ದರ್ಶನ್-ಪವಿತ್ರಾ ಗೌಡ PTI
ರಾಜ್ಯ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಹಾಗೂ ಇತರ 16 ಆರೋಪಿಗಳ ನ್ಯಾಯಾಂಗ ಬಂಧನ ಆಗಸ್ಟ್ 1ರವರೆಗೆ ವಿಸ್ತರಣೆ!

ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಇಂದು ಅಂತ್ಯಗೊಂಡಿದ್ದರಿಂದ ಅವರನ್ನು ಬೆಂಗಳೂರು ಮತ್ತು ತುಮಕೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಅವರ ಸ್ನೇಹಿತೆ ಪವಿತ್ರಾ ಗೌಡ ಹಾಗೂ ಇತರ 15 ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಶೇಷ ನ್ಯಾಯಾಲಯ ಆಗಸ್ಟ್ 1ವರೆಗೆ ವಿಸ್ತರಿಸಿದೆ.

ದರ್ಶನ್ ಮತ್ತು ಪವಿತ್ರಾ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಇಂದು ಅಂತ್ಯಗೊಂಡಿದ್ದರಿಂದ ಅವರನ್ನು ಬೆಂಗಳೂರು ಮತ್ತು ತುಮಕೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಗಳನ್ನು ಬಿಡುಗಡೆ ಮಾಡುವುದರಿಂದ ಪ್ರಸ್ತುತ ನಡೆಯುತ್ತಿರುವ ತನಿಖೆಗಳಿಗೆ ಅಡ್ಡಿಯಾಗಬಹುದು ಎಂದು ವಾದಿಸಿದರು. ಅಲ್ಲದೆ ಕಾನೂನಿನ ನಿರ್ಲಕ್ಷ್ಯವನ್ನು ಪ್ರದರ್ಶಿಸುವ ಮೂಲಕ ತಾಂತ್ರಿಕ, ಭೌತಿಕ ಮತ್ತು ವೈಜ್ಞಾನಿಕ ಪುರಾವೆಗಳನ್ನು ನಾಶಮಾಡಲು ಆರೋಪಿಗಳು ಆಪಾದಿತ ಪ್ರಯತ್ನಗಳನ್ನು ಪ್ರಾಸಿಕ್ಯೂಷನ್ ಎತ್ತಿ ತೋರಿಸಿದೆ.

ಅಲ್ಲದೆ ಆರೋಪಿ ದರ್ಶನ್ ಮನೆಯಿಂದ 83.65 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿರುವುದನ್ನು ಪ್ರಾಸಿಕ್ಯೂಟರ್ ಬಹಿರಂಗಪಡಿಸಿದರು. ಕೊಲೆಗೂ ಮುನ್ನ ಹಾಗೂ ನಂತರ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸಲು ವಿವಿಧ ಹೆಸರಿನಲ್ಲಿ ನೋಂದಾಯಿಸಲಾದ ಹಲವು ಸಿಮ್ ಕಾರ್ಡ್‌ಗಳನ್ನು ಅವರು ಬಳಸಿರುವುದು ಪತ್ತೆಯಾಗಿದೆ. ಜಾಮೀನು ನೀಡುವುದರಿಂದ ನಿರ್ಣಾಯಕ ಸಾಕ್ಷ್ಯ ನಾಶಕ್ಕೆ ಕಾರಣವಾಗಬಹುದು ಎಂದು ಪ್ರಾಸಿಕ್ಯೂಷನ್ ಒತ್ತಿ ಹೇಳಿದೆ.

ಏತನ್ಮಧ್ಯೆ, ಮನೆ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ 5 ವಿಕೆಟ್ ಗಳಿಂದ ಗೆದ್ದ ಪಂಜಾಬ್‌!

ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!

'ನಿಮ್ದೊಂದೆರಡು ಕಿತ್ತೋದ ವಿಮಾನವಾಹಕ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ, ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

SCROLL FOR NEXT