ಹಾಸನ: ಐದೂವರೆ ತಿಂಗಳ ಹೆಣ್ಣು ಮಗುವೊಂದು ಫೋಟೋಗಳನ್ನು ನೋಡಿ ಅದರಲ್ಲಿರುವ ವಸ್ತುವನ್ನು ಗುರುತಿಸುವ ಮೂಲಕ ಅಂತಾರಾಷ್ಟ್ರೀಯ ದಾಖಲೆಗೆ ಪಾತ್ರವಾಗಿದೆ.
ಹಾಸನ ನಗರದ ಚನ್ನಪಟ್ಟಣದ ಭರತ್ ಹಾಗು ರಂಜಿತಾ ದಂಪತಿಯ ಐದುವರೆ ತಿಂಗಳ ಆರ್ವಿ ಎಂಬ ಹೆಣ್ಣು ಮಗು ಸುಮಾರು 125ಕ್ಕೂ ಹೆಚ್ಚು ಚಿತ್ರಗಳನ್ನು ಗುರುತಿಸುವ ಮೂಲಕ ನೋಬೆಲ್ ವರ್ಲ್ಡ್ ರೆಕಾರ್ಡ್, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂಡಿಗೆರೆ ಮೂಲದ ದಂಪತಿಗಳ ಪುತ್ರಿ ಐದುವರೆ ತಿಂಗಳು ಇರುವಾಗಲೇ ಕಾರ್ಡ್‌ನಲ್ಲಿರುವ ಹಣ್ಣು, ಪ್ರಾಣಿ, ಪಕ್ಷಿ ಸೇರಿ 125ಕ್ಕೂ ವಿವಿಧ ವಸ್ತುಗಳನ್ನು ಗುರುತಿಸಿ ದಾಖಲೆ ನಿರ್ಮಿಸಿ, ಸೂಪರ್ ಟ್ಯಾಲೆಂಟೆಡ್ ಕಿಡ್ ಎಂಬ ಬಿರುದು ಪಡೆದುಕೊಂಡಿದ್ದಾಳೆ.
ಈ ಬಗ್ಗೆ ಮಗುವಿನ ಪೋಷಕರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 'ಆರ್ವಿಗೆ ಪಸ್ತುತ 7 ತಿಂಗಳಾಗಿದ್ದು, 5 ತಿಂಗಳು ಇರುವಾಗಲೇ ಅವಳ ಎದುರು ಕಾರ್ಡ್‌ಗಳನ್ನು ಹಿಡಿದು ಇವುಗಳಲ್ಲಿನ ನಿರ್ಧಿಷ್ಟ ವಸ್ತುಗಳನ್ನು ಗುರುತಿಸುವಂತೆ ಹೇಳಿದರೆ ಕೈ ಬೆರಳಿನಲ್ಲಿ ತೋರಿಸುವ ಮೂಲಕ ಗುರುತಿಸುತ್ತಿದ್ದಳು ಎಂದು ಹೇಳಿದ್ದಾರೆ.
ಇದನ್ನು ಗಮನಿಸಿದ ಪೋಷಕರು, ಆಕೆಯ ಪ್ರತಿಭೆಯನ್ನು ಗುರುತಿಸಿ ವಿಡಿಯೋ ಮಾಡಿ ನೋಬೆಲ್ ವರ್ಲ್ಡ್ ರೇಕಾರ್ಡ್, ಇಂಟರ್ ನ್ಯಾಷನಲ್ ಬಕ್‌ಆಫ್ ರೆಕಾರ್ಡ್ ಕಳುಹಿಸಿಕೊಟ್ಟಿದ್ದರು. ಇದನ್ನು ಪರಿಶೀಲಿಸಿದ ಸಂಸ್ಥೆ ವರ್ಲ್ ರೆಕಾರ್ಡ್ ಆಗಿ ಪರಿಗಣಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.