ನಂದಿ ಬೆಟ್ಟ 
ರಾಜ್ಯ

ನಂದಿ ಬೆಟ್ಟದ ಮೇಲೆ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆ!

ಎಲ್ಲವೂ ಅಂದುಕೊಂಡಂತೆ ನಡೆದರೆ (ಬಾಕಿ ಉಳಿದಿರುವ ಮಣ್ಣು ಪರೀಕ್ಷೆಯ ಫಲಿತಾಂಶಗಳು) DWR ಸ್ಥಾಪಿಸುವ ಕೆಲಸ ಎರಡು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಬೆಂಗಳೂರು: ಕರ್ನಾಟಕ ಕೊನೆಗೂ ಇದೇ ವರ್ಷ ತನ್ನದೇ ಆದ ಡಾಪ್ಲರ್ ವೆದರ್ ರಾಡಾರ್ ಹೊಂದಲಿದೆ. ಇದನ್ನು ಬೆಂಗಳೂರಿನಿಂದ 62 ಕಿಮೀ ದೂರದಲ್ಲಿರುವ ನಂದಿ ಬೆಟ್ಟದ ಮೇಲೆ ಸ್ಥಾಪಿಸಲಾಗುತ್ತಿದೆ. "ಎಲ್ಲವೂ ಅಂದುಕೊಂಡಂತೆ ನಡೆದರೆ (ಬಾಕಿ ಉಳಿದಿರುವ ಮಣ್ಣು ಪರೀಕ್ಷೆಯ ಫಲಿತಾಂಶಗಳು) DWR ಸ್ಥಾಪಿಸುವ ಕೆಲಸ ಎರಡು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

IMD ಅಧಿಕಾರಿಗಳ ತಂಡ ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ 10 ದಿನಗಳ ಹಿಂದೆ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದು, ನಾಲ್ಕು ಸೈಟ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಮಣ್ಣು ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಒಂದೂವರೆ ತಿಂಗಳ ನಂತರ ಫಲಿತಾಂಶ ತಿಳಿಯಲಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ ಜಿತೇಂದ್ರ ಸಿಂಗ್ ಅವರು ಇತ್ತೀಚೆಗೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲಿ ಇದೇ ವರ್ಷ ಸಿ- ಬ್ಯಾಂಡ್ ಡಾಪ್ಲರ್ ವೆದರ್ ರಾಡರ್ ನ್ನು ಸ್ಥಾಪಿಸಲಾಗುತ್ತಿದೆ. ಹಲವಾರು ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ರಾಡಾರ್‌ಗಾಗಿ ಸ್ಥಳವನ್ನು ಗುರುತಿಸಲಾಗಿದೆ ಮತ್ತು ಅದನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕದ ವಾಯುಪಡೆಯಲ್ಲಿಯೂ IMD ಭೂಮಿಯನ್ನು ಆಯ್ಕೆ ಮಾಡಿದೆ. ಇದಕ್ಕೆ ಐಎಎಫ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ನಂದಿ ಬೆಟ್ಟದ ಮಣ್ಣು DWR ಅಳವಡಿಸಲು ಅನುಕೂಲಕರವಾಗಿಲ್ಲದಿದ್ದರೆ, ಅದನ್ನು ಯಲಹಂಕದ ವಾಯುಪಡೆಯಲ್ಲಿ ಅಳವಡಿಸಲಾಗುವುದು. ಈಶಾನ್ಯ ರಾಜ್ಯಗಳಲ್ಲಿ ಬೆಟ್ಟಗಳ ಮೇಲೆ DWR ಸ್ಥಾಪಿಸಲಾಗಿದೆ. ನಂದಿ ಬೆಟ್ಟದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಯದ ಕಾರಣ ಅಲ್ಲಿ ರಾಡಾರ್ ಅಳವಡಿಸುವುದು ಸೂಕ್ತ. ಇದನ್ನು ಸ್ಥಾಪಿಸುವಲ್ಲಿ ಪ್ರಮುಖ ಸವಾಲು ಎಂದರೆ ಅದರ 40 ಕಿಮೀ ವ್ಯಾಪ್ತಿಯೊಳಗೆ ಯಾವುದೇ ಎತ್ತರದ ರಚನೆ ಇರಬಾರದು ಎಂದು ಪುವಿಯರಸನ್ ಹೇಳಿದರು.

ರಾಡಾರ್ ರಾಜ್ಯದಲ್ಲಿ ಮೋಡ ಅಧ್ಯಯನ ಮಾಡಲು ನೆರವು: ಡಾಪ್ಲರ್ ಹವಾಮಾನ ರಾಡಾರ್ ಗೋಪುರದ ಮೇಲಿರುವ ಗುಮ್ಮಟವನ್ನು ಒಳಗೊಂಡಿದೆ. ಗುಮ್ಮಟದ ಜೊತೆಗೆ ರಾಡಾರ್‌ನ ತೂಕ 6.5 ಟನ್ ಮತ್ತು ಗೋಪುರದ ಎತ್ತರ 25 ಮೀಟರ್.

ಸಂಪೂರ್ಣ ರಚನೆಗೆ ಅಗತ್ಯವಿರುವ ಸೈಟ್ 20x20 ಮೀಟರ್. ಮಣ್ಣಿನ ಪರೀಕ್ಷೆಯ ಹೊರತಾಗಿ, ನಂದಿ ಬೆಟ್ಟದ ಮೇಲೆ ಡಿಡಬ್ಲ್ಯೂಆರ್ ಅಳವಡಿಸಲು ಅಧಿಕಾರಿಗಳ ಮುಂದಿರುವ ಸವಾಲು ಎಂದರೆ ಗುಮ್ಮಟ, ಆಂಟೆನಾ ಮತ್ತು ರಾಡಾರ್ ಯಾವುದೇ ಹಾನಿಯಾಗದಂತೆ ಕೋಟೆ ದ್ವಾರವನ್ನು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳುವುದು. "ಗೇಟ್ ಒಂದು ಪಾರಂಪರಿಕ ರಚನೆಯಾಗಿದೆ ಮತ್ತು ಹಾನಿಗೊಳಗಾಗುವುದಿಲ್ಲ. ಹೀಗಾಗಿ ಸಲಕರಣೆಗಳನ್ನು ಒಳಗೆ ತೆಗೆದುಕೊಂಡು ಹೋಗಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ರಾಡಾರ್ ಅಳವಡಿಸಲು ಉದ್ದೇಶಿಸಿರುವ ಉದ್ಯಾನವನ ಮತ್ತು ಉದ್ಯಾನ ತೋಟಗಾರಿಕೆ ಇಲಾಖೆಗೆ ಸೇರಿದ್ದರೆ, ಕೋಟೆ, ದ್ವಾರ ಮತ್ತು ಗೋಡೆಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಿಸಿದೆ. ನಂದಿ ಬೆಟ್ಟದಲ್ಲಿನ ಕೋಟೆ, ಗೋಡೆಗಳು, ಪ್ರವೇಶ ದ್ವಾರ ಮತ್ತು ದೇವಾಲಯವನ್ನು 11 ನೇ ಶತಮಾನದಲ್ಲಿ ಪಾಳೇಗರ್ ರಾಜವಂಶದಿಂದ ನಿರ್ಮಿಸಲಾಗಿದ್ದು, ನಂತರ ಚೋಳರು, ವಿಜಯನಗರ ರಾಜವಂಶ ಮತ್ತು ಟಿಪ್ಪು ಸುಲ್ತಾನರಿಂದ ಬಲಪಡಿಸಲಾಯಿತು. DWR ಮೋಡಗಳು, ಅವುಗಳ ಸ್ಥಳ, ಗುಡುಗು, ಮೋಡದ ಆಳ, ದಿಕ್ಕು ಮತ್ತು ಗಾಳಿಯ ವೇಗ ಮತ್ತು ಮಾದರಿಯನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT