ಬಳ್ಳಾರಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ
ಬಳ್ಳಾರಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ TNIE
ರಾಜ್ಯ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಗೆ ಮಹತ್ವದ ಸುಳಿವು, ಶಂಕಿತ ಬಳಸಿದ್ದ ದೂರವಾಣಿ ಕರೆ ಜಾಡು ಹಿಡಿದ ತನಿಖಾ ತಂಡ

Vishwanath S

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡವು ಇಂದು ಬೆಳಗ್ಗೆ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಶಬೀರ್ ಮೊಹಮ್ಮದ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.

ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಶಬ್ಬೀರ್ ಜತೆ ಮಾತನಾಡುತ್ತಿದ್ದ ಎಂದು ಎನ್ ಐಎ ತಂಡ ಶಂಕಿಸಿದೆ. ಎನ್‌ಐಎಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಶಂಕಿತ ಬಾಂಬರ್ ಮಾರ್ಚ್ 1 ರಂದು ಬೆಂಗಳೂರಿನಿಂದ ಹಿಂತಿರುಗಿದಾಗ ಶಬೀರ್ ಮೊಹಮ್ಮದ್ ಮಾತನಾಡಿದ್ದಾನೆ. ಈಗಾಗಲೇ ಎನ್‌ಐಎ ತಂಡ ಬಳ್ಳಾರಿಯ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದು, ಇದೀಗ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಶಬೀರ್‌ನನ್ನು ಬಂಧಿಸಿದೆ. ಶಂಕಿತ ಆರೋಪಿ ಮತ್ತು ಶಬೀರ್ ಮೊಹಮ್ಮದ್ ಬಳ್ಳಾರಿ ಬಸ್ ನಿಲ್ದಾಣದ ಬಳಿ ಸಂಭಾಷಣೆ ನಡೆಸಿದ್ದು, ನಂತರ ಆತ ತನ್ನ ಮೊಬೈಲ್ ಫೋನ್ ಬಳಸಿ ಇತರ ರಾಜ್ಯಗಳಲ್ಲಿ ನೆಲೆಸಿರುವ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಇತರರನ್ನು ಸಂಪರ್ಕಿಸಿದ್ದಾನೆ ಎಂದು ಎನ್ಐಎ ಹೇಳಿದೆ.

ಸಿಸಿಟಿವಿ ಫೋಟೋಗಳು ಮತ್ತು ಮಾಹಿತಿ ಸಂಗ್ರಹ ಪ್ರಕಾರ, ಸ್ಫೋಟದ ನಂತರ ಶಂಕಿತ ಆರೋಪಿ ನೇರವಾಗಿ ಬಳ್ಳಾರಿಗೆ ಬಂದಿದ್ದು ಆತನ ಚಲನವಲನಗಳನ್ನು ಕೆಎಸ್ಆರ್ಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸೆರೆಯಾಗಿದೆ. ಸದ್ಯ ಬಂಧಿತ ಶಬೀರ್ ಮೊಹಮದ್ ಕೌಲ್ ಬಜಾರ್ ನಿವಾಸಿಯಾಗಿದ್ದು, ತೋರಣಗಲ್ಲು ಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಈಗಾಗಲೇ ವಶಕ್ಕೆ ಪಡೆದಿರುವ ಮಿನಾಜ್ ಅಲಿಯಾಸ್ ಸುಲೇಮಾನ್ ಹೇಳಿಕೆಯ ಆಧಾರದ ಮೇಲೆ ಎನ್ಐಎ ಅಧಿಕಾರಿಗಳು ಬಳ್ಳಾರಿಗೆ ಬಂದು ಶಬೀರ್ ಮೊಹಮ್ಮದ್ ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಬಂಧಿತ ವ್ಯಕ್ತಿ ಮಿನಾಜ್ ಅವರ ಮನೆಯ ಪಕ್ಕದಲ್ಲಿ ಶಬೀರ್ ಮೊಹಮ್ಮದ್ ನೆಲೆಸಿದ್ದ. ಕಳೆದ ಒಂದು ವಾರದ ಹಿಂದೆ ಎನ್‌ಐಎ ತಂಡ ಬಳ್ಳಾರಿ ನಗರದಲ್ಲಿ ನೂರಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

SCROLL FOR NEXT