ಸಾಂದರ್ಭಿಕ ಚಿತ್ರ 
ರಾಜ್ಯ

Bidar Moral Policing: ಮಹಿಳೆಗೆ ಆಟೊದಲ್ಲಿ ಡ್ರಾಪ್ ಕೊಟ್ಟ ಚಾಲಕನಿಗೆ ಥಳಿತ; ಮೂವರ ಬಂಧನ

ಮಹಿಳೆಗೆ ಆಟೊದಲ್ಲಿ ಡ್ರಾಪ್ ಕೊಟ್ಟ ಕಾರಣಕ್ಕೇ ಚಾಲಕನಿಗೆ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೀದರ್: ಮಹಿಳೆಗೆ ಆಟೊದಲ್ಲಿ ಡ್ರಾಪ್ ಕೊಟ್ಟ ಕಾರಣಕ್ಕೇ ಚಾಲಕನಿಗೆ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಸೈಯದ್ ಬಿಲಾಲ್, ತೌಸಿಫ್‌ ಅಯೂಬ್‌ ಚಾವುಸ್‌ ಹಾಗೂ ಸೈಯದ್‌ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ಖದೀರ್‌ ಖುರೇಶಿ ಹಾಗೂ ಮಗದೂಮ್‌ ಎಂಬ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌ ಅವರು, 'ಈ ಘಟನೆ ಏಪ್ರಿಲ್‌ 17ರಂದು ನಡೆದಿದೆ. ಆದರೆ, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ (ಮೇ 12) ಹರಡಿದೆ. ಕೆಲ ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನಿಬ್ಬರ ಪತ್ತೆ ಕಾರ್ಯ ನಡೆದಿದೆ’ ಎಂದು ತಿಳಿಸಿದರು.

ಆಟೊದಲ್ಲಿ ಡ್ರಾಪ್ ಕೊಟ್ಟದ್ದಕ್ಕೇ ಥಳಿತ

ಮೂಲಗಳ ಪ್ರಕಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ನಿವಾಸಿ ಅಶೋಕ ರೆಡ್ಡಿ ಪಾಂಡುರಂಗ ರೆಡ್ಡಿ ಪಿಚಾರೆ (42) ಎಂಬುವವರು ಏಪ್ರಿಲ್‌ 17ರಂದು ಮುಸ್ಲಿಂ ಮಹಿಳೆಯನ್ನು ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಅಶೋಕ ರೆಡ್ಡಿ ಪಾಂಡುರಂಗ ರೆಡ್ಡಿ ಪಿಚಾರೆ ಪ್ಯಾಸೆಂಜರ್‌ ಆಟೊ ಚಾಲಕನಾಗಿದ್ದು, ಏಪ್ರಿಲ್‌ 17ರಂದು ಪ್ರಯಾಣಿಕರನ್ನು ಬಸವಕಲ್ಯಾಣದಿಂದ ಕೌಡಿಯಾಳ ಗ್ರಾಮಕ್ಕೆ ಕರೆದೊಯ್ಯುವಾಗ ಅವರದೇ ಊರಿನ ಹಜರತ್‌ಬೀ ಹನ್ನುಮಿಯ್ಯಾ ಎಂಬುವರು ಕೂಡ ಆಟೊ ಹತ್ತಿದ್ದಾರೆ. ಬಳಿಕ ಸಾಲು ಮರದ ತಿಮ್ಮಕ್ಕ ಉದ್ಯಾನದ ಹತ್ತಿರ ಇಳಿದುಕೊಂಡಿದ್ಧಾರೆ.

ವಾಪಸ್‌ ಹೋಗುವಾಗ ಪುನಃ ನಿಮ್ಮ ಆಟೊದಲ್ಲಿಯೇ ಬರುವುದಾಗಿ ತಿಳಿಸಿದ್ದು, ಅದರಂತೆ ಅಶೋಕ ರೆಡ್ಡಿ ಮಧ್ಯಾಹ್ನ 1ಕ್ಕೆ ಹಜರತ್‌ಬೀ ಅವರನ್ನು ಆಟೊದಲ್ಲಿ ಹತ್ತಿಸಿಕೊಂಡು ಕರೆದೊಯ್ಯುವಾಗ ಐದು ಜನ ಮುಸ್ಲಿಂ ಯುವಕರು ಅಡ್ಡಗಟ್ಟಿ, ಮನಬಂದಂತೆ ಥಳಿಸಿ, ನಿಂದಿಸಿ, ಮತ್ತೊಮ್ಮೆ ಮುಸ್ಲಿಂ ಮಹಿಳೆಯರೊಂದಿಗೆ ತಿರುಗಾಡದಂತೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆ ಪ್ರಕರಣ ಸಂಬಂಧ ಸಂತ್ರಸ್ಥ ಚಾಲಕ ಬಸವಕಲ್ಯಾಣ ನಗರ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

SCROLL FOR NEXT