ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ 
ರಾಜ್ಯ

ಮಡಿಕೇರಿ: ವೇತನ ಪಾವತಿಗೆ ಆಗ್ರಹಿಸಿ ಫೆ. 29 ರಿಂದ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

Lingaraj Badiger

ಮಡಿಕೇರಿ: ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ 40ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಫೆಬ್ರುವರಿ 29 ರಿಂದ ತಮ್ಮ ನ್ಯಾಯಯುತ ವೇತನಕ್ಕೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಕಾಲೇಜಿನ ಉಪನ್ಯಾಸಕರು ವೇತನಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಕೊಡಗಿನ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ಒಂದಾಗಿದೆ ಮತ್ತು ಜಿಲ್ಲೆಯ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳ ಈ ಕಾಲೇಜ್ ಗೆ ಬರುತ್ತಾರೆ.

ಅತಿಥಿ ಅಧ್ಯಾಪಕರಿಂದಲೇ ಹೆಚ್ಚಿನ ವಿಷಯಗಳನ್ನು ಬೋಧಿಸಲಾಗುತ್ತಿದ್ದು, ಕಾಲೇಜು ಕೆಲವೇ ಕೆಲವು ಖಾಯಂ ಪೋಸ್ಟಿಂಗ್‌ಗಳನ್ನು ಮಾತ್ರ ಹೊಂದಿದೆ. ಆದರೆ, ಅತಿಥಿ ಉಪನ್ಯಾಸಕರಿಗೆ ಈ ವರ್ಷ ನವೆಂಬರ್‌ನಿಂದ ಸಂಬಳ ಬಂದಿಲ್ಲ. ಹೀಗಾಗಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

“ನಮ್ಮ ವೇತನ ಪಾವತಿಯ ಬಗ್ಗೆ ವಿಚಾರಿಸಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ತೆರಳಲು ನಾವು ನಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದೇವೆ. ಈ ಸಂಬಂಧ ನಮ್ಮ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ ಯಾವುದೇ ಉತ್ತರವಿಲ್ಲ ಮತ್ತು ನಮ್ಮನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ಪ್ರತಿಭಟನೆಗೆ ಮುಂದಾದೆವು. ಮೂರು ದಿನಗಳ ಪ್ರತಿಭಟನೆಯ ನಂತರ ವಿಶ್ವವಿದ್ಯಾಲಯವು ಅಕ್ಟೋಬರ್ ತಿಂಗಳ ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೂ ಫೆಬ್ರುವರಿವರೆಗೆ ಬಾಕಿ ಇರುವ ವೇತನ ಬಿಡುಗಡೆ ಮಾಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಒಂದು ವಾರದಿಂದ ಕಾಲೇಜು ಆವರಣದಲ್ಲಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಹೇಳಿದ್ದಾರೆ.

ವಿಶ್ವವಿದ್ಯಾಲಯದಿಂದ ನೇಮಕಗೊಂಡ ಇತರ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಅಧ್ಯಾಪಕರಿಗೆ ಜನವರಿವರೆಗೆ ವೇತನ ಪಾವತಿಸಲಾಗಿದೆ. ಆದರೆ ನಮ್ಮ ವಿಚಾರದಲ್ಲಿ ತಾರತಮ್ಯ ಏಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಈ ವರ್ಷದ ಸೆಮಿಸ್ಟರ್ ವೇತನದ ಹೊರತಾಗಿ, ಕೋವಿಡ್ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಇನ್ನೂ ಮೂರು ತಿಂಗಳ ವೇತನ ನಮಗೆ ಬಂದಿಲ್ಲ ಎಂದ ಉಪನ್ಯಾಸಕರು, ಮೌಲ್ಯಮಾಪನ ಮತ್ತು ಇತರ ಪರೀಕ್ಷೆಗಳಲ್ಲಿ ನಾವು ಅಧಿಕಾವಧಿ ಕೆಲಸ ಮಾಡಿದ್ದೇವೆ. ಆದರೆ ಎಷ್ಟು ದಿನ ಉಚಿತವಾಗಿ ಕೆಲಸ ಮಾಡಲು ಸಾಧ್ಯ?'' ಎಂದು ಪ್ರಶ್ನಿಸಿದ್ದಾರೆ.

SCROLL FOR NEXT