ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ NAGARAJAGADEKAL
ರಾಜ್ಯ

ದೇಶದ GDPಯಲ್ಲಿ ಶೇಕಡಾ 1.5ರಿಂದ 2.5ರಷ್ಟು ರಸ್ತೆ ಅಪಘಾತದಿಂದ ನಷ್ಟ: ನಿಮ್ಹಾನ್ಸ್ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ

ಚಾಲನೆ ಮಾಡುವ ಸವಾರರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ ಮತ್ತು ಸುರಕ್ಷತೆಗಳು ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ 18ರಿಂದ 50 ವರ್ಷದೊಳಗಿನವರೇ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

ಬೆಂಗಳೂರು: ದೇಶದ ಒಟ್ಟಾರೆ ಪ್ರಗತಿಯ(GDP) ಶೇಕಡಾ 1.5ರಿಂದ 2.5ರಷ್ಟು ರಸ್ತೆ ಅಪಘಾತದಿಂದ ನಷ್ಟವಾಗುತ್ತದೆ. ರಸ್ತೆ ಅಪಘಾತಗಳಲ್ಲಿ ಮೃತಪಡುವ ಶೇಕಡಾ 60ರಿಂದ 80ರಷ್ಟು ಮಂದಿ 19ರಿಂದ 50ವರ್ಷದೊಳಗಿನವರು. ದೇಶದ ಯುವಜನತೆ, ದುಡಿಯುವ ವರ್ಗ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವುದರಿಂದ ಅವರ ಕುಟುಂಬಸ್ಥರಿಗೆ ಮತ್ತು ಇಡೀ ಸಮಾಜಕ್ಕೆ ಇದು ತುಂಬಲಾರದ ನಷ್ಟವಾಗುತ್ತದೆ ಎಂದು ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ ಹೇಳಿದ್ದಾರೆ.

ಚಾಲನೆ ಮಾಡುವ ಸವಾರರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ ಮತ್ತು ಸುರಕ್ಷತೆಗಳು ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ 18ರಿಂದ 50 ವರ್ಷದೊಳಗಿನವರೇ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ವಾಹನ ಚಾಲನೆಯಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಕಾರಣವಾಗಿದೆ. 18 ವರ್ಷಕ್ಕಿಂತ ಕೆಳಗಿನವರು ಸಹ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಶೇಕಡಾ 50ರಷ್ಟು ಅಪಘಾತಗಳು ಹೆದ್ದಾರಿಗಳು, ನಗರದ ಹೊರವಲಯಗಳಲ್ಲಿ ಹೆಚ್ಚಾಗಿ ಆಗುತ್ತವೆ ಎಂದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಸಂಸ್ಥೆ(TNIE) Hero Motocorp ಸಹಯೋಗದಲ್ಲಿ ದೇಶಾದ್ಯಂತ ರಸ್ತೆ ಸುರಕ್ಷತಾ ರ್ಯಾಲಿ ಆಯೋಜಿಸಿದ್ದು ಅದರ ಅಂಗವಾಗಿ ಬೆಂಗಳೂರಿನ TNIE ಕಚೇರಿಯಲ್ಲಿ ಇಂದು ರ್ಯಾಲಿಗೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂಕಿಅಂಶಗಳು, ರಸ್ತೆ ಅಪಘಾತಗಳು, ವಾಹನ ಚಾಲಕರು ತಲೆಗೆ ಪೆಟ್ಟಾಗದಂತೆ ಮುಖ್ಯವಾಗಿ ತೆಗೆದುಕೊಳ್ಳಬೇಕಾದ ಸುರಕ್ಷತೆ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.

ಸಾಮಾನ್ಯವಾಗಿ ರಸ್ತೆ ಅಪಘಾತಗಳಾಗಿರುವುದನ್ನು ಕಂಡಾಗ ಜನರು ಫೋಟೋ ತೆಗೆಯುವುದು, ವಿಡಿಯೊ ಮಾಡುತ್ತಿರುತ್ತಾರೆ. ಆ ಕ್ಷಣದಲ್ಲಿ ಅಪಘಾತಕ್ಕೊಳಗಾದವರಿಗೆ ನೀಡಬೇಕಾದ ತಕ್ಷಣದ ನೆರವನ್ನು ಒದಗಿಸಬೇಕು. ರಸ್ತೆಯಲ್ಲಿ ವಾಹನ ಚಾಲನೆ ಮಾಡುವವರು, ಪಾದಚಾರಿಗಳಿಗೆ ಅವರದ್ದೇ ಆದ ಪಾಲಿಸೇಕಾದ ಕಾನೂನುಗಳಿರುತ್ತವೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಬಹುದು.

ಬೆಂಗಳೂರು ನಗರದ ವಾಹನ ದಟ್ಟಣೆಯಿಂದ 3 ಸಾವಿರಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರ ಓಡಾಟ ಕಡಿಮೆಯಿದ್ದುದರಿಂದ ರಸ್ತೆ ಅಪಘಾತಗಳು ಕಡಿಮೆಯಿದ್ದವು. ಆದರೆ ಈಗ ಮತ್ತೆ ಕೋವಿಡ್ ಪೂರ್ವೋತ್ತರದ ಪರಿಸ್ಥಿತಿಯೇ ಉಂಟಾಗಿದೆ ಎಂದರು.

ಜಿಲ್ಲೆಗಳಲ್ಲಿ ಕೂಡ ನಿಮ್ಹಾನ್ಸ್ ಶಾಖೆ ವಿಸ್ತರಿಸಿ: ಅಪಘಾತದಲ್ಲಿ ತಲೆಗೆ ಏಟಾದಾಗ ರೋಗಿಗಳನ್ನು ನಿಮ್ಹಾನ್ಸ್ ಗೆ ಕರೆದುಕೊಂಡು ಬಂದು ದಾಖಲಿಸುತ್ತಾರೆ. ಬೆಂಗಳೂರಿಗೆ ದೂರದ ಜಿಲ್ಲೆಗಳಿಂದ ಬರಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದ ರೋಗಿಗಳಿಗೆ ಅಪಾಯಗಳಾಗುವ ಸಾಧ್ಯತೆಯೇ ಹೆಚ್ಚು. ಜಿಲ್ಲಾ ಕೇಂದ್ರಗಳಲ್ಲಿ ಕೂಡ ಮೆದುಳಿನ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕೆಂದು ಡಾ ಪ್ರತಿಮಾ ಮೂರ್ತಿ ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT