ಬೆಂಗಳೂರು: ಈ ಬಾರಿ ಉತ್ತಮ ಮುಂಗಾರಿನಿಂದ ಮಳೆಗಾಲದ ಮಧ್ಯಭಾಗವಾದ ಈ ತಿಂಗಳು ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿದ್ದಂತೆ, ಎಲ್ಲಾ ಜಲಾಶಯಗಳಲ್ಲಿ ಹೂಳು ತುಂಬಿರುವ ಬಗ್ಗೆ ಅಧ್ಯಯನ ಕೈಗೊಳ್ಳಲು ತಜ್ಞರೊಂದಿಗೆ ರಾಜ್ಯ ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಯೋಜನೆಗಳನ್ನು ಉತ್ತಮವಾಗಿ ಯೋಜಿಸಲು ಈ ಅಧ್ಯಯನ ಸಹಾಯ ಮಾಡುವುದಲ್ಲದೆ, ಅಣೆಕಟ್ಟು ಸುರಕ್ಷತೆಗೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಪ್ರವಾಹವನ್ನು ತಡೆಯಲು ಕ್ರಮ ಕೈಗೊಳ್ಳುವಲ್ಲಿ ಸಹಾಯ ಮಾಡುತ್ತದೆ. ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ಮೇಲ್ವಿಚಾರಣಾ ಕೇಂದ್ರದ (KSNDMC) ಮಾಹಿತಿ ಪ್ರಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇಕಡಾ 94, ಕೃಷ್ಣಾ ಜಲಾನಯನದಲ್ಲಿ ಶೇಕಡಾ 80ರಷ್ಟು ಮತ್ತು ವಾಣಿ ವಿಲಾಸ ಸಾಗರದಲ್ಲಿ ಶೇಕಡಾ 59ರಷ್ಟು ನೀರು ಸಂಗ್ರಹವಾಗಿದೆ. ನಿನ್ನೆ ಜುಲೈ 27 ರಂದು ಎಲ್ಲಾ ಜಲಾಶಯಗಳ ಒಟ್ಟಾರೆ ಸಂಗ್ರಹ ಮಟ್ಟವು ಶೇಕಡಾ 77ರಷ್ಟಾಗಿದೆ.
ಜುಲೈ ತಿಂಗಳಲ್ಲಿ ರಾಜ್ಯದ ಜಲಾಶಯಗಳು ಉತ್ತಮ ಮಟ್ಟ ತಲುಪಿರುವುದು ಇದೇ ಮೊದಲಲ್ಲ. 2018-19ರಲ್ಲಿ ತೀವ್ರ ಪ್ರವಾಹ ಉಂಟಾದಾಗ ಜಲಾಶಯದ ಮಟ್ಟ ಬಹುತೇಕ ತುಂಬಿತ್ತು. 2021 ಮತ್ತು 2022 ರಲ್ಲೂ ಇದೇ ರೀತಿಯಾಗಿತ್ತು. ಕಳೆದ ವರ್ಷ ಮಾತ್ರ, ರಾಜ್ಯವು ಭೀಕರ ಬರವನ್ನು ಎದುರಿಸಿದಾಗ, ಜಲಾಶಯಗಳು ಭರ್ತಿಯಾಗಿರಲಿಲ್ಲ, ಸರಾಸರಿ ಶೇಕಡಾ 56ರಷ್ಟು ತುಂಬಿದ್ದವು. ಈಗ ಮುಂಗಾರು ಉತ್ತಮವಾಗಿರುವುದರಿಂದ ನೀರಿನ ಹರಿವು ಕೂಡ ಚೆನ್ನಾಗಿದೆ. 5-6 ವರ್ಷಗಳ ನಂತರ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಅಧ್ಯಯನ ವರದಿಯನ್ನು ಕಾವೇರಿ ನ್ಯಾಯಮಂಡಳಿಯೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ (WRD) ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್ ಪ್ರತಿನಿಧಿಗೆ ತಿಳಿಸಿದರು.
ಜಲಾಶಯಗಳಿಗೆ ಅನುಮತಿಸಲಾದ ರಾಷ್ಟ್ರೀಯ ಹೂಳು ಶೇಖರಣೆ ಮಟ್ಟವು ಶೇಕಡಾ 3ರಷ್ಟಾಗಿದೆ. ಇತ್ತೀಚಿನ ಅಧ್ಯಯನ ವರದಿಯಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಇದು ಶೇಕಡಾ 2ರಷ್ಟು ಮತ್ತು ಕೃಷ್ಣಾ ಜಲಾನಯನದಲ್ಲಿ ಇದು ಶೇಕಡಾ 3ಕ್ಕಿಂತ ಕಡಿಮೆ ಭಾಗವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಅತಿ ಹೆಚ್ಚು ಹೂಳು ಸಂಗ್ರಹವಾಗಿದ್ದು, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 135 ಟಿಎಂಸಿ ಅಡಿಯಿಂದ 105 ಟಿಎಂಸಿಗೆ ಕುಸಿದಿದೆ.
ಉತ್ತಮ ಮಳೆಯಾಗಿ ಜಲಾಶಯಗಳಲ್ಲಿ ನೀರು ತುಂಬಿರುವಾಗ ಗಣಿತದ ವಿಧಾನಗಳು ಮತ್ತು ಸೋನೋಗ್ರಫಿ ತಂತ್ರಜ್ಞಾನವನ್ನು ಬಳಸಿ ಹೂಳು ಅಧ್ಯಯನವನ್ನು ನಡೆಸಲಾಗುತ್ತದೆ. ಅವುಗಳನ್ನು . ಈಗ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅಣೆಕಟ್ಟುಗಳ ಒತ್ತಡದ ಮಟ್ಟ ಹೆಚ್ಚುತ್ತಿದೆ. ಜಲಾಶಯಗಳು ಮತ್ತು ಜಲಾನಯನ ಪ್ರದೇಶಗಳ ಸುತ್ತ ಅತಿಕ್ರಮಣಗಳು ಹೆಚ್ಚುತ್ತಿವೆ, ಹೂಳು ಮಟ್ಟವನ್ನು ಕಂಡುಹಿಡಿಯುವುದು ಮತ್ತು ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಅಣೆಕಟ್ಟುಗಳು ಅವುಗಳ ಗರಿಷ್ಠ ಮಟ್ಟಕ್ಕೆ ತುಂಬಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಏಕೆಂದರೆ ಇದು ರಚನೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಪ್ರವಾಹಕ್ಕೆ ಕಾರಣವಾಗಬಹುದು. ನಾವು ಜಲಾಶಯಗಳ ನೀರಿನ ಮಟ್ಟವನ್ನು ಶೇಕಡಾ 70ಕ್ಕಿಂತ ಕಡಿಮೆ ಇರಿಸಲು ಪ್ರಯತ್ನಿಸುತ್ತಿದ್ದೇವೆ. ಮುಂಗಾರು ಕ್ಷೀಣಿಸಿದಾಗ ಆಗಸ್ಟ್ ಅಂತ್ಯದ ವೇಳೆಗೆ ಅಣೆಕಟ್ಟುಗಳು ಪೂರ್ಣ ಪ್ರಮಾಣದಲ್ಲಿ ತುಂಬಲಿವೆ ಎಂದು ಅಧಿಕಾರಿ ವಿವರಿಸಿದರು.
ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಜೂನ್ 1 ಮತ್ತು ಜುಲೈ 27 ರ ನಡುವೆ ಕರ್ನಾಟಕವು ಶೇಕಡಾ 28ರಷ್ಟು ಹೆಚ್ಚುವರಿ ಮಳೆಯನ್ನು ಪಡೆದಿದೆ. ಸಾಮಾನ್ಯ ಮುನ್ಸೂಚನೆಯ 421.8 ಮಿಲಿ ಮೀಟರ್ ಗೆ ವಿರುದ್ಧವಾಗಿ, ರಾಜ್ಯದಲ್ಲಿ ಈ ಅವಧಿಗೆ 541.9 ಮಿಲಿ ಮೀಟರ್ ಮಳೆಯಾಗಿದೆ.
ಬಲವಾದ ಗಾಳಿ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಾದ್ಯಂತ ಬಲವಾದ ಗಾಳಿ ಬೀಸುವ ಎಚ್ಚರಿಕೆಯನ್ನು ನೀಡಿದ್ದು, ಜನರು ವಿಶೇಷವಾಗಿ ಮೀನುಗಾರರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಗಾಳಿಯ ವೇಗ ಗಂಟೆಗೆ 50-60 ಕಿ.ಮೀ ಬೀಸಬಹುದು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಜುಲೈ 20 ರಂದು ಮಧ್ಯಾಹ್ನ 2.05 ಮತ್ತು ಜುಲೈ 25 ರಂದು ಮಧ್ಯಾಹ್ನ 3.20 ಕ್ಕೆ 52 ಕಿ.ಮೀ ವೇಗದ ಗಾಳಿಯ ವೇಗ ದಾಖಲಾಗಿದೆ.
ಮಳೆ
ಕರಾವಳಿ ಕರ್ನಾಟಕದಲ್ಲಿ ಶೇ.29ರಷ್ಟು ಅಧಿಕ ಮಳೆ ದಾಖಲಾಗಿದೆ. ಇಲ್ಲಿ 2,361.8 ಮಿಲಿ ಮೀಟರ್ ದಾಖಲಾಗಿದೆ. ಉತ್ತರ-ಆಂತರಿಕ ಕರ್ನಾಟಕವು ಶೇಕಡಾ 26ರಷ್ಟು ಮಳೆ ಪಡೆದಿದೆ. 206.4mm ನ ರೂಢಿಗೆ ವಿರುದ್ಧವಾಗಿ, 260.5ಮಿಲಿ ಮೀಟರ್ ನ್ನು ದಾಖಲಿಸಿದೆ. ದಕ್ಷಿಣ-ಆಂತರಿಕ ಕರ್ನಾಟಕದಲ್ಲಿ ಶೇಕಡಾ 29ರಷ್ಟು ದಾಖಲಾಗಿದೆ.