ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ತೀರ್ಪು: ಒತ್ತಡದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು

Sumana Upadhyaya

ಬೆಂಗಳೂರು: 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಅಧಿಸೂಚನೆಯನ್ನು ರದ್ದುಗೊಳಿಸಿರುವುದು ಮತ್ತು ನಂತರ ಕರ್ನಾಟಕ ಹೈಕೋರ್ಟ್‌ನ ತಡೆಯಾಜ್ಞೆ ನಡುವೆ ಮಾರ್ಚ್ ತಿಂಗಳ ಈ ಪರೀಕ್ಷಾ ಸಮಯದಲ್ಲಿ ಈ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗೊಂದಲ ಮತ್ತು ಆತಂಕದಲ್ಲಿ ಸಿಲುಕಿದ್ದಾರೆ.

ರಾಜ್ಯಾದ್ಯಂತ 45,000 ಶಾಲೆಗಳಿಂದ 28 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಗತಿಗಳಲ್ಲಿದ್ದು, ಸರ್ಕಾರದ ಅಧಿಸೂಚನೆಗಳು ಮತ್ತು ನ್ಯಾಯಾಲಯದ ಆದೇಶಗಳು ಬದಲಾಗುತ್ತಲೇ ಇರುವುದರಿಂದ ಅವರು ತಮ್ಮ ಪರೀಕ್ಷೆಗಳ ಮೇಲೆ ಸರಿಯಾಗಿ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆರೋಪಿಸುತ್ತಿದ್ದಾರೆ.

ಹೈಕೋರ್ಟ್ ನ ಏಕ ಸದಸ್ಯ ಪೀಠ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದ್ದರು. ಆದರೆ, ಇದನ್ನು ಸರಕಾರ ಪ್ರಶ್ನಿಸಿ ಎರಡು ದಿನಗಳ ಹಿಂದೆಯಷ್ಟೇ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್‌ ಪೀಠ ತೀರ್ಪನ್ನು ರದ್ದುಪಡಿಸಿ ಪರೀಕ್ಷೆಗಳನ್ನು ಮುಂದುವರಿಸಲು ಅವಕಾಶ ನೀಡಿತ್ತು.

ಶಿಕ್ಷಣತಜ್ಞರು ಮತ್ತು ಪೋಷಕರು ಹೈಕೋರ್ಟ್ ತೀರ್ಪಿನ ಗೊಂದಲದಿಂದ ಮಕ್ಕಳ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ ಮತ್ತು ನಕಲಿ ಮಾಹಿತಿ ರವಾನೆಯಾಗುತ್ತದೆ ಎನ್ನುತ್ತಾರೆ. ಮಕ್ಕಳ ಮನಸ್ಸುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಪ್ರಸ್ತುತ ಈ ತರಗತಿಗಳಿಗೆ ವೇಳಾಪಟ್ಟಿ ಪ್ರಕಾರ ಮಾರ್ಚ್ 11 ರಂದು ಪರೀಕ್ಷೆಗಳು ಪ್ರಾರಂಭವಾಗಲಿವೆ.

ಆರ್‌ಟಿಇ ಸೌಲಭ್ಯದಡಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಯೋಗಾನಂದ ಬಿಎನ್ ಅವರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ನಾಡಿದ್ದು ಸೋಮವಾರ ಬೆಳಿಗ್ಗೆ ಪ್ರಕರಣದ ವಿಚಾರಣೆಗೆ ಕಾಯುವುದಾಗಿ ಹೇಳಿದ್ದಾರೆ.

ಮುದ್ರಣ ಮಾಫಿಯಾಗಳಿಂದಾಗಿ ಸರ್ಕಾರವು ಈ ಪರೀಕ್ಷೆಗಳನ್ನು ಮುಂದೂಡುತ್ತಿದೆ ಎಂದು ಯೋಗಾನಂದ ಅವರು ಆರೋಪಿಸುತ್ತಾರೆ. ಇಲಾಖೆಯ ಅಧಿಕಾರಿಗಳು ಈ ಎಲ್ಲಾ ಗ್ರೇಡ್‌ಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುವುದರಿಂದ ಶೇಕಡಾ 40ರವರೆಗೆ ಕಮಿಷನ್ ಗಳಿಸಲು ಬಯಸುತ್ತಾರೆ. ಆದರೆ ಅವರ ಅನುಕೂಲಕ್ಕಾಗಿ, ವಿದ್ಯಾರ್ಥಿಗಳು ಹೆಚ್ಚಿನ ಒತ್ತಡ ಮತ್ತು ಬೋರ್ಡ್ ಪರೀಕ್ಷೆಗಳಿಗೆ ಒಳಗಾಗಬೇಕಾದ ಸನ್ನಿವೇಶವಿದೆ ಎನ್ನುತ್ತಾರೆ.

ಶಿಕ್ಷಣ ತಜ್ಞ ಕೆಇ ರಾಧಾಕೃಷ್ಣ, ಈ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಬುದ್ಧಿವಂತ ನಿರ್ಧಾರವಲ್ಲ ಎಂದು. ಈ ನಿಟ್ಟಿನಲ್ಲಿ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಾಧೀಶರ ಉತ್ತಮ ತೀರ್ಪು ನೀಡಿದ್ದರು ಎಂದರು.

“5ನೇ ತರಗತಿ ಮಕ್ಕಳಿಗೆ 10-11 ವರ್ಷವಾಗಿರುತ್ತದೆ. ಬೋರ್ಡ್ ಪರೀಕ್ಷೆ ಎಂದರೆ ಒತ್ತಡಕ್ಕೊಳಗಾಗಬೇಕಾಗುತ್ತದೆ. ಶಿಕ್ಷಣವೆಂದರೆ ಅಂಕಗಳ ಹಿಂದೆ ಓಡುವಂತೆ ಒತ್ತಡ ಹೇರುವುದು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಪೋಷಕರು ಅಂಕಗಳ ಹುಚ್ಚರಾಗುತ್ತಾರೆ. ತಮ್ಮ ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಾರೆ. ಸಮಸ್ಯೆಯ ಮೂಲ ಕಾರಣ ಶೈಕ್ಷಣಿಕ ಕ್ಷೇತ್ರವನ್ನು ಅಧಿಕಾರಶಾಹಿಗೆ ತಳ್ಳುವುದು, ಇದು ದೊಡ್ಡ ಸಾಮಾಜಿಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅವರು ಸಮಸ್ಯೆಯನ್ನು ತೆರೆದಿಟ್ಟರು.

SCROLL FOR NEXT