ಬೆಂಗಳೂರು: ಲೋಕಸಭಾ ಚುನಾವಣೆ 2024ರಲ್ಲಿ ಬಿಜೆಪಿ ಶೇ. 46. 06 ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಕಳೆದ ಬಾರಿಗಿಂತ ಕುಸಿದಿದೆ.
ವಿಪಕ್ಷ ಕಾಂಗ್ರೆಸ್ ಶೇಕಡಾ 45. 43 ರಷ್ಟು ಮತಗಳನ್ನು ಪಡೆದರೆ, ಜೆಡಿಎಸ್ ಶೇ. 5.60, ನೋಟಾದಲ್ಲಿ ಶೇ. 0.56, ಬಿಎಸ್ ಪಿ ಶೇ. 0.33 ಸಿಪಿಐ (ಎಂ) ಶೇ. 0.01 ಮತ್ತು ಇತರೆ ಪಕ್ಷಗಳು ಶೇ. 2.02 ಮತಗಳನ್ನು ಗಳಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 51.75, ಕಾಂಗ್ರೆಸ್ 32. 11, ಜೆಡಿಎಸ್ 9.74 ಬಿಎಸ್ ಪಿ ಶೇ.1-18 ಪಕ್ಷೇತರರು ಶೇ. 3.92 ರಷ್ಟು ಮತಗಳಿಸಿದ್ದರು. ಶೇ. 0.72 ನೋಟಾ ಮತ ಗಳಿಕೆಯಾಗಿತ್ತು.
ಇನ್ನೂ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 43 ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ ಶೇ. 40.80, ಜೆಡಿಎಸ್ ಶೇ.11, ಇತರರು ಶೇ.5.25 ಮತ ಪಡೆದಿತ್ತು.