ವಿಠಲನ ಪ್ರತಿಮೆ ಹಿಂತಿರುಗಿಸಲು ಹಂಪಿ ನಾಗರಿಕರ ಒತ್ತಾಯ 
ರಾಜ್ಯ

ಕರ್ನಾಟಕ: ಚೆನ್ನೈನ ವಸ್ತು ಸಂಗ್ರಹಾಲಯದಲ್ಲಿರುವ ವಿಠಲನ ಪ್ರತಿಮೆ ಹಿಂತಿರುಗಿಸಲು ಹಂಪಿ ನಾಗರಿಕರ ಒತ್ತಾಯ

ಬ್ರಿಟಿಷರ ಆಳ್ವಿಕೆಯಲ್ಲಿ ಚೆನ್ನೈನ ಮ್ಯೂಸಿಯಂಗೆ ಕೊಂಡೊಯ್ಯಲಾಗಿದ್ದ ಹಂಪಿಗೆ ಸೇರಿದ್ದ ವಿಠಲನ ಪ್ರತಿಮೆಯನ್ನು ವಾಪಸ್ ನೀಡುವಂತೆ ಹಂಪಿಯ ಸ್ಥಳೀಯರು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ: ಬ್ರಿಟಿಷರ ಆಳ್ವಿಕೆಯಲ್ಲಿ ಚೆನ್ನೈನ ಮ್ಯೂಸಿಯಂಗೆ ಕೊಂಡೊಯ್ಯಲಾಗಿದ್ದ ಹಂಪಿಗೆ ಸೇರಿದ್ದ ವಿಠಲನ ಪ್ರತಿಮೆಯನ್ನು ವಾಪಸ್ ನೀಡುವಂತೆ ಹಂಪಿಯ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯ ವಿಠ್ಠಲ ದೇವಸ್ಥಾನದ ಸಂಕೀರ್ಣದಲ್ಲಿ ನೂರಾರು ವರ್ಷಗಳಿಂದ ಪ್ರತಿಮೆಯಿಲ್ಲದೆ ಉಳಿದಿರುವ ಕಾರಣ ವಿಠಲನ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳೀಯರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಒತ್ತಾಯಿಸಿದ್ದಾರೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಹಂಪಿ ಪ್ರದೇಶದ ಸಾರ್ವಜನಿಕ ಕಲ್ಯಾಣ ಸಂಘದ ಸದಸ್ಯರು ಈ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಹಂಪಿಯ ಬಾಲಕೃಷ್ಣನ ದೇವಸ್ಥಾನದಲ್ಲಿದ್ದ 14ನೇ ಶತಮಾನದ ಶ್ರೀಕೃಷ್ಣನ ಪ್ರತಿಮೆಯನ್ನು ಬ್ರಿಟಿಷರು ಚೆನ್ನೈನ ಎಗ್ಮೋರ್ ಮ್ಯೂಸಿಯಂಗೆ ಸ್ಥಳಾಂತರಿಸಿದ್ದರು. ಹೀಗಾಗಿ ಮೂಲತಃ ಹಂಪಿಯಿಂದ ಬಂದಿರುವ ಮತ್ತು ಈಗ ಭಾರತದ ವಿವಿಧ ವಸ್ತುಸಂಗ್ರಹಾಲಯಗಳಲ್ಲಿ ಇರುವ ಪ್ರತಿಮೆಗಳನ್ನು ಪಟ್ಟಿ ಮಾಡಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಎಎಸ್‌ಐ ಒಪ್ಪಿಗೆ ನೀಡಿದೆ ಎಂದು ಸಂಘದ ಅಧ್ಯಕ್ಷ ವಿರೂಪಾಕ್ಷಿ ವಿ ತಿಳಿಸಿದ್ದಾರೆ.

“ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರತಿಮೆ ಪತ್ತೆಯಾಗಿದೆ ಮತ್ತು ಅದು ಹಂಪಿ ಸಂಪರ್ಕವನ್ನು ಹೊಂದಿದೆ. ಅದೇ ರೀತಿ ಚೆನ್ನೈ ಮ್ಯೂಸಿಯಂನಲ್ಲಿರುವ ಬಾಲ ಕೃಷ್ಣನ ಪ್ರತಿಮೆಯು ಅದರ ಮೂಲ ಸ್ಥಳ ಮತ್ತು ಯುಗದ ವಿವರಗಳನ್ನು ಹೊಂದಿದೆ. ಹೀಗಾಗಿ ಹಂಪಿಯ ಮ್ಯೂಸಿಯಂನಲ್ಲಿ ಪ್ರತಿಮೆ ಇರಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಪ್ರತಿಮೆಯು ಭಾಗಶಃ ಮುರಿದಿದ್ದರೂ, ಶ್ರೀಕೃಷ್ಣನ ಮುಖದ ಉತ್ತಮ ಕೆತ್ತನೆಯು ಹಂಪಿಯ ವೈಭವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

“ಚೆನ್ನೈ ಮ್ಯೂಸಿಯಂನಿಂದ ಬಾಲ ಕೃಷ್ಣನ ಪ್ರತಿಮೆಯನ್ನು ಮರಳಿ ತರಲು ಪ್ರಯತ್ನಿಸಲಾಗುವುದು ಎಂದು ಎಎಸ್ಐ ಅಧಿಕಾರಿಗಳು ಭರವಸೆ ನೀಡಿದ್ದಾರೆ. ವಿಜಯ ವಿಠ್ಠಲ ದೇವಸ್ಥಾನದಲ್ಲಿ ಪ್ರತಿಮೆ ಸ್ಥಾಪಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿರುವುದರಿಂದ ಸಮಯ ತೆಗೆದುಕೊಳ್ಳಬಹುದು. ಅಯೋಧ್ಯೆ ಮತ್ತು ಇತರೆಡೆ ದೇವಸ್ಥಾನಗಳನ್ನು ಮಾರ್ಪಡಿಸಬಹುದಾದಾಗ, ಪ್ರತಿಮೆ ಸ್ಥಾಪಿಸಲು ಏನು ಸಮಸ್ಯೆ? ಪ್ರತಿಯೊಬ್ಬ ಪ್ರವಾಸಿಗರು ಸ್ಮಾರಕವನ್ನು ವಿಜಯ ವಿಠ್ಠಲ ದೇವಾಲಯ ಎಂದು ಸಂಬೋಧಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ದೇವರ ಪ್ರತಿಮೆ ಇಲ್ಲ ಎಂದು ಅವರು ಹೇಳಿದರು.

ಎಎಸ್‌ಐ ಅಧಿಕಾರಿಗಳು ಸಂಘದ ಸದಸ್ಯರಿಗೆ ಲಿಖಿತ ಟಿಪ್ಪಣಿಯನ್ನು ನೀಡುವ ನಿರೀಕ್ಷೆಯಿದೆ ಮತ್ತು ಅವರು ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ನಡೆಸಲು ಯೋಜಿಸಿದ್ದಾರೆ. ವಿಜಯ ವಿಠಲ ದೇವಸ್ಥಾನವನ್ನು ಸ್ಮಾರಕವೆಂದು ಸೂಚಿಸಲಾಗಿದೆ ಮತ್ತು ಪ್ರತಿಮೆಯನ್ನು ಸ್ಥಾಪಿಸಲು ಅನುಮತಿ ನೀಡಬಹುದೆಂದು ನಮಗೆ ಖಚಿತವಿಲ್ಲ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸಲಾಗುವುದು’ ಎಂದು ಎಎಸ್‌ಐ ಹಂಪಿ ವೃತ್ತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT