ಅಂಚೆ ಕಚೇರಿ (ಪ್ರಾತಿನಿಧಿಕ ಚಿತ್ರ)
ಅಂಚೆ ಕಚೇರಿ (ಪ್ರಾತಿನಿಧಿಕ ಚಿತ್ರ) 
ರಾಜ್ಯ

ರಾಜ್ಯದ ಆಯ್ದ ನಗರಗಳಲ್ಲಿ ಇನ್ಮುಂದೆ ಭಾನುವಾರವೂ ಅಂಚೆ ಕಚೇರಿಗಳು ಓಪನ್!

Ramyashree GN

ಬೆಂಗಳೂರು: ಕಚೇರಿಗೆ ತೆರಳುವವರ ಬೇಡಿಕೆಗೆ ಮಣಿದ ಕರ್ನಾಟಕ ಅಂಚೆ ಇಲಾಖೆಯು ಭಾನುವಾರದಂದು ರಾಜ್ಯದಾದ್ಯಂತ ಆಯ್ದ ಕೆಲವು ಅಂಚೆ ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಿದೆ. ವಾರದ ಯಾವುದೇ ಕೆಲಸದ ದಿನದಂದು ಅವುಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಾರ್ವಜನಿಕರು ವಾರದ ಎಲ್ಲಾ ದಿನಗಳಲ್ಲಿ ಕನಿಷ್ಠ ತಮ್ಮ ನಗರಗಳಲ್ಲಿ ಯಾವುದಾದರೂ ಸ್ಥಳದಲ್ಲಿ ಅಂಚೆ ಸೇವೆಗಳನ್ನು ಪಡೆಯಬಹುದು.

ಹಿರಿಯ ಅಂಚೆ ಅಧಿಕಾರಿಯೊಬ್ಬರು ಟಿಎನ್ಐಇ ಜೊತೆಗೆ ಮಾತನಾಡಿ, 'ಅಂತಹ ಕ್ರಮವನ್ನು ಪರಿಚಯಿಸಲು ನಾವು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸುತ್ತಿದ್ದೇವೆ. ಬೆಂಗಳೂರಿನ ಜಿಪಿಒನಲ್ಲಿ ಭಾನುವಾರ ಆರ್ಟಿಕಲ್ಸ್‌ಗಳನ್ನು ಬುಕ್ ಮಾಡುವ ಸೌಲಭ್ಯವಿದೆ. ಆದಾಗ್ಯೂ, ನಗದು ಠೇವಣಿ ಅಥವಾ ಉಳಿತಾಯ ಖಾತೆಗಳಿಂದ ಹಿಂತೆಗೆದುಕೊಳ್ಳುವಿಕೆ ಅಥವಾ ಮನಿ ಆರ್ಡರ್‌ಗಳ ಬುಕಿಂಗ್‌ನಂತಹ ಹಣಕಾಸಿನ ವಹಿವಾಟುಗಳನ್ನು ನೀಡಲಾಗುವುದಿಲ್ಲ ಎಂದರು.

ಭಾನುವಾರ ಕಾರ್ಯನಿರ್ವಹಿಸುವ ಅಂಚೆ ಕಚೇರಿಗಳಲ್ಲಿ ಹಣಕಾಸಿನ ಸೇವೆಗಳ ಅಗತ್ಯತೆಯನ್ನು ಸಾರ್ವಜನಿಕರು ಬಯಸುತ್ತಿದ್ದಾರೆ. ಆದ್ದರಿಂದ ನಾವು ಈಗ ಈ ಕ್ರಮದ ಕುರಿತು ಆಲೋಚಿಸುತ್ತಿದ್ದೇವೆ. ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಂತಹ ಬಹು ಅಂಚೆ ಕಚೇರಿಗಳನ್ನು ಹೊಂದಿರುವ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗುತ್ತದೆ.

'ಬೆಂಗಳೂರಿನಲ್ಲಿ, ನಾವು ಭಾನುವಾರ ಐದು ಅಂಚೆ ಕಚೇರಿಗಳ ಬಾಗಿಲು ತೆರೆಯಲು ಯೋಜಿಸಿದ್ದೇವೆ. ನಗರದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ ಒಂದು ಮತ್ತು ಕೇಂದ್ರ ವ್ಯಾಪಾರ ಜಿಲ್ಲೆಯಲ್ಲಿ ಒಂದನ್ನು ತೆರೆಯುವುದು ಸದ್ಯದ ನಮ್ಮ ಯೋಜನೆಯಾಗಿದೆ. ಇದಲ್ಲದೆ, ಈ ಅಂಚೆ ಕಚೇರಿಗಳನ್ನು ಬುಧವಾರದಂದು ಮುಚ್ಚಲು ನಾವು ಯೋಜಿಸಿದ್ದೇವೆ' ಎಂದು ಅಧಿಕಾರಿ ಹೇಳಿದರು.

'ರಾಜ್ಯದಾದ್ಯಂತ ನಿರ್ದಿಷ್ಟ ಅಂಚೆ ಕಚೇರಿಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ನಾವು ಈ ಯೋಜನೆಯೊಂದಿಗೆ ಮುಂದುವರಿಯುವ ಮೊದಲು ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯಲು ಮುಂದಾಗಿದ್ದೇವೆ' ಎಂದು ಅವರು ಹೇಳಿದರು.

ಕರ್ನಾಟಕ ಪೋಸ್ಟಲ್ ಸಾರ್ವಜನಿಕರಿಗೆ ನವೀನ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಉನ್ನತ ಸ್ಥಾನದಲ್ಲಿದೆ. ಧಾರವಾಡ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ನವೆಂಬರ್ 2022 ಮತ್ತು ಜನವರಿ 2023 ರಲ್ಲಿ ಸಂಜೆ ಅಂಚೆ ಕಚೇರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

SCROLL FOR NEXT