ಮಂಗಳೂರು: ಕಂಠಪೂರ್ತಿ ಕುಡಿದು ಓಲಾಡುತ್ತಾ ಬಂದ ವ್ಯಕ್ತಿಯನ್ನು ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇಗುಲದ ಆನೆ ಯಶಸ್ವಿನಿ (Elephant Yashaswini) ಎತ್ತಿ ಬಿಸಾಡಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple) ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಆನೆ ಸಮೀಪಕ್ಕೆ ಬರುತ್ತಿದ್ದ ವೇಳೆ ಮದ್ಯದ ವಾಸನೆ ಹಿಡಿಸಿದ ಆನೆ ಯಶಸ್ವಿನಿ ಆತನನ್ನು ಹಿಡಿದು ಬಿಸಾಡಿದೆ.
ಪೋಲೀಸರು ಆನೆಯೊಂದಿಗೆ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆನೆ ಎಸೆದ ರಭಸಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಆಘಾತವಾಗಿದೆ.
ಆನೆ ಎಸೆದ ರಭಸಕ್ಕೆ ವ್ಯಕ್ತಿ ನೆಲಕ್ಕೆ ಅಪ್ಪಳಿಸಿದ್ದು ಅದೃಷ್ಟವಶಾತ್ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ. ವ್ಯಕ್ತಿ ಕುಡಿತದ ಮತ್ತಿನಲ್ಲೇ ತೂರಾಡಿಕೊಂಡು ಬಂದಿರೋದ್ರಿಂದಲೇ ಆನೆ ಕೋಪಗೊಂಡು ಎತ್ತಿ ಬಿಸಾಡಿದೆ ಎನ್ನಲಾಗುತ್ತಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.