್ದಾರೆ. ಸಮಸ್ಯೆಗಳನ್ನ 100 ದಿನದೊಳಗೆ ಪರಿಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ವಲಯ ಆಯುಕ್ತರಿಗೆ ಗಡುವು ಡಿಕೆ ಶಿವಕುಮಾರ್​ ನೀಡಿದ್ದರು. ಇದೀಗ ನೀಡಿದ್ದ 100 ದಿನದ ಗುಡುವು ಮುಕ್ತಾಯವಾದರು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.

ಸಂಚಾರ ಸಮಯದಲ್ಲಿ ಅಂದರೆ ಪೀಕ್ ಅವರ್​ನಲ್ಲಿ ಬೆಳ್ಳಂದೂರು, ಔಟರ್ ರಿಂಗ್ ರೋಡ್ ಸುತ್ತಮುತ್ತ ಟ್ರಾಫಿಕ್ ಬಿಸಿ ತಟ್ಟುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್​ ಉಂಟಾಗುತ್ತದೆ. ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಐಟಿಬಿಟಿ ಮಂದಿ ಸುಸ್ತಾಗಿದ್ದಾರೆ.

ಮೆಟ್ರೋ ಕಾಮಗಾರಿ ಕೂಡ ನಡಿಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ವಾಹನದಟ್ಟಣೆಯಿಂದ ಮುಕ್ತಿ ಕೊಡಿ ಎಂದು ಐಟಿಬಿಟಿ ಕಂಪನಿಗಳು ಪತ್ರದಲ್ಲಿ ಅಳಲು ತೊಡಿಕೊಂಡಿವೆ.

ಸರ್ಕಾರಕ್ಕೆ ಸಹಕಾರ ನೀಡಲು ಐಟಿ ಕಂಪನಿಗಳು ಬದ್ಧವಾಗಿವೆ. ವಿವರವಾದ ವರದಿಯನ್ನು ಒದಗಿಸಲು ಮತ್ತು ಬಾಕಿ ಉಳಿದಿರುವ ಕಾರ್ಯಗಳ ಕುರಿತು ಚರ್ಚಿಸಲು ಭರವಸೆ ನೀಡಿದಂತೆ ಉಪಮುಖ್ಯಮಂತ್ರಿಗಳು ಜನವರಿಯಲ್ಲಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!