ಸಾಂದರ್ಭಿಕ ಚಿತ್ರ  
ರಾಜ್ಯ

ಕರ್ನಾಟಕದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇರುವ ಚಿರತೆಗಳ ಸಂಖ್ಯೆ 1,879

ವರದಿ ಪ್ರಕಾರ, 2018 ರಲ್ಲಿ, ಕರ್ನಾಟಕದಲ್ಲಿ 1,783 ಚಿರತೆಗಳಿದ್ದವು. ಈಗ ಅವುಗಳ ಸಂಖ್ಯೆ 96 ಏರಿಕೆಯಾಗಿದೆ.

ಬೆಂಗಳೂರು: ಕರ್ನಾಟಕದ ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ- ಅಂಶಿ ಮತ್ತು ಬಿಆರ್‌ಟಿಯ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕನಿಷ್ಠ 1,879 ಚಿರತೆಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ‘ಭಾರತದಲ್ಲಿ ಚಿರತೆಗಳ ಸ್ಥಿತಿ 2022’ ವರದಿ ಹೇಳುತ್ತದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ ಗುರುವಾರ ಅಂಕಿಅಂಶವನ್ನು ಬಿಡುಗಡೆ ಮಾಡಿದರು.

ವರದಿಯ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ಮಚ್ಚೆಯುಳ್ಳ ಚಿರತೆಗಳ ಸಂಖ್ಯೆಯನ್ನು ತೋರಿಸುತ್ತದೆ, ಕರ್ನಾಟಕ ಅರಣ್ಯ ಅಧಿಕಾರಿಗಳು ಸಮಾನ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶದ ಹೊರಗೆ ಅಲೆದಾಡುತ್ತಿದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಇದೆ ಎನ್ನುತ್ತಾರೆ.

2018ರಲ್ಲಿ, ಕರ್ನಾಟಕದಲ್ಲಿ 1,783 ಚಿರತೆಗಳನ್ನು ಎಣಿಕೆ ಮಾಡಿ ದಾಖಲಿಸಲಾಗಿದೆ. ಈಗ ಚಿರತೆಗಳ ಸಂಖ್ಯೆ 96 ಹೆಚ್ಚಾಗಿವೆ. ಇಡೀ ಪಶ್ಚಿಮ ಘಟ್ಟದ ಭೂದೃಶ್ಯವು 2022 ರಲ್ಲಿ 3,596 ಚಿರತೆಗಳನ್ನು ದಾಖಲಿಸಿದ್ದರೆ, 2018 ರಲ್ಲಿ, 3,387 ಎಂದು ವರದಿ ತೋರಿಸಿದೆ. ಭಾರತದಲ್ಲಿ 13,874 ಚಿರತೆಗಳಿವೆ, 2018 ರಲ್ಲಿ 12,852 ಚಿರತೆಗಳಿವೆ.

ಭಾರತದಲ್ಲಿನ 20 ರಾಜ್ಯಗಳಲ್ಲಿನ ಚಿರತೆಗಳ ಸಂಖ್ಯೆಯನ್ನು 6.41 ಲಕ್ಷ ಕಿಮೀ ವ್ಯಾಪಿಸಿರುವ ಕಾಲ್ನಡಿಗೆ ಸಮೀಕ್ಷೆಯಲ್ಲಿ ಅಧ್ಯಯನ ಮಾಡಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ: “ಪಶ್ಚಿಮ ಘಟ್ಟಗಳಲ್ಲಿ ಚಿರತೆ ಜನಸಂಖ್ಯೆಯು ವ್ಯಾಪಕವಾಗಿ ಹರಡಿದ್ದರೂ, ಇದು ಆವಾಸಸ್ಥಾನದ ನಷ್ಟ, ವಿಘಟನೆ ಮತ್ತು ಬೇಟೆಯಾಡುವಿಕೆಯ ಪರಿಣಾಮಗಳನ್ನು ಎದುರಿಸುತ್ತಿದೆ.

ಕರ್ನಾಟಕದ ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಖಾಡೆ, ಮೀಸಲು ಪ್ರದೇಶದಲ್ಲಿನ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಆಧರಿಸಿ ವರದಿಯಲ್ಲಿ ಚಿರತೆಗಳ ಸಂಖ್ಯೆಯನ್ನು ನಿರ್ಣಯಿಸಲಾಗಿದೆ ಎಂದು ವಿವರಿಸಿದರು.

ಚಿರತೆಗಳ ಸಂಖ್ಯೆಗಳಿಗಿಂತ ಪ್ರವೃತ್ತಿ ಮುಖ್ಯವಾಗಿದೆ. ಮಾಂಸಾಹಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಕಾಡುಗಳಲ್ಲಿ ಆರೋಗ್ಯಕರ ಬೇಟೆಯ ನೆಲೆಯೂ ಇದೆ ಎಂದು ತೋರಿಸುತ್ತದೆ. ಚಿರತೆಗಳು ಹೆಚ್ಚು ಹೊಂದಿಕೊಳ್ಳುವ ಪ್ರಾಣಿಗಳು, ಬೀದಿ ನಾಯಿಗಳ ಸಂಖ್ಯೆ ಮತ್ತು ಕಸಾಯಿಖಾನೆಗಳ ಸುತ್ತಲೂ ಹರಡಿರುವ ಮಾಂಸದಿಂದಾಗಿ ಅವು ನಗರ ಪ್ರದೇಶಗಳಲ್ಲಿ ಬದುಕುಳಿಯುತ್ತವೆ ಎಂದು ಹೇಳಿದರು.

ಪಶ್ಚಿಮ ಘಟ್ಟಗಳಲ್ಲಿನ ಚಿರತೆಗಳು ಸಾಮಾನ್ಯವಾಗಿ ಮಾನವ ಪ್ರಾಬಲ್ಯದ ಸ್ಥಳಗಳಲ್ಲಿ ವಾಸಿಸುತ್ತವೆ, ಚಿರತೆ-ಮಾನವ ಸಂಘರ್ಷವು ಇಡೀ ಭೂದೃಶ್ಯದಲ್ಲಿ ಪ್ರಚಲಿತವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ನೀಲಗಿರಿ ಕಾಡುಗಳು ಹೆಚ್ಚಿನ ಸಾಂದ್ರತೆಯ ಚಿರತೆಗಳನ್ನು (100 ಚದರ ಕಿ.ಮೀ.ಗೆ 13 ಚಿರತೆಗಳು) ಆಶ್ರಯಿಸಿದರೆ, ಚಿರತೆಗಳು ಕುರುಚಲು ಪ್ರದೇಶ, ಮಧ್ಯ ಕರ್ನಾಟಕದ ತೆರೆದ ಅರಣ್ಯ ಮೊಸಾಯಿಕ್ಸ್ ಅಥವಾ ದಕ್ಷಿಣ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ (100 ಚದರ ಕಿ.ಮೀ.ಗೆ 1) ಕಡಿಮೆ ಕಂಡುಬರುತ್ತವೆ.

ಮಧ್ಯ ಮತ್ತು ಉತ್ತರದ ಪಶ್ಚಿಮ ಘಟ್ಟಗಳಲ್ಲಿ, ಹುಲಿ ಸಂರಕ್ಷಿತ ಪ್ರದೇಶಗಳ (ಭದ್ರಾ, ಕಾಳಿ, ಮುದುಮಲೈ ಮತ್ತು ಸತ್ಯಮಂಗಲಂ) ಚಿರತೆಗಳ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT