ಹಾಸನ: ಆಲೂರು ತಾಲ್ಲೂಕಿನ ಮುತ್ತಿಗೆ ಗ್ರಾಮದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ನಾಲ್ವರ ಮಕ್ಕಳ ಕುಟುಂಬಕ್ಕೆ ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್ ರಾಜಣ್ಣ ಇಂದು ರೂ. 2 ಲಕ್ಷಗಳ ಪರಿಹಾರದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಮೇ. 16 ರಂದು ಯಾರು ಊಹಿಸದ ದುರ್ಘಟನೆ ನಡೆದಿದ್ದು ಒಂದೇ ಕೆರೆಯಲ್ಲಿ ಗ್ರಾಮದ ನಾಲ್ವರು ಮಕ್ಕಳು ಮೃತಪಟ್ಟಿರುವುದು ಬೇಸರದ ಸಂಗತಿ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಪರಿಹಾರ ನೀಡಲು ಆಗಿರಲಿಲ್ಲ ಆದುದರಿಂದ ಪರಿಹಾರ ವಿತರಣೆ ವಿಳಂಬವಾಗಿದೆ ಯಾರು ಅನ್ಯತಾ ಭಾವಿಸುವುದು ಬೇಡ ಎಂದರು.
ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಇದು ಶಾಶ್ವತ ಪರಿಹಾರ ಅಲ್ಲ, ಮೃತ ಮಕ್ಕಳ ಕುಟುಂಬಗಳಿಗೆ ಆಗಿರುವ ನಷ್ಟವನ್ನು ಭರಿಸುವ ಶಕ್ತಿ ಯಾರಿಗೂ ಇಲ್ಲ, ಆದರೆ ಸರ್ಕಾರ ಅವರ ಜೊತೆ ಇದೆ ಎಂಬ ನಿಟ್ಟಿನಲ್ಲಿ ಸಣ್ಣ ಮಟ್ಟದ ಪರಿಹಾರವನ್ನು ಮುಖ್ಯಂತ್ರಿಗಳು ಘೋಷಣೆ ಮಾಡಿದ್ದಾರೆ. ಜೊತೆಗೆ ಅವರಿಗೆ ಮನೆ ದುರಸ್ತಿ ಬಗ್ಗೆ ಕೂಡ ಕ್ರಮ ಕೈಗೊಳ್ಳಲು ಅಭಂದಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ, ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜಿತಾ ಸೇರಿದಂತೆ ಹಲವಾರು ಭಾಗಿಯಾಗಿದ್ದರು.