ಬಂಧನ (ಸಂಗ್ರಹ ಚಿತ್ರ)
ಬಂಧನ (ಸಂಗ್ರಹ ಚಿತ್ರ) 
ರಾಜ್ಯ

ಬಂಧನ: ಡ್ಯಾನ್ಸ್ ವೇಳೆ ಮೈತಾಕಿದ್ದಕ್ಕೆ ಯುವಕನ ಹತ್ಯೆ ಮಾಡಿದ್ದ ನಾಲ್ವರ ಬಂಧನ

Manjula VN

ಬೆಂಗಳೂರು: ಶಿವರಾತ್ರಿ ಹಬ್ಬದ ಉತ್ಸವದಲ್ಲಿ ನೃತ್ಯ ಮಾಡುವ ವೇಳೆ ಮೈತಾಕಿದ್ದಕ್ಕೆ ಯುವಕನ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ಗಿರಿನಗರ ನಿವಾಸಿಗಳಾದ ಚೇತನ್, ರಂಗ, ಪವನ್ ಹಾಗೂ ಅಪ್ರಾಪ್ತ ಬಾಲಕ ಬಂಧಿತರಾಗಿದ್ದಾರೆ. ಶಿವರಾತ್ರಿ ಹಬ್ಬದ ಶುಕ್ರವಾರ ರಾತ್ರಿ ಶ್ರೀನಗರ ನಿವಾಸಿ ಯೋಗೇಶ್ ಕುಮಾರ್ ಎಂಬಾತನಿಕೆ ಚಾಕುವಿನಿಂದ ಇರಿದು ಆರೋಪಿಗಳು ಹತ್ಯೆಗೈದಿದ್ದರು.

ಮೃತ ಯೋಗೇಶ್ ಮಂಡ್ಯ ಜಿಲ್ಲೆಯ ಕೊಪ್ಪ ಮೂಲದವನಾಗಿದ್ದು, ನಗರದಲ್ಲಿ ವಾಹನ ಸರ್ವೀಸ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡು ಶ್ರೀನಗರದಲ್ಲಿ ನೆಲೆಸಿದ್ದ. ಶಿವರಾತ್ರಿ ಹಬ್ಬದ ನಿಮಿತ್ತ ಮುನೇಶ್ವರ ಬ್ಲಾಕ್ ಲ್ಲಿದ್ದ ದೇವಾಲಯಕ್ಕೆ ರಾತ್ರಿ 1.30ರ ಸುಮಾರಿಗೆ ತೆರಳಿದ್ದ. ಆ ವೇಳೆ ತಮಟೆ ಶಬ್ಧಕ್ಕೆ ಕುಣಿಯುವಾಗ ಯೋಗೇಶ್ ಹಾಗೂ ಆರೋಪಿಗಳ ನಡುವೆ ಮೈತಾಕಿದ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಕೆರಳಿದ ಆರೋಪಿಗಳು ಯೋಗೇಶ್'ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.

ಮತ್ತೊಂದು ಮೂಲಗಳ ಪ್ರಕಾರ ಆರೋಪಿಗಳು ಯೋಗೇಶ್ ಬೆನ್ನಟ್ಟಿದಾಗ ಯೋಗೇಶ್ ತಪ್ಪಿಸಿಕೊಳ್ಳಲು ಓಡದ್ದು, ಈ ವೇಳೆ ಗೇಟ್ ವೊಂದನ್ನು ಜಿಗಿಯುವಾಗ ರಾಡ್ ಎದೆಗೆ ಚುಚ್ಚಿ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಯಲ್ಲು ಆರೋಪಿಗಳು ಯೋಗೇಶ್ ಬೆನ್ನಟ್ಟಿರುವುದು ಕಂಡು ಬಂದಿದೆ. ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಇದೀಗ ಆರೋಪಿಗಳನ್ನು ಪತ್ತೆ ಮಾಡಿದ್ದು, ಬಂಧನಕ್ಕೊಳಪಡಿಸಿದ್ದಾರೆ.

ಇನ್ನು ಕಾಟನ್ ಪೇಟೆಯಲ್ಲಿ ನಡೆದಿದ್ದ ರೌಡಿಶೀಟರ್ ಶಿವ (35) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಚಂದ್ರಶೇಖರ್ ಅಲಿಯಾಸ್ ಚೇತಾ, ಶೇಖರ್ ಅಲಿಯಾಸ್ ಡೋರಿ, ಮಣಿಕಂಠ ಅಲಿಯಾಸ್ ಮಣಿ, ಕಿರಣ್ ಅಲಿಯಾಸ್ ಚಿನ್ನಪ್ಪ, ಸ್ಟೀಫನ್ ಮತ್ತು ಸಿಂಬು ಎಂದು ಗುರ್ತಿಸಲಾಗಿದೆ.

ಜೂನ್ 2021 ರಲ್ಲಿ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಕೊಲೆಯಲ್ಲಿ ಸ್ಟೀಫನ್ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ,

ಶುಕ್ರವಾರ ರಾತ್ರಿ ಶಿವ ಮನೆಗೆ ವಾಪಸಾಗುತ್ತಿದ್ದಾಗ ಆತನಿಗಾಗಿಯೇ ಕಾದು ಕುಳಿತಿದ್ದ ಆರೋಪಿಗಳು ಚೂರಿ ಇರಿದು ಹತ್ಯೆ ಮಾಡಿದ್ದಾರೆ. ಹಳೆ ವೈಷಮ್ಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.

SCROLL FOR NEXT