ಸಂಗ್ರಹ ಚಿತ್ರ TNIE
ರಾಜ್ಯ

ಕನಕಪುರದಲ್ಲಿ ಜಾತಿ ಸಂಘರ್ಷ: ದಲಿತ ವ್ಯಕ್ತಿಯ ಕೈ ಕತ್ತರಿಸಿದ ಶಸ್ತ್ರಸಜ್ಜಿತ ಗುಂಪು!

ಕನಕಪುರ ತಾಲೂಕಿನ ಮಳಗಾಲು ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಒಕ್ಕಲಿಗ ಸಮುದಾಯದ ಏಳು ಮಂದಿ ಶಸ್ತ್ರಸಜ್ಜಿತ ತಂಡ ಮಾರಣಾಂತಿಕ ದಾಳಿ ನಡೆಸಿದ್ದು ಘಟನೆಯಲ್ಲಿ ದಲಿತ ಯುವಕ ಅನೀಶ್ ಕುಮಾರ್ ಎಡಗೈ ತುಂಡಾಗಿದೆ ಎಂದು ವರದಿಯಾಗಿದೆ.

ರಾಮನಗರ: ಕನಕಪುರ ತಾಲೂಕಿನ ಮಳಗಾಲು ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಒಕ್ಕಲಿಗ ಸಮುದಾಯದ ಏಳು ಮಂದಿ ಶಸ್ತ್ರಸಜ್ಜಿತ ತಂಡ ಮಾರಣಾಂತಿಕ ದಾಳಿ ನಡೆಸಿದ್ದು ಘಟನೆಯಲ್ಲಿ ದಲಿತ ಯುವಕ ಅನೀಶ್ ಕುಮಾರ್ ಎಡಗೈ ತುಂಡಾಗಿದೆ ಎಂದು ವರದಿಯಾಗಿದೆ.

ಜುಲೈ 21ರಂದು ಅನೀಶ್ ತನ್ನ ಚಿಕ್ಕಪ್ಪನೊಂದಿಗೆ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬ ತನ್ನ ಜೊತೆಯಲ್ಲಿದ್ದವರ ಜೊತೆ ಅನೀಶ್‌ನ ಜಾತಿಯ ಬಗ್ಗೆ ಮಾತನಾಡಿದ್ದಾನೆ. ಇದು ಅನೀಶ್ ಮತ್ತು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ನಂತರ ಗುಂಪು ಕಟ್ಟಿಕೊಂಡು ಆರೋಪಿಗಳು ಅನೀಶ್ ಮನೆಗೆ ನುಗ್ಗಿ ಜಾತಿ ನಿಂದನೆ ಮಾಡಿ ಕುಟುಂಬಸ್ಥರನ್ನು ನಿಂದಿಸಿದ್ದಲ್ಲದೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ.

ಸದ್ಯ ಅನೀಶ್ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡ ಕುಟುಂಬದ ಇತರ ಸದಸ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದು ಮೂವರು ತಲೆಮರೆಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

ಕೇರಳಿಗರದ್ದು ಇದೆಂಥ ಮನಸ್ಥಿತಿ: ನಟಿ ಮಾಳವಿಕಾಗೆ ಗೋಮಾಂಸ ಇಷ್ಟನಾ? ತಿಂತೀರಾ ಅಂತ ಕೇಳಿದ ಪತ್ರಕರ್ತ; ನೆಟ್ಟಿಗರ ಆಕ್ರೋಶ, Video!

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

‘ಆಕೆಯ ಹಿಂದಿನ ಚಟುವಟಿಕೆಗಳು ಹೇಗಿದ್ದವು?’: ಕಂಗನಾಗೆ ಬಾಬಾ ರಾಮ್​ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ

ಹನೂರು ಶೂಟೌಟ್ ಪ್ರಕರಣ: ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಬೇಡಿ, ನಿಮ್ಮ ಕೆಲಸ ನೋಡ್ಕೊಳ್ಳಿ; ತಮಿಳುನಾಡಿಗೆ ಸಿಎಂ ಡಿಕೆಶಿ ವಾರ್ನಿಂಗ್!