ಆರ್ ಪಿಎಫ್ ಸಾಂದರ್ಭಿಕ ಚಿತ್ರ 
ರಾಜ್ಯ

ಏಪ್ರಿಲ್‌ನಲ್ಲಿ RPF ನಿಂದ ರಾಜ್ಯದಾದ್ಯಂತ ರೈಲು, ನಿಲ್ದಾಣಗಳಿಂದ 4 ಬಾಲಕಿಯರು ಸೇರಿದಂತೆ 22 ಮಕ್ಕಳ ರಕ್ಷಣೆ

ಕಳೆದ ತಿಂಗಳು ನೈಋತ್ಯ ರೈಲ್ವೆ ವಲಯದಾದ್ಯಂತ 4 ಬಾಲಕಿಯರು ಸೇರಿದಂತೆ 22 ಮಕ್ಕಳನ್ನು ರಕ್ಷಿಸುವಲ್ಲಿ RPF ಪ್ರಮುಖ ಪಾತ್ರ ವಹಿಸಿದೆ. ನಾಪತ್ತೆಯಾದ ಮಕ್ಕಳ ರಕ್ಷಿಸಲು ವಿಶೇಷವಾಗಿ ರಚಿಸಲಾದ ಆರ್‌ಪಿಎಫ್‌ನ `ನನ್ಹೆ ಫರಿಷ್ಟೆ' ತಂಡ ಇದನ್ನು ಮಾಡಿದೆ.

ಬೆಂಗಳೂರು: ಕಳೆದ ತಿಂಗಳು ನೈಋತ್ಯ ರೈಲ್ವೆ ವಲಯದಾದ್ಯಂತ 4 ಬಾಲಕಿಯರು ಸೇರಿದಂತೆ 22 ಮಕ್ಕಳನ್ನು ರಕ್ಷಿಸುವಲ್ಲಿ RPF ಪ್ರಮುಖ ಪಾತ್ರ ವಹಿಸಿದೆ. ನಾಪತ್ತೆಯಾದ ಮಕ್ಕಳ ರಕ್ಷಿಸಲು ವಿಶೇಷವಾಗಿ ರಚಿಸಲಾದ ಆರ್‌ಪಿಎಫ್‌ನ `ನನ್ಹೆ ಫರಿಷ್ಟೆ' ತಂಡ ಇದನ್ನು ಮಾಡಿದೆ. ವಿವಿಧ ಕಾರಣಗಳಿಂದ ಮಕ್ಕಳು ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. RPF ಇನ್ನೊಂದು ಕಾರ್ಯಾಚರಣೆ 'ಉಪಲಬ್ಧ' ಅಡಿಯಲ್ಲಿ ರೂ. 13,67,887 ರೂಪಾಯಿ ಮೌಲ್ಯದ ಟಿಕೆಟ್‌ ಜಪ್ತಿ ಮಾಡಿದ್ದು, ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದ 24 ಮಂದಿಯನ್ನು ಬಂಧಿಸಿದೆ.

ರೈಲ್ವೆ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಹಾವಳಿ ತಡೆಗೆ ಕರ್ನಾಟಕ ಮತ್ತು ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳು/ಏಜೆಂಟ್‌ಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 23 ಪ್ರಕರಣಗಳಲ್ಲಿ 24 ಮಂದಿಯನ್ನು

ರೈಲ್ವೇ ಕಾಯ್ದೆಯ ಸೆಕ್ಷನ್ 143 ರ ಅಡಿಯಲ್ಲಿ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಒಟ್ಟು ರೂ. 2,88,515 ಮೌಲ್ಯದ 94 ನೇರ ಮುಂಗಡ ಟಿಕೆಟ್ ಮತ್ತು ರೂ. 10, 79, 371 ಮೌಲ್ಯದ ಬಳಕೆಯಾದ 751 ಟಿಕೆಟ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರ್‌ಪಿಎಫ್ ತನ್ನ `ಆಪರೇಷನ್ ನಾರ್ಕೋಸ್' ಅಡಿಯಲ್ಲಿ ಏಪ್ರಿಲ್‌ನಲ್ಲಿ ಆರು ಘಟನೆಗಳಲ್ಲಿ ಮೂವರನ್ನು ಬಂಧಿಸಿದ್ದು, ರೂ. 49,90,500 ಮೌಲ್ಯದ 50.88 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. "ಯಾತ್ರಿ ಸುರಕ್ಷಾ ಕಾರ್ಯಾಚರಣೆಯಡಿ ಪ್ರಯಾಣಿಕರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವ ಮೂವರು ಅಪರಾಧಿಗಳನ್ನು ಬಂಧಿಸಲಾಗಿದೆ. 106 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಪ್ರಯಾಣಿಕರಿಂದ ಕಳವು ಮಾಡಿದ್ದ 4.77 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.

70,000 ಮೌಲ್ಯದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ಹಿಂತಿರುಗಿಸಲಾಗಿದೆ. ಆಪರೇಷನ್ ಸತಾರ್ಕ್' ಅಡಿಯಲ್ಲಿ ಅಕ್ರಮ ಸರಕು ಸಾಗಣೆಗೆ ಕಡಿವಾಣ ಹಾಕಲಾಗಿದೆ. 42 ಘಟನೆಗಳಲ್ಲಿ ರೂ. 8,34,776 ಮೌಲ್ಯದ 961 ಮದ್ಯದ ಬಾಟಲಿಗಳು (7,67,799 ಮಿಲಿ) ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT