ರಾಜ್ಯ

ಬೇಸಿಗೆಯ ಬಿರುಬಿಸಿಲು: ಮಕ್ಕಳಲ್ಲಿ ಶೇ 30ರಿಂದ 50ರಷ್ಟು ಜಲಸಂಬಂಧಿ ರೋಗಗಳು ಉಲ್ಬಣ

ಬೇಸಿಗೆಯ ಸೆಖೆ ಹೆಚ್ಚುತ್ತಿದ್ದು, ನೀರಿನ ಅಭಾವ ಉಲ್ಬಣಗೊಂಡಿದೆ. ಈ ನಡುವೆ ಮಕ್ಕಳಲ್ಲಿ ನೀರಿನಿಂದ ಹರಡುವ ರೋಗಗಳ ಪ್ರಕರಣಗಳು ಶೇ.30-50ರಷ್ಟು ಹೆಚ್ಚಾಗಿದೆ.

ಬೆಂಗಳೂರು: ಏಪ್ರಿಲ್ ತಿಂಗಳು ಕಾಲಿಡುತ್ತಿದ್ದಂತೆ ಬೇಸಿಗೆಯ ಸೆಖೆ ಹೆಚ್ಚುತ್ತಿದ್ದು, ನೀರಿನ ಅಭಾವ ಉಲ್ಬಣಗೊಂಡಿದೆ. ಈ ನಡುವೆ ಮಕ್ಕಳಲ್ಲಿ ನೀರಿನಿಂದ ಹರಡುವ ರೋಗಗಳ ಪ್ರಕರಣಗಳು ಶೇ.30-50ರಷ್ಟು ಹೆಚ್ಚಾಗಿದೆ. ನೀರಿನಿಂದ ಬರುವ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ಅನೇಕ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.

ಆಸ್ಟರ್ ಆಸ್ಪತ್ರೆಯ ಮುಖ್ಯ ಸಲಹೆಗಾರ್ತಿ ಮತ್ತು ಆಂತರಿಕ ಔಷಧಿ ವಿಭಾಗದ ಮುಖ್ಯ ವೈದ್ಯೆ ಡಾ. ಸುಚಿಸ್ಮಿತಾ ರಾಜಮಾನ್ಯ, ನೀರಿನಿಂದ ಹರಡುವ ರೋಗಗಳಿಂದ ಪ್ರತಿದಿನ ಒಬ್ಬಿಬ್ಬರು ಒಳರೋಗ ವಿಭಾಗಗಳಲ್ಲಿ ದಾಖಲಾಗುತ್ತಿರುವುದು ಸಾಮಾನ್ಯವಾಗಿದೆ.

ರೋಗಿಗಳು ಸಾಮಾನ್ಯವಾಗಿ ವಾಕರಿಕೆ, ವಾಂತಿ, ಅತಿಸಾರ, ಕಿಬ್ಬೊಟ್ಟೆಯ ಸೆಳೆತ, ಜ್ವರ ಮತ್ತು ನಿರ್ಜಲೀಕರಣದಂತಹ ರೋಗಲಕ್ಷಣಗಳನ್ನು ತೋರಿಸುತ್ತಾರೆ. ಈ ರೋಗಲಕ್ಷಣಗಳ ತೀವ್ರತೆಯು ಮಾಲಿನ್ಯದ ಮಟ್ಟ ಮತ್ತು ವ್ಯಕ್ತಿಯ ಪ್ರತಿರಕ್ಷಣಾ ಪ್ರತಿಕ್ರಿಯೆಯಿಂದ ಪ್ರಭಾವಿತವಾಗಿರುತ್ತದೆ.

ಅಡುಗೆ ಅಥವಾ ಕುಡಿಯಲು ಬಳಸುವ ನೀರಿನ ಸಂಭಾವ್ಯ ಮಾಲಿನ್ಯ ಮೂಲ ಕಾರಣವಿದೆ, ಇದು ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಆಶ್ರಯಿಸಬಹುದು. ಈ ರೋಗಕಾರಕಗಳು ಆಹಾರದಲ್ಲಿ ಕಲುಷಿತಗೊಂಡರೆ ತೀವ್ರ ಕಾಯಿಲೆ ಉಂಟುಮಾಡುತ್ತದೆ ಎಂದರು.

ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಆಹಾರ ವಿಷದ ಪ್ರಕರಣಗಳು ಹೆಚ್ಚಾಗುತ್ತವೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಆಹಾರ ಮಾಲಿನ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಇದನ್ನು ತಡೆಗಟ್ಟಲು ನೀರನ್ನು ಕುದಿಸಿ ಬಳಕೆಗೆ ನೀರಿನ ಮೂಲವನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ.

ಸ್ಪರ್ಶ ಆಸ್ಪತ್ರೆಯ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಸಮಾಲೋಚಕಿ ಡಾ.ಶ್ರುತಿ ಬದರಿನಾಥ್ ಪ್ರಣವ್, ಮಕ್ಕಳ ಮೇಲೆ ಶೇಕಡಾ 30ರಿಂದ ಶೇಕಡಾ 50ರಷ್ಟು ನೀರಿನ ಮೂಲಕ ಹರಡುವ ರೋಗವು ಉಲ್ಬಣಗೊಳ್ಳಲು ಬಿಸಿ ಮತ್ತು ಧೂಳಿನ ಪರಿಸ್ಥಿತಿಗಳು ಅಂತಹ ಹವಾಮಾನದಲ್ಲಿ ಪ್ರಚಲಿತದಲ್ಲಿರುವ ರೋಗಗಳ ಹರಡುವಿಕೆಗೆ ಕಾರಣವಾಗಿವೆ ಎನ್ನುತ್ತಾರೆ.

ನೀರಿನ ಮೂಲಕ ಹರಡುವ ಈ ಅನೇಕ ಕಾಯಿಲೆಗಳು, ತ್ವರಿತವಾಗಿ ಅಥವಾ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಕಾಯಿಲೆಗಳು ಸೌಮ್ಯ ಮಟ್ಟದಿಂದ ಮಾರಣಾಂತಿಕವಾಗಬಹುದು. ಅಸಮರ್ಪಕ ನೈರ್ಮಲ್ಯವು ಭೇದಿ, ಕಾಲರಾ ಮತ್ತು ಹೆಪಟೈಟಿಸ್ ಎ ಯಂತಹ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ.

ಕಲುಷಿತ ನೀರಿನಿಂದ ಉಂಟಾಗುವ ಹೊಟ್ಟೆಯ ಕಾಯಿಲೆಗಳಿಗೆ ಮಕ್ಕಳು ಹೆಚ್ಚು ಒಳಗಾಗುತ್ತಾರೆ, ಜ್ವರ, ವಾಕರಿಕೆ ಮತ್ತು ವಾಂತಿ ಮುಂತಾದ ರೋಗಲಕ್ಷಣಗಳನ್ನು ಅನುಭವಿಸಬಹುದು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕುಡಿಯಲು ಮತ್ತು ದೈನಂದಿನ ಬಳಕೆಗೆ ಶುದ್ಧ ನೀರು ಸೇವಿಸುವುದು ಮುಖ್ಯ ಎನ್ನುತ್ತಾರೆ ವೈದ್ಯರು.

ಬೇಸಿಗೆಯಲ್ಲಿ ಏನು ಮಾಡಬೇಕು, ಮಾಡಬಾರದು?:

  • ಕುದಿಸಿ ಆರಿಸಿದ ನೀರು ಸೇವನೆ ಮುಖ್ಯ

  • ನೀರಿನ ಸಂಗ್ರಹಕ್ಕಾಗಿ ಬಳಸುವ ಮೊದಲು ಕಂಟೇನರ್‌ಗಳು ಮತ್ತು ನೀರಿನ ಕ್ಯಾನ್‌ಗಳನ್ನು ಸ್ವಚ್ಛಗೊಳಿಸಿ.

  • ವಾಂತಿ, ಜ್ವರ ಅಥವಾ ಹೊಟ್ಟೆ ನೋವಿನಂತಹ ರೋಗಲಕ್ಷಣಗಳಿಂದ ಜಾಗ್ರತೆಯಾಗಿರಿ, ರೋಗಲಕ್ಷಣಗಳು ಮುಂದುವರಿದರೆ ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

  • ಚೆನ್ನಾಗಿ ಕುದಿಸಿ ಅಥವಾ ಚೆನ್ನಾಗಿ ಬೇಯಿಸದ ಹೊರತು ಹೊರಗಿನ ಆಹಾರವನ್ನು ಸೇವಿಸಬೇಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT