ನಾರಾಯಣಸ್ವಾಮಿ-ಗೋವಿಂದ ಕಾರಜೋಳ
ನಾರಾಯಣಸ್ವಾಮಿ-ಗೋವಿಂದ ಕಾರಜೋಳ PTI
ರಾಜ್ಯ

ಚಿತ್ರದುರ್ಗ ಬಿಜೆಪಿ ಟಿಕೆಟ್ ಘೋಷಣೆ: ಕೇಂದ್ರ ಸಚಿವ ನಾರಾಯಣಸ್ವಾಮಿ ಹೋರಾಟ ವ್ಯರ್ಥ, ಗೋವಿಂದ ಕಾರಜೋಳ ಕಣಕ್ಕೆ!

Vishwanath S

ಬೆಂಗಳೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ಬದಲಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಎಂ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿರುವ ನಾರಾಯಣಸ್ವಾಮಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಹೀಗಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ಮೂಲಗಳ ತಿಳಿಸಿವೆ.

ಚಿತ್ರದುರ್ಗ ಮೂಲದವರಲ್ಲದ ನಾರಾಯಣಸ್ವಾಮಿ ಈ ಹಿಂದೆ ಬೆಂಗಳೂರು ಸಮೀಪದ ಆನೇಕಲ್‌ನಿಂದ ಶಾಸಕರಾಗಿದ್ದರು.ಇನ್ನು ಒಟ್ಟು 28 ಕ್ಷೇತ್ರಗಳ ಪೈಕಿ ಬಿಜೆಪಿ ತಾನು ಸ್ಪರ್ಧಿಸಲಿರುವ ಎಲ್ಲಾ 25 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.ಉಳಿದ ಮೂರು ಸ್ಥಾನಗಳಾದ ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಎನ್‌ಡಿಎ ಮೈತ್ರಿಕೂಟ ಪಕ್ಷವಾದ ಜೆಡಿಎಸ್ ಸ್ಪರ್ಧಿಸಲಿದೆ.

ವಿಜಯಪುರ ಜಿಲ್ಲೆಯವರಾದ ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ಐದು ಬಾರಿ ಗೆಲುವು ಸಾಧಿಸಿದ್ದರು. 73 ವರ್ಷದ ಅವರು ಬಿಜೆಪಿ ಸರ್ಕಾರಗಳಲ್ಲಿ ವಿವಿಧ ಖಾತೆಗಳ ಸಚಿವರಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಮುಧೋಳದಿಂದ ಕಾರಜೋಳ ಅವುರ ಸೋಲು ಅನುಭವಿಸಿದ್ದರು. ಅವರ ವಿರುದ್ಧ ಆರ್ ಬಿ ತಿಮ್ಮಾಪುರ ಗೆಲುವು ಸಾಧಿಸಿದ್ದರು.

2019ರಲ್ಲಿ ನಾರಾಯಣಸ್ವಾಮಿ ವಿರುದ್ಧ ಸೋತಿದ್ದ ಬಿ ಎನ್ ಚಂದ್ರಪ್ಪ ಅವರನ್ನೇ ಮತ್ತೆ ಕಾಂಗ್ರೆಸ್ ಚಿತ್ರದುರ್ಗದಿಂದ ಕಣಕ್ಕಿಳಿಸಿದೆ. ಚಂದ್ರಪ್ಪ 2014ರಲ್ಲಿ ಚಿತ್ರದುರ್ಗದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

SCROLL FOR NEXT