ಸಾಂಕೇತಿಕ ಚಿತ್ರ  
ರಾಜ್ಯ

ಹವಾಮಾನ ಬದಲಾವಣೆ: ಕರ್ನಾಟಕ ಅರಣ್ಯದೊಳಗೆ ಅಧ್ಯಯನ ಮಾಡಲು 3 ಕ್ಯಾಮರಾ ನಿಯೋಜನೆ

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವುದು ಮತ್ತು ಅದರ ಪರಿಣಾಮವೂ ಕೂಡ ನಿಜವಾಗಿದೆ. ಇದನ್ನು ಪರಿಣಾಮಕಾರಿಯಾಗಿ ನಿರ್ಣಯಿಸಲು, ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಮೊದಲ ಬಾರಿಗೆ ಕರ್ನಾಟಕದ ಅರಣ್ಯಗಳಲ್ಲಿ ಕ್ಯಾಮರಾಗಳಲ್ಲಿ ನಿಯೋಜಿಸಲಾಗುತ್ತಿದೆ.

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವುದು ಮತ್ತು ಅದರ ಪರಿಣಾಮವೂ ಕೂಡ ನಿಜವಾಗಿದೆ. ಇದನ್ನು ಪರಿಣಾಮಕಾರಿಯಾಗಿ ನಿರ್ಣಯಿಸಲು, ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಮೊದಲ ಬಾರಿಗೆ ಕರ್ನಾಟಕದ ಅರಣ್ಯಗಳಲ್ಲಿ ಕ್ಯಾಮರಾಗಳಲ್ಲಿ ನಿಯೋಜಿಸಲಾಗುತ್ತಿದೆ.

ಕರ್ನಾಟಕವು ದುರ್ಬಲವಾದ ಮತ್ತು ಯುನೆಸ್ಕೋದಿಂದ ಗೊತ್ತುಪಡಿಸಿದ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ದೊಡ್ಡ ಭಾಗಕ್ಕೆ ನೆಲೆಯಾಗಿದೆ. ಹವಾಮಾನ ಬದಲಾವಣೆ, ಕ್ಷಿಪ್ರ ನಗರೀಕರಣ, ಹಸಿರು ಹೊದಿಕೆಯ ಕುಸಿತ ಮತ್ತು ಭೂ ಬಳಕೆಯಲ್ಲಿನ ಬದಲಾವಣೆಯ ಪ್ರಭಾವದಿಂದ ಘಟ್ಟ ಪ್ರದೇಶಗಳಲ್ಲಿ ಕೂಡ ಸಮಸ್ಯೆಯುಂಟಾಗುತ್ತಿದೆ.

ಹವಾಮಾನ ಬದಲಾವಣೆಯ ಪರಿಣಾಮವನ್ನು ಅಧ್ಯಯನ ಮಾಡಲು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಮತ್ತು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಐದು ವರ್ಷಗಳ ಅವಧಿಯ ಹವಾಮಾನ ಬದಲಾವಣೆಗೆ ಒಗ್ಗೂಡಿತು. ನಾಗರಹೊಳೆ, ದಾಂಡೇಲಿ ಮತ್ತು ಶಿವಮೊಗ್ಗದ ನಿತ್ಯಹರಿದ್ವರ್ಣ ಮತ್ತು ಒಣ ಎಲೆ ಉದುರುವ ಕಾಡುಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಧ್ಯಯನ ಮಾಡಲಾಗುತ್ತಿದೆ.

ಇದು 2023-24 ರಲ್ಲಿ ಪ್ರಾರಂಭವಾಗುವ ಐದು ವರ್ಷಗಳ ಅವಧಿಯ ಅಧ್ಯಯನವಾಗಿದೆ. ಕಳೆದ ವರ್ಷ, ಅಧ್ಯಯನಕ್ಕಾಗಿ ಬೇಸ್‌ಲೈನ್ ಡೇಟಾ ಬೇಸ್ ನ್ನು ಸಿದ್ಧಪಡಿಸಲಾಗಿದೆ, ಸ್ಥಳಗಳನ್ನು ಅಧ್ಯಯನ ಮಾಡಲಾಗಿದ್ದು ಪ್ರದೇಶಗಳನ್ನು ಗೊತ್ತುಪಡಿಸಲಾಗಿದೆ.

ಮೇ ಅಂತ್ಯದೊಳಗೆ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ಅಧ್ಯಯನಕ್ಕಾಗಿ ಗುರುತಿಸಲಾಗಿತ್ತು ಆದರೆ ಅಗತ್ಯ ಮಾನದಂಡಗಳಿಗೆ ಹೊಂದಿಕೆಯಾಗದ ಕಾರಣ ಕೈಬಿಡಲಾಯಿತು.

ಇಡೀ ಯೋಜನೆಗೆ 2.19 ಕೋಟಿ ವೆಚ್ಚವಾಗಿದ್ದು, ಪ್ರತಿ ಕ್ಯಾಮರಾಕ್ಕೆ 15 ಲಕ್ಷ ರೂಪಾಯಿಯಾಗುತ್ತಿದೆ. ಕಳ್ಳಬೇಟೆ ತಡೆ ಶಿಬಿರಗಳು ಮತ್ತು ತಪಾಸಣೆ ಬಂಗಲೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಪ್ರದೇಶದ ನೈಸರ್ಗಿಕ ಆವಾಸಸ್ಥಾನಕ್ಕೆ ತೊಂದರೆಯಾಗುತ್ತಿಲ್ಲ. ಅವುಗಳನ್ನು ಮೇಲಾವರಣ ಮಟ್ಟದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಅಧ್ಯಯನವನ್ನು ವರ್ಷದ ಎಲ್ಲಾ 365 ದಿನಗಳು, 24x7 ಮಾಡಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಏಜೆನ್ಸಿಗಳ ತಂಡಗಳು ಅಧ್ಯಯನದ ಭಾಗವಾಗಿದೆ. ಅವರು ಮೌಲ್ಯಮಾಪನಕ್ಕಾಗಿ ದೈನಂದಿನ ಆಧಾರದ ಮೇಲೆ ಡೇಟಾ ಮತ್ತು ಚಿತ್ರಗಳನ್ನು ಸಂಗ್ರಹಿಸುತ್ತಾರೆ. ಕಳೆದ ವರ್ಷ ಅಧ್ಯಯನಕ್ಕಾಗಿ ವಿವರವಾದ ಕಾರ್ಯಾಗಾರಗಳು ಮತ್ತು ತರಬೇತಿಗಳನ್ನು ಮಾಡಲಾಗಿದೆ.

ಕೃಷಿ, ತೋಟಗಾರಿಕೆ, ಇಂಧನ ಮತ್ತು ನೀರಾವರಿ ಸೇರಿದಂತೆ 42 ಸರ್ಕಾರಿ ಇಲಾಖೆಗಳು ಅಧ್ಯಯನದಲ್ಲಿ ತೊಡಗಿಸಿಕೊಂಡಿವೆ ಮತ್ತು EMPRI ನೋಡಲ್ ಏಜೆನ್ಸಿಯಾಗಲಿದೆ ಎಂದು ಅಧಿಕಾರಿ ಹೇಳಿದರು. ಪ್ರತಿ ಇಲಾಖೆಗೆ ಅಂಕಿಅಂಶ ಸಿದ್ಧಪಡಿಸಲು ತಿಳಿಸಲಾಗಿದೆ. ಈ ಅಧ್ಯಯನವು ಅವರ ವಲಯಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ, ಉತ್ತಮ ನಿರ್ವಹಣಾ ಯೋಜನೆಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಮೂಲಕ, ಮಣ್ಣು, ಪೋಷಕಾಂಶಗಳು, ಸಸ್ಯವರ್ಗ, ಎಲೆ ಬದಲಾವಣೆ ಮತ್ತು ಎಲೆಗಳ ಕಸ, ಮಣ್ಣಿನಲ್ಲಿರುವ ಇಂಗಾಲ, ಬೆಳೆ ಪದ್ಧತಿಯಲ್ಲಿನ ಬದಲಾವಣೆ, ಋತುವಿನ ಬದಲಾವಣೆ ಮತ್ತು ಋತುಮಾನದ ಪ್ರಭಾವವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT