ಪ್ರಾತಿನಿಧಿಕ ಚಿತ್ರ 
ರಾಜ್ಯ

ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ. ಬಿಎಂಟಿಸಿ ಬಸ್ ದರಗಳನ್ನು 2014ರಲ್ಲಿ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಯಿತು.

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಹೇಳಿದ್ದಾರೆ.

ಸರ್ಕಾರಿ ಮತ್ತು ವಾಣಿಜ್ಯ ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಕಡ್ಡಾಯವಾಗಿ ಮಾಡಲಾದ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನಗಳು ಮತ್ತು ಪ್ಯಾನಿಕ್ ಬಟನ್‌ಗಳಿಂದ (ಸೆಪ್ಟೆಂಬರ್ ವೇಳೆಗೆ) ಡೇಟಾವನ್ನು ಸ್ವೀಕರಿಸುವ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

'ಬಿಎಂಟಿಸಿ ಬಸ್ ದರಗಳನ್ನು 2014ರಲ್ಲಿ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಯಿತು. ದರ ಪರಿಷ್ಕರಣೆ ನಂತರ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ' ಎಂದರು.

ಪ್ರಯಾಣ ದರ ಏರಿಕೆ ರಾಜಕೀಯ ಸಮಸ್ಯೆಯಾಗಲಿದೆ. ಆದರೆ, ಪ್ರಯಾಣ ದರವನ್ನು ಹೆಚ್ಚಿಸದಿದ್ದರೆ, ಸರ್ಕಾರವು ಬಸ್ ನಿಗಮಗಳಿಗೆ ವಿಶೇಷ ಅನುದಾನವನ್ನು ನೀಡಬೇಕಾಗಬಹುದು. ನಾಲ್ಕು ನಿಗಮಗಳ ಮಂಡಳಿಗಳಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಬಂದಿಲ್ಲ ಎಂದರು.

ಮಂಡಳಿಗಳು ಶೇ 25-30 ರಷ್ಟು ದರ ಹೆಚ್ಚಳವನ್ನು ಬಯಸಬಹುದು. ನಾವು ಆ ಮಟ್ಟಿಗೆ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ. ಪ್ರಸ್ತಾವನೆ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಳೆದ ವರ್ಷದ ಶಕ್ತಿ ಯೋಜನೆ ವೆಚ್ಚಕ್ಕೆ 1,100 ಕೋಟಿ ರೂ. ಗಳನ್ನು ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಬೆಳಗಾವಿಯಲ್ಲಿ ಎಂಇಎಸ್, ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ; ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರ ಬಂದ್!

ತಾಪಮಾನದಲ್ಲಿ ಮತ್ತಷ್ಟು ಕುಸಿತ: ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಳ, ವಾಯು ಗುಣಮಟ್ಟದಲ್ಲೂ ಬದಲಾವಣೆ

ಮಧ್ಯಪ್ರದೇಶ: ಕೋಟಿ ಕೋಟಿ ಬಹುಮಾನ ಹೊಂದಿದ್ದ 10 ನಕ್ಸಲರು ಶಸ್ತ್ರಾಸ್ತ್ರ ಸಹಿತ ಶರಣಾಗತಿ!

SCROLL FOR NEXT