ಸಾಂಕೇತಿಕ ಚಿತ್ರ online desk
ರಾಜ್ಯ

ಉಡುಪಿ: 10ನೇ ತರಗತಿ ವಿದ್ಯಾರ್ಥಿಗಳಿಗೆ ಇ-ಮೇಲ್ ಮೂಲಕ ತರಗತಿಗಳ ವಿಡಿಯೋ

ಉಡುಪಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿನೂತನ ಕ್ರಮ ಕೈಗೊಂಡಿದೆ.

ಉಡುಪಿ: ಉಡುಪಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿನೂತನ ಕ್ರಮ ಕೈಗೊಂಡಿದೆ.

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸಾಮಾನ್ಯ ತರಗತಿಗಳ ಹೊರತಾಗಿ ಇ ಮೇಲ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳ ಪಾಠವಿರುವ ವಿಡಿಯೋ ಕಳಿಸಿಕೊಡಲಾಗುತ್ತದೆ. ಶಾಲಾ ಅವಧಿ ಮುಕ್ತಾಯಗೊಂಡ ನಂತರ ಹಾಗೂ ರಜೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ಮಾಡುವುದಕ್ಕೆ ಇದು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಶ್ರೇಯಾಂಕದಲ್ಲಿ ಜಿಲ್ಲೆ ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ.

ಇಲಾಖೆಯ ಮೂಲಗಳು TNIE ಗೆ ಈ ಉಪಕ್ರಮವು ಪ್ರಾಥಮಿಕವಾಗಿ ಕೆಲವು ಅಂತರ್ಮುಖಿ ವಿದ್ಯಾರ್ಥಿಗಳ ಅಗತ್ಯವನ್ನು ಮನಗಂಡು ರೂಪಿಸಲ್ಪಟ್ಟಿದೆ. ಇಂತಹ ವಿದ್ಯಾರ್ಥಿಗಳು ತರಗತಿಯಲ್ಲಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ.

‘‘ಜಿಲ್ಲೆಯಾದ್ಯಂತ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಷಯ ಪರಿಣಿತರನ್ನು ಆಯಾ ಬ್ಲಾಕ್ ಶಿಕ್ಷಣಾಧಿಕಾರಿಗಳು (ಬಿಇಒ) ಆಯ್ಕೆ ಮಾಡಿದ್ದು ಅವರ ವೀಡಿಯೊ ತರಗತಿಗಳನ್ನು ಮಣಿಪಾಲದ ರಜತಾದ್ರಿಯಲ್ಲಿರುವ ಡಿಸಿ ಕಚೇರಿ ಬಳಿಯ ಜಿಲ್ಲಾ ಸಂಪನ್ಮೂಲ ಕೇಂದ್ರದ ಸ್ಟುಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದೆ.

ವೀಡಿಯೊಗಳನ್ನು ಈಗ ವಿದ್ಯಾರ್ಥಿಗಳ ಮೇಲ್ ಐಡಿಗಳಿಗೆ ಕಳುಹಿಸಲಾಗುತ್ತದೆ. ತರಗತಿಯ ಸಮಯದಲ್ಲಿ ಪಾಠಗಳು ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು ಮನೆಯಲ್ಲಿ ಮತ್ತು ರಜಾದಿನಗಳಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು. ಇದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುವ ಪೂರಕ ವ್ಯವಸ್ಥೆಯಾಗಿದೆ,’’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲರಾದ ಡಾ ಅಶೋಕ್ ಕಾಮತ್ ಮಾತನಾಡಿ, ಎಲ್ಲಾ ಪ್ರಮುಖ ವಿಷಯಗಳು ಮತ್ತು ಭಾಷೆಗಳಲ್ಲಿ ಪ್ರತಿ ಅಧ್ಯಾಯದ ವೀಡಿಯೊಗಳನ್ನು ಸಿದ್ಧಪಡಿಸಲಾಗುತ್ತಿದೆ. ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಲ್ ಅವರು ಈ ಯೋಜನೆಗೆ ಬೆಂಬಲ ನೀಡಿದ್ದಾರೆ, ಇದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಮೇಲೆ ದೀರ್ಘಾವಧಿಯ ಪರಿಣಾಮ ಹೊಂದಿರಲಿದೆ ಎಂದು ತಿಳಿಸಿದ್ದಾರೆ.

ಡಿಡಿಪಿಐ ಕೆ ಗಣಪತಿ ಮಾತನಾಡಿ, ಮೇಲ್ ಮೂಲಕ ಕಳಿಸಲಾಗುವ ಪಾಠಗಳು ವಿದ್ಯಾರ್ಥಿಗಳಿಗೆ ಬದಲಿ ಕಲಿಕೆಯ ವಿಧಾನವಾಗಿದೆ ಏಕೆಂದರೆ ಅವುಗಳು ಹೊಂದಿಕೊಳ್ಳುವ ಮತ್ತು ಸಮಗ್ರವಾಗಿರುತ್ತವೆ. ವಿಷಯ ತಜ್ಞರಿಂದ ವಿಡಿಯೋ ರೆಕಾರ್ಡಿಂಗ್ ಕಾರ್ಯ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು. ಅನಾರೋಗ್ಯದ ಕಾರಣದಿಂದ ಕೆಲವು ತರಗತಿಗಳನ್ನು ಬಿಟ್ಟುಬಿಡಬೇಕಾದ ವಿದ್ಯಾರ್ಥಿಗಳು ವೀಡಿಯೊಗಳನ್ನು ವೀಕ್ಷಿಸುವ ಮೂಲಕ ಕಳೆದುಹೋದ ಸಮಯವನ್ನು ಸಹ ಸರಿದೂಗಿಸಿಕೊಳ್ಳಬಹುದಾಗಿದೆ.

ಪೋಷಕರು ಈ ಉಪಕ್ರಮವನ್ನು ಹೆಚ್ಚಾಗಿ ಸ್ವಾಗತಿಸಿದ್ದಾರೆ. ತಮ್ಮ ಮಗಳು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಅಧ್ಯಯನ ಸಾಮಗ್ರಿಗಳನ್ನು ಪಡೆಯಬಹುದು ಎಂದು ಪೋಷಕರಾದ ತಾರಾನಾಥ್ ಹೇಳಿದರು. "ಆಧುನಿಕ ಶಿಕ್ಷಣಕ್ಕೆ ಸೂಕ್ತವಾದ ನವೀನ ಕಲ್ಪನೆಗಳನ್ನು ಸರ್ಕಾರವು ಮುಂದಿಡಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT