ಕಾಡುಗೋಡಿ ಕಾಡ್ಗಿಚ್ಚು
ಕಾಡುಗೋಡಿ ಕಾಡ್ಗಿಚ್ಚು 
ರಾಜ್ಯ

ಕಾಡುಗೋಡಿ ಕಾಡ್ಗಿಚ್ಚು: 'ಮೀಸಲು ಅರಣ್ಯದಲ್ಲಿ ಅಲ್ಲ.. ಖಾಸಗಿ ಜಾಗದಲ್ಲಿ ಬೆಂಕಿ ಅವಘಡ'; ಅಗ್ನಿಶಾಮಕ ದಳ ಸ್ಪಷ್ಟನೆ

Srinivasamurthy VN

ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಇರುವ ಕಾಡುಗೋಡಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ದುರಂತ ಸಂಭವಿಸಿ ಭಾರಿ ಪ್ರಮಾಣದಲ್ಲಿ ಹರಡಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿರುವ ಕರ್ನಾಟಕ ಅಗ್ನಿಶಾಮಕ ದಳ ಮೀಸಲು ಅರಣ್ಯದಲ್ಲಿ ಅಲ್ಲ.. ಖಾಸಗಿ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದೆ.

ಭಾನುವಾರ ಮಧ್ಯಾಹ್ನ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಇರುವ ಕಾಡುಗೋಡಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ದುರಂತ ಸಂಭವಿಸಿ ಬಾರಿ ಪ್ರಮಾಣದಲ್ಲಿ ಹರಡಿದೆ ಎಂದು ಹೇಳಲಾಗಿತ್ತು. ಭಾನುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಸುಮಾರು 700 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ವೈಟ್ ಫೀಲ್ಡ್ ಮುಖ್ಯರಸ್ತೆಯ ಐಟಿಪಿಎಲ್ ಮುಂಭಾಗದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ವ್ಯಾಪಿಸತೊಡಗಿದೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಲ್ಕಕ್ಕೂ ಅಧಿಕ ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕರ್ನಾಟಕ ಅಗ್ನಿಶಾಮಕ ದಳ ಸ್ಪಷ್ಟನೆ

ಇನ್ನು ಈ ವಿಚಾರ ಸುದ್ದಿಯಾಗುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಗ್ನಿಶಾಮಕ ದಳ ಇಲಾಖೆ ಮೀಸಲು ಅರಣ್ಯದಲ್ಲಿ ಅಲ್ಲ.. ಖಾಸಗಿ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ ಬೆಂಕಿ ಅವಘಡ ಸಂಭವಿಸಿರುವ ಸ್ಥಳಕ್ಕೆ ಅಧಿಕಾರಿಗಳು ಮೂರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಿದ್ದಾರೆ.

SCROLL FOR NEXT