ಸಾಂದರ್ಭಿಕ ಚಿತ್ರ 
ರಾಜ್ಯ

ಹಾವೇರಿ: ಮರಕ್ಕೆ ಕಾರು ಡಿಕ್ಕಿ, ನಾಲ್ವರು ಯುವಕರು ಸಾವು; ಮೂವರಿಗೆ ಗಾಯ

ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ.

ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ.

ಬೇವಿನಹಳ್ಳಿಯ ಏಳು ಯುವಕರು ಶನಿವಾರ ಬೆಳಗ್ಗೆ ತಮ್ಮೂರಿನಿಂದ ಕೆಲಸ ನಿಮಿತ್ತ ಬೆಳಗಾವಿ‌ ಜಿಲ್ಲೆಯ ಖಾನಾಪುರ ಸಮೀಪದ ನಂದಗಡ‌ಕ್ಕೆ ಹೊರಟಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರ ತಪ್ಪಿ ಹನುಮರಹಳ್ಳಿಯ ಬಳಿ‌ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ, ಕಾರು ಉರುಳಿ ರಸ್ತೆ ಪಕ್ಕದ ‌ತಗ್ಗಿನಲ್ಲಿ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ಭೀಕರ ಅಪಘಾತದಲ್ಲಿ ನೀಲಪ್ಪ ಮತ್ತು ಸಂದೀಪ್ ಸ್ಥಳದಲ್ಲೇ ಮೃತಪಟ್ಟರೆ, ಶಿವನಗೌಡ ಮತ್ತು ಕಲ್ಮೇಶ್ ಶಿಗ್ಗಾಂವ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಸಂಬಂಧ ಶಿಗ್ಗಾಂವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಚುನಾವಣೆಯಲ್ಲಿ BNP ಭರ್ಜರಿ ಗೆಲುವು: ತಾರಿಕ್ ರೆಹಮಾನ್ ಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP, ಇವರೇನಾ ಮುಂದಿನ ಪ್ರಧಾನ ಮಂತ್ರಿ ?

ಎಪ್ಸ್ಟೀನ್ ಜೊತೆಗಿನ 'ಸಂಬಂಧ': ಹರ್ದೀಪ್ ಪುರಿ ರಾಜೀನಾಮೆಗೆ ಸಂಸದರ ಒತ್ತಾಯ

Karnataka Budget 2026- ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿವು...

ತಿಹಾರ್ ಜೈಲಿನಲ್ಲಿದ್ದಾಗ 'ಹಿತ' ಕಾಯುವ ಭರವಸೆ ನೀಡಿದ್ದೀರಿ- ಸೋನಿಯಾ ಮುಂದೆ ಡಿಕೆಶಿ ಅಳಲು: ರಾಹುಲ್ ಭೇಟಿ ಬಳಿಕ ಹಸನ್ಮುಖರಾಗಿ ಹೊರಬಂದ DCM!

SCROLL FOR NEXT