ಸಂಗ್ರಹ ಚಿತ್ರ 
ರಾಜ್ಯ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ: 'ಸ್ವಾರ್ಮ್ ಡ್ರೋನ್ ತಂತ್ರಜ್ಞಾನ' ಬಳಕೆಗೆ ಬೆಂಗಳೂರು ಸಂಚಾರ ಪೊಲೀಸರು ಮುಂದು!

ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು ಡಸಾಲ್ಟ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಲಾ ಫೌಂಡೇಶನ್ ಸಹಯೋಗದಲ್ಲಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ ಅನ್ನು ಬಳಸಿಕೊಂಡು ಸ್ವಾರ್ಮ್ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಬೆಂಗಳೂರು: ಸಂಚಾರ ದಟ್ಟಣೆ ಪತ್ತೆ, ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ನೈಜ-ಸಮಯದ ಡೇಟಾವನ್ನು ಒದಗಿಸಲು ಸುಧಾರಿತ ಸಂವೇದಕಗಳೊಂದಿಗೆ ಡ್ರೋನ್‌ಗಳನ್ನು ಸಜ್ಜುಗೊಳಿಸಲು, ಬೆಂಗಳೂರು ಟ್ರಾಫಿಕ್ ಪೊಲೀಸ್ (ಬಿಟಿಪಿ) ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ಸಹಯೋಗದೊಂದಿಗೆ ಸ್ವಾರ್ಮ್ ಡ್ರೋನ್ ತಂತ್ರಜ್ಞಾನವನ್ನು ಗುರುವಾರ ಬಿಡುಗಡೆ ಮಾಡಿದೆ.

ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು ಡಸಾಲ್ಟ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಲಾ ಫೌಂಡೇಶನ್ ಸಹಯೋಗದಲ್ಲಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ ಅನ್ನು ಬಳಸಿಕೊಂಡು ಸ್ವಾರ್ಮ್ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನವು ನೈಜ ಸಮಯದಲ್ಲಿ ಸಂಚಾರ ವ್ಯವಸ್ಥೆ ನಿಗಾವಹಿಸುವ, ಅಪಘಾತದ ವರದಿ ಸಲ್ಲಿಸುವ ಮತ್ತು ಟ್ರಾಫಿಕ್ ಕಡಿಮೆ ಮಾಡುವ ವಿಚಾರದಲ್ಲಿ ನೆರವಾಗಲಿದ್ದು, ಬೆಂಗಳೂರಿನ ಸಂಚಾರ ನಿರ್ವಹಣಾ ಸಾಮರ್ಥ್ಯವನ್ನು ಉತ್ಕೃಷ್ಟಗೊಳಿಸಲು ನೆರವಾಗಲಿದೆ.

ಸ್ವಾರ್ಮ್ ತಂತ್ರಜ್ಞಾನವು ಡ್ರೋನ್ ಉತ್ಪನ್ನಗಳಲ್ಲಿ ಮಹತ್ವದ್ದಾಗಿದ್ದು, ಹಲವಾರು ಕೈಗಾರಿಕೆಗಳಿಗೆ ವೈಮಾನಿಕ ಪರಿಹಾರವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ಯಲಹಂಕದಲ್ಲಿರುವ ನಿಟ್ಟೆ ಕ್ಯಾಂಪಸ್‌ನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಮುಖ್ಯಸ್ಥ ಎಂ.ಎನ್.ಅನುಚೇತ್ ಅವರಿಗೆ ಈ ತಂತ್ರಜ್ಞಾನವನ್ನು ಪ್ರಸ್ತುತಪಡಿಸಲಾಯಿತು.

ವಿಶೇಷವಾಗಿ ಈ ತಂತ್ರಜ್ಞಾನವನ್ನು ಬೆಳೆಗಳ ಆರೋಗ್ಯದ ಕುರಿತು ನಿಗಾ ವಹಿಸಲು, ಕೀಟನಾಶಕ ಸಿಂಪಡಿಸಲು ಬಳಸಬಹುದಾಗಿದ್ದು, ಇವು ಈ ತಂತ್ರಜ್ಞಾನದ ವೈವಿಧ್ಯಮಯತೆಯನ್ನು ತೋರಿಸುತ್ತದೆ. ಈ ಉತ್ಪನ್ನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಜಿಕೆವಿಕೆಗೆ ಹಸ್ತಾಂತರಿಸಲಾಯಿತು.

ಉತ್ಪನ್ನಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಿದ ಬಳಿಕ ಎನ್‌ಎಂಐಟಿಯ ಸಂಶೋಧನಾ ತಂಡದವರು ಸ್ವಾರ್ಮ್ ಡ್ರೋನ್‌ಗಳ ಪ್ರದರ್ಶನ ನೀಡಿದ್ದು, ಪ್ರೇಕ್ಷಕರ ಗಮನ ಸೆಳೆಯಿತು.

ಎನ್‌ಎಂಐಟಿಯ 40 ವಿದ್ಯಾರ್ಥಿಗಳ ಒಂದು ಗುಂಪು ಡಸ್ಸಾಲ್ಟ್ ಸಿಸ್ಟಮ್ಸ್‌ ನ ಕಾರ್ಪೊರೇಟ್ ಯೋಜನೆಯ ಅಡಿಯಲ್ಲಿ ಎಐ, ಎಂಎಲ್ ಅನ್ನು ಬಸಿಕೊಂಡು ಸ್ವಾರ್ಮ್ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.

ಕಾರ್ಯಕ್ರಮದಲ್ಲಿ ಎನ್‌ಎಂಐಟಿಯನ್ನು ಶ್ಲಾಘಿಸಿದ ಮುಖ್ಯ ಅತಿಥಿ ಎಂ ಎನ್ ಅನುಚೇತ್ ಅವರು, ಐಐಎಸ್‌ಸಿ, ಐಐಟಿಗಳಂತಹ ಪ್ರಮುಖ ಸಂಶೋಧನಾ ಸಂಸ್ಥೆಗಳು ಮತ್ತು ಎನ್‌ಎಂಐಟಿಯಂತಹ ಎಂಜಿನಿಯರಿಂಗ್ ಸಂಸ್ಥೆಗಳು, ದೇಶದ ಉದ್ಯಮದ ಪ್ರಮುಖರ ನಡುವಿನ ನಿಕಟ ಸಹಯೋಗವನ್ನು ನೋಡುವುದೇ ಸಂತೋಷ. ಡಸ್ಸಾಲ್ಟ್, ಹನಿವೆಲ್ ಮತ್ತಿತರ ಸಂಸ್ಥೆಗಳು ಅತ್ಯುತ್ತಮ ಲ್ಯಾಬ್ ಗಳನ್ನು ಹೊಂದಿದ್ದು, ಶೈಕ್ಷಣಿಕ-ಔದ್ಯಮಿಕ ಅಂತರವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ನಿಮ್ಮ ಕ್ರಿಯಾಶೀಲತೆಯ ಮೂಲಕ ಅಸ್ತಿತ್ವದಲ್ಲಿರುವ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಹಬೊಸ ತಂತ್ರಜ್ಞಾನವನ್ನು ರಚಿಸಲು ಹೇಗೆ ಪ್ರಯತ್ನ ಮಾಡುತ್ತೀರಿ ಅನ್ನುವುದು ನಿಮ್ಮನ್ನು ಬೇರೆಯವರಿಂದ ಪ್ರತ್ಯೇಕವಾಗಿಸುತ್ತದೆ. ಈ ಹೊಸ ತಂತ್ರಜ್ಞಾನವನ್ನು ಸಂಶೋಧಿಸಿದ ಡಾ. ಎನ್ ಪ್ರಹ್ಲಾದ್ ಟೆಂಗ್ಲಿ ನೇತೃತ್ವದ ಎನ್‌ಎಂಐಟಿಯ ತಂಡಕ್ಕೆ ಅಭಿನಂದನೆಗಳು. ನಾವು ಈ ತಂತ್ರಜ್ಞಾನವನ್ನು ವಿಮಾನ ನಿಲ್ದಾಣದ ರಸ್ತೆಯಲ್ಲಿ ಟಿಕೆಟ್ ನೀಡಲು ಮತ್ತು ಗಂಟೆಗೆ 80 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗ ಉಲ್ಲಂಘನೆಯ ಪ್ರಕರಣಗಳಲ್ಲಿ ಬಳಸುತ್ತೇವೆ ಎಂದು ಹೇಳಿದರು.

ಸಮೂಹ ತಂತ್ರಜ್ಞಾನದ ಮಹತ್ವವನ್ನು ವಿವರಿಸಿದ ಮಾಜಿ ಡಿಆರ್‌ಡಿಓ ಏರೋ ಸಿಸ್ಟಮ್ಸ್ ನಿರ್ದೇಶಕ, ಎನ್‌ಎಂಐಟಿಯ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಪ್ರೊಫೆಸರ್ ಡಾ. ಪಿ ಎನ್ ಟೆಂಗಳಿ, ಈ ಡ್ರೋನ್ ತಂತ್ರಜ್ಞಾನದ ಮೂಲಕ ಸಾಮಾಜಿಕ ಅಗತ್ಯಗಳಿಗೆ ಅತ್ಯಾಧುನಿಕ ವೈಮಾನಿಕ ಪರಿಹಾರ ಒದಗಿಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಸಾಲ್ಟ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕೈಗಾರಿಕಾ ಸಲಹೆಗಾರ ಹಿರಿಯ ನಿರ್ದೇಶಕ ಪ್ರವೀಣ್ ಮೈಸೂರು, ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್‌ನ ಕಾರ್ಯಕ್ರಮ ನಿರ್ದೇಶಕ ಹೇಮಂತ್ ಗಾಡ್ಗಿಲ್, ಯುಎಎಸ್- ಜಿಕೆವಿಕೆ ಸಂಶೋಧನಾ ನಿರ್ದೇಶಕ ಡಾ.ಶಿವರಾಮು, ಬೆಂಗಳೂರು ಎನ್‌ಎಂಐಟಿ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ನಿಟ್ಟೆ ಎಜುಕೇಶನ್ ಟ್ರಸ್ಟ್‌ ನ ಆಡಳಿತಾಧಿಕಾರಿ ರೋಹಿತ್ ಪೂಂಜ ಮತ್ತು ಕಾರ್ಪೊರೇಟ್ ರಿಲೇಷನ್ಸ್ ಡೈರೆಕ್ಟರ್ ಕೆ ಬಿ ರಾವ್ ಉಪಸ್ಥಿತರಿದ್ದರು.

2023ರ ಡಿಸೆಂಬರ್ ನಲ್ಲಿ ಎನ್ಎಂಐಟಿಯು ಟ್ರಾಫಿಕ್ ಸಮಸ್ಯೆಗಳನ್ನು ಪರಿಹಾರ ಮಾಡಲು ಡ್ರೋನ್‌ಗಳ ತಾಂತ್ರಿಕ ನೆರವನ್ನು ಒದಗಿಸುವ ಕುರಿತಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT