ಸ್ಫೋಟ ನಂತರ ಪೊಲೀಸರಿಂದ ತನಿಖೆ 
ರಾಜ್ಯ

ರಾಮೇಶ್ವರಂ ಕೆಫೆ: ಸ್ಫೋಟಕ್ಕೆ ಮುನ್ನ ಬೀಪ್.. ಬೀಪ್.. ಶಬ್ದ ಕೇಳಿಸಿತು; ಪ್ರತ್ಯಕ್ಷದರ್ಶಿ ಹೇಳಿಕೆ

ಟೈಮರ್ ಸಾಧನದೊಂದಿಗೆ IEDಯನ್ನು ಬಳಸಲಾಗಿತ್ತು ಎಂದ ಪೊಲೀಸ್ ಮೂಲಗಳು

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ನಟ್ ಮತ್ತು ಬೋಲ್ಟ್‌ಗಳಿರುವ ಟೈಮರ್ ಆಧಾರಿತ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ಸ್ಫೋಟ ಮಾಡಿದ್ದು, ಗ್ರಾಹಕರು ಮತ್ತು ಉದ್ಯೋಗಿಗಳಿಗೆ ತಗುಲಿ 10 ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಫೋಟದ ನಂತರ ರಾಮೇಶ್ವರಂ ಕೆಫೆಯಲ್ಲಿ ಹೊಗೆ ಕಾಣಿಸಿಕೊಂಡಿತು, ಇದು ಕಡಿಮೆ-ತೀವ್ರತೆಯ IED ಎಂದು ದೃಢಪಟ್ಟಿದೆ. ಇಂಧನದೊಂದಿಗೆ ಅಥವಾ ಇಲ್ಲದೆಯೇ ಅಮೋನಿಯಂ ನೈಟ್ರೇಟ್, ಬಹುಶಃ ಡೀಸೆಲ್ ಮತ್ತು ಎಂಬೆಡೆಡ್ ಟೈಮರ್ ಸಾಧನ ಎಂದು ಶಂಕಿಸಲಾದ ಬಾಂಬ್‌ನ ಸಂಯೋಜನೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ವಿಶ್ಲೇಷಿಸುತ್ತಿದೆ. ಸ್ಫೋಟದಲ್ಲಿ ಟೈಮರ್ ಆವಿಯಾಗುತ್ತಿತ್ತು.ಸ್ಫೋಟದಲ್ಲಿ ಜೋರಾದ ಶಬ್ಧ ಉಂಟಾಗಿದ್ದರಿಂದ ಕೆಫೆಯಲ್ಲಿದ್ದ ಜನರಿಗೆ ಸ್ವಲ್ಪ ಸಮಯದವರೆಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ (DG and IGP) ಅಲೋಕ್ ಮೋಹನ್ ಅವರು ಇದು ಐಇಡಿ ಸ್ಫೋಟಕ ಎಂದು ಖಚಿತಪಡಿಸಿದ್ದಾರೆ. ಸ್ಫೋಟದ ತನಿಖೆಗಾಗಿ ಗುಪ್ತಚರ ಬ್ಯೂರೋ (IB) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಸ್ಫೋಟದ ನಂತರ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಸೇರಿದಂತೆ ಹಲವು ಪ್ರಮುಖ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ.

"ಸ್ಫೋಟದ ಹಿಂದಿನ ಸ್ಪಷ್ಟವಾಗಿಲ್ಲ. ಆದರೆ ಸರ್ಕಾರ ಮತ್ತು ಕಾನೂನು ಜಾರಿ ಮಾಡುವ ಪೊಲೀಸರಿಗೆ ಸಂದೇಶವನ್ನು ಕಳುಹಿಸುವುದು. ಸಂಸತ್ತಿನ ಚುನಾವಣೆಯ ಹೊಸ್ತಿಲಲ್ಲಿರುವ ಸಮಯದಲ್ಲಿ ಪ್ರಾಮುಖ್ಯ ಪಡೆದಿದೆ. ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೆಸರು ಹೇಳಲಿಚ್ಛಿಸದವರು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಯೋತ್ಪಾದನೆ ಸಂಬಂಧಿತ ಬಂಧನಗಳು ನಡೆದಿವೆ. ಕೆಲವು ರಹಸ್ಯ ಚಟುವಟಿಕೆಗಳು ನಡೆಯುತ್ತಿವೆ, ರಾಜ್ಯದಲ್ಲಿ ಪರಿಸ್ಥಿತಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಇದು ಸಾಕಷ್ಟು ಸೂಚನೆಯಾಗಿದೆ ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು: ಕಳೆದ ವರ್ಷ ಜುಲೈನಲ್ಲಿ, ಕೇಂದ್ರ ತನಿಖಾ ಏಜೆನ್ಸಿಗಳ ಮಾಹಿತಿಯ ಮೇರೆಗೆ ಬೆಂಗಳೂರು ನಗರ ಪೊಲೀಸರು ಆರ್‌ಟಿ ನಗರದಲ್ಲಿ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದರು. ಲಷ್ಕರ್-ಎ-ತೊಯ್ಬಾ-ಸಂಬಂಧಿತ ಖೈದಿ ಮತ್ತು 2008 ರ ಸರಣಿ ಸ್ಫೋಟ ಪ್ರಕರಣದ ಆರೋಪಿ ಕೇರಳದ ತಡಿಯಂಡವೆಡೆ ನಾಸಿರ್ ಬಂಧಿತನಾಗಿದ್ದ. ನವೆಂಬರ್ 2022 ರಲ್ಲಿ, ಐಸಿಸ್-ಪ್ರೇರಿತ ಭಯೋತ್ಪಾದಕ ಮೊಹಮ್ಮದ್ ಶಾರಿಕ್, ಮಂಗಳೂರಿನಲ್ಲಿ ಆಟೊರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಐಇಡಿಯನ್ನು ಹೊತ್ತೊಯ್ಯುತ್ತಿದ್ದಾಗ ಅದು ಸ್ಫೋಟಗೊಂಡಿತು. ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ಐಇಡಿ ಅಳವಡಿಸಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಶಾರಿಕ್ ಮತ್ತು ಆತನ ಸಹಚರ ಸೈಯದ್ ಯಾಸಿನ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. 2020 ರಲ್ಲಿ, ಶಾರಿಕ್ ಅವರ ಸಹಚರರೊಂದಿಗೆ ಮಂಗಳೂರು ನಗರದಲ್ಲಿ ಐಎಸ್ ನ್ನು ಬೆಂಬಲಿಸುವ ಭಯೋತ್ಪಾದನೆ ಪರ ಗೀಚುಬರಹಕ್ಕಾಗಿ ಕರ್ನಾಟಕ ಪೊಲೀಸರು ಬಂಧಿಸಿದ್ದರು. 2022ರ ಶಿವಮೊಗ್ಗ ಐಎಸ್ ಪಿತೂರಿ ಪ್ರಕರಣದಲ್ಲಿಯೂ ಈತನ ಹೆಸರಿದ್ದು, ಈವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದೆ.

ಸ್ಫೋಟದ ಮೊದಲು ಬೀಪ್ ಶಬ್ದ ಕೇಳಿದೆ ಪ್ರತ್ಯಕ್ಷದರ್ಶಿ ಮಾಹಿತಿ: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದ ಬಾಂಬ್ ಸ್ಫೋಟದಲ್ಲಿ ಗ್ರಾಹಕರು, ಸಿಬ್ಬಂದಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.

ರೆಸ್ಟೋರೆಂಟ್ ಉದ್ಯೋಗಿ ರಶೀದ್ ಹುಸೇನ್ ಘಟನೆ ಬಗ್ಗೆ ಮಾಹಿತಿ ನೀಡಿ “ಸ್ಫೋಟ ಸಂಭವಿಸಿದ ಹೊಟೇಲ್ ನ ಕೈತೊಳೆಯುವ ವಾಸ್ ಬೇಸಿನ್ ನ ಸಮೀಪದಲ್ಲಿ ಕುಳಿತಿದ್ದ ಮಹಿಳೆಗೆ ಗಂಭೀರ ಸುಟ್ಟ ಗಾಯಗಳಾಗಿವೆ. ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅವರನ್ನು ಕೂಡಲೇ ಬ್ರೂಕ್‌ಫೀಲ್ಡ್ ಆಸ್ಪತ್ರೆಗೆ ಸಾಗಿಸಿದೆವು. ಎಚ್‌ಎಎಲ್ ಪ್ರದೇಶದಲ್ಲಿ ನೆಲೆಸಿರುವ ಒಬ್ಬರಾದ ಸಾಫ್ಟ್‌ವೇರ್ ಇಂಜಿನಿಯರ್ ದ್ವೀಪಾಂಶು ಅವರು ರೆಸ್ಟೋರೆಂಟ್‌ನಲ್ಲಿ ಸಾಮಾನ್ಯ ಗ್ರಾಹಕರಾಗಿದ್ದಾರೆ. ಅವರ ಕಚೇರಿ ಸಮೀಪದಲ್ಲಿರುವುದರಿಂದ ಕೆಲಸದ ಸಮಯದ ನಡುವೆ ದಿನಕ್ಕೆ ಎರಡು ಬಾರಿ ಬರುತ್ತಾರೆ ಎಂದು ಹೇಳಿದರು.

ಎಂದಿನಂತೆ ನಿನ್ನೆ ಕೂಡ ಹೊಟೇಲ್ ಗೆ ಹೋಗಿದ್ದೆ, ಆದರೆ ಇದ್ದಕ್ಕಿದ್ದಂತೆ ನನ್ನ ಸಹೋದ್ಯೋಗಿಗಳು ಮತ್ತು ನಾನು ಬೀಪ್ ಶಬ್ದವನ್ನು ಕೇಳಿದೆವು. ಮುಂದಿನ ಕೆಲವು ನಿಮಿಷಗಳಲ್ಲಿ ಒಂದು ಸ್ಫೋಟ ಸಂಭವಿಸಿತು, ನಂತರ ಸುತ್ತಲೂ ಹೊಗೆ ಕಾಣಿಸಿಕೊಂಡಿತು ಎನ್ನುತ್ತಾರೆ ಸಾಫ್ಟ್ ವೇರ್ ಎಂಜಿನಿಯರ್ ದ್ವೀಪಾಂಶು.

ಅಸ್ಸಾಂ ಮೂಲದ ಫಾರೂಕ್ ಹುಸೇನ್ (19ವ) ಎಂಬ ಉಪಹಾರ ಗೃಹದ ಸಿಬ್ಬಂದಿಯ ಬಲಗೈಗೆ ಸುಟ್ಟಗಾಯಗಳಾಗಿದ್ದು, ಪ್ರಸ್ತುತ ವೈದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಬೆಳಿಗ್ಗೆ 6 ಗಂಟೆಯಿಂದ ಕೆಫೆಯಲ್ಲಿದ್ದೆ. ಸ್ಫೋಟ ಸಂಭವಿಸಿದಾಗ ನಾನು ಸ್ವಚ್ಛಗೊಳಿಸುತ್ತಿದ್ದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT